ಬೆಂಗಳೂರು: ಸಂಸದೆ ಸುಮಲತಾ ಬಿಜೆಪಿ ಸೇರ್ತಾರೆ ಅನ್ನೋ ಮಾತು ಹೀಗಿನದ್ದಲ್ಲ. ಬಹಳ ತಿಂಗಳುಗಳಿಂದ ಈ ವಿಚಾರ ಚರ್ಚೆಯಾಗುತ್ತಲೆ ಇದೆ. ಹಾಗಂತ ಸುಮಲತಾಕೂಡ ಇಲ್ಲ ಅಂತೇನು ಹೇಳಿಲ್ಲ, ಬದಲಿಗೆ ಜನಾಭಿಪ್ರಾಯ ಮುಖ್ಯ ಅನ್ನೋ ಮಾತನ್ನು ಹೇಳ್ತಾ ಇದ್ದಾರೆ. ಅದರ ಜೊತೆಗೆ ಆಗಾಗ ಬಿಜೆಪಿ ನಾಯಕರ ಜೊತೆಗೆ ಗುರುತಿಸಿಕೊಂಡು ಸುದ್ದಿಯಾಗ್ತಾ ಇರುತ್ತಾರೆ.
ಆದ್ರೆ ಇತ್ತಿಚಿನ ಬೆಳವಣಿಗೆ ನೋಡ್ತಾ ಸುಮಲತಾ ಮನಸ್ಸಲ್ಲಿ ಬಿಜೆಪಿ ಸೇರುವ ಹಂಬಲವಿದೆ ಎಂಬ ಚರ್ಚೆಯಾಗ್ತಾ ಇದೆ. ಈ ಬಾರಿ ಮೋದಿ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಸೇರ್ಪಡೆಯಾಗ್ತಾರೆ ಎಂಬ ಮಾತು ಕೂಡ ಕೇಳಿ ಬರ್ತಾ ಇದೆ. ನಿನ್ನೆಯಷ್ಟೇ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಗುರುತಿಸಿಕೊಂಡಿದ್ದರು. ಜೊತೆಗೆ ಮೋದಿಯವರ ಬಗ್ಗೆ ಹಾಡಿ ಹೊಗಳಿದ್ದರು. ಇದೀಗ ಇಂದು ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಬಮನದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಇಂದು ಎಸ್ ಎಂ ಕೃಷ್ಣ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಸುಮಲತಾ, ಕೃಷ್ಣ ಅವರು ನಮ್ಮ ಹಿರಿಯ ನಾಯಕರು. ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಬಂದಿದೆ. ಇವತ್ತು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಇವತ್ತು ಮಂಡ್ಯದಿಂದ ಹಲವರು ಬಂದಿದ್ದಾರೆ. ಎಲ್ಲರ ಜೊತೆಗೆ ಚರ್ಚೆ ಮಾಡ್ತೇನೆ. ನಾನು ಇನ್ನು ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
The post ಸುಮಲತಾ ಇಂದು ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿದ್ದೇಕೆ..? first appeared on Kannada News | suddione.
from ರಾಜ್ಯ ಸುದ್ದಿ – Kannada News | suddione https://ift.tt/CLMRmrt
via IFTTT