World Richest Billionaires 2023:ಕೆಲವು ಬಿಲಿಯನೇರ್‌ಗಳು ಸಾಕಷ್ಟು ಸಂಪಾದಿಸಿದರೆ ಕೆಲವರು ಸಾಕಷ್ಟು ನಷ್ಟ ಅನುಭವಿಸಿದ್ದೂ ಇದೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, 2023 ರಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿರುವ ವ್ಯಕ್ತಿ ಇವರೇ.
- ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ
- ಅಂಬಾನಿ ಈ ವರ್ಷ ಗಳಿಸಿದ ಹಣವೆಷ್ಟು?
- ಎಲಾನ್ ಮಸ್ಕ್ ಆಸ್ತಿ ಎಷ್ಟು ?
World Richest Billionaires 2023 : 2023ರ ಕೊನೆಯ ಹಂತಕ್ಕೆ ನಾವು ಬಂದು ನಿಂತಿದ್ದೇವೆ. ಈ ವರ್ಷ ಪ್ರಪಂಚದಾದ್ಯಂತ ನಾನಾ ಘಟನೆಗಳು ಘಟಿಸಿವೆ. ಆರ್ಥಿಕ ಹಿಂಜರಿತ, ರಷ್ಯಾ-ಉಕ್ರೇನ್ ಯುದ್ಧ, ಇಸ್ರೇಲ್-ಹಮಾಸ್ ಯುದ್ಧ ಹೀಗೆ ಬಹಳಷ್ಟು ನೋವುಗಳನ್ನು ಕಂಡ ವರ್ಷ ಇದು. ಇನ್ನು ಕೆಲವು ಬಿಲಿಯನೇರ್‌ಗಳು ಸಾಕಷ್ಟು ಸಂಪಾದಿಸಿದರೆ ಕೆಲವರು ಸಾಕಷ್ಟು ನಷ್ಟ ಅನುಭವಿಸಿದ್ದೂ ಇದೆ. ಈ ವರ್ಷಾಂತ್ಯಕ್ಕೆ ಮುನ್ನ ವಿಶ್ವದ ಕೋಟ್ಯಾಧಿಪತಿಗಳ ಸಂಪತ್ತನ್ನು ಗಮನಿಸಿದರೆ, ಟೆಸ್ಲಾ, ಸ್ಪೇಸ್‌ಎಕ್ಸ್, ಎಕ್ಸ್ ಮಾಲೀಕ ಎಲೋನ್ ಮಸ್ಕ್ ಈ ವರ್ಷ ಅತಿ ಹೆಚ್ಚು ಸಂಪಾದನೆ ಮಾಡಿದ ವ್ಯಕ್ತಿಯಾಗಿದ್ದಾರೆ. ಮಸ್ಕ್ ಅವರು ಎಕ್ಸ್ ( ಟ್ವಿಟರ್) ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳಲ್ಲಿ ಭಾಗಿಯಾಗಿದ್ದರು. ಆದರೆ ಈ ವರ್ಷದ ಗಳಿಕೆಯ ವಿಚಾರಕ್ಕೆ ಬಂದರೆ ಮಸ್ಕ್ ಎಲ್ಲರನ್ನು ಹಿಂದಟ್ಟಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಲಿಯನೇರ್‌ಗಳ ಪಟ್ಟಿಯ ಪ್ರಕಾರ, 2023 ರಲ್ಲಿ ಎಲೋನ್ ಮಸ್ಕ್ 9 7.8 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಈ ಆದಾಯವು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಒಟ್ಟು ಆದಾಯಕ್ಕಿಂತ ಹೆಚ್ಚು.
ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ :
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಎಲೋನ್ ಮಸ್ಕ್ 2023 ರಲ್ಲಿ $97.8 ಬಿಲಿಯನ್ ಗಳಿಸಿದ್ದಾರೆ. ಅವರ ಒಟ್ಟು ಗಳಿಕೆ 236 ಬಿಲಿಯನ್ ಡಾಲರ್ ತಲುಪಿದೆ. ಈ ಬೃಹತ್ ಸಂಪತ್ತಿನಿಂದ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾರೆ. ಎಲೋನ್ ಮಸ್ಕ್ ತನ್ನ ವ್ಯವಹಾರವನ್ನು ಒಂದರ ನಂತರ ಒಂದರಂತೆ ವಿಸ್ತರಿಸುತ್ತಿದ್ದಾರೆ. ಟೆಸ್ಲಾ ಅವರ ಕನಸಿನ ಕಂಪನಿಯಾಗಿದೆ. ಇದನ್ನೂ ಭಾರತಕ್ಕೆ ತರುವ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಭಾರತದೊಂದಿಗೆ ಮಾತುಕತೆ ನಡೆಯುತ್ತಿದೆ.
ಅಂಬಾನಿ ಈ ವರ್ಷ ಗಳಿಸಿದ ಹಣವೆಷ್ಟು? :
ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ 2023 ರಲ್ಲಿ 9.7 ಬಿಲಿಯನ್ ಡಾಲರ್ ಗಳಿಸಿದ್ದಾರೆ. ಈ ಗಳಿಕೆಯೊಂದಿಗೆ, ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯವು 96.2 ಬಿಲಿಯನ್ ಡಾಲರ್ ತಲುಪಿದೆ. ಅಂಬಾನಿ ನಂತರ, ಭಾರತದ ಎರಡನೇ ಶ್ರೀಮಂತ ಉದ್ಯಮಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ. ಹಿಂಡೆನ್‌ಬರ್ಗ್‌ನ ದಾಳಿಯ ಹೊರತಾಗಿಯೂ, ಗೌತಮ್ ಅದಾನಿ ಕಂ ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಈ ವರ್ಷ ಅದಾನಿ 36.3 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಕಳೆದುಕೊಂಡಿದ್ದಾರೆ. ಅವರ ಒಟ್ಟು ಸಂಪತ್ತು 84.3 ಶತಕೋಟಿ ಡಾಲರ್ ಆಗಿದೆ. ಅವರು ವಿಶ್ವದಾದ್ಯಂತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ 15 ನೇ ಸ್ಥಾನದಲ್ಲಿದ್ದಾರೆ.
Source : https://zeenews.india.com/kannada/business/most-earned-business-man-in-2023-elon-musk-179357
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1