ಕೋಲಾರದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿಕೆ ಶಿವಕುಮಾರ್ ಆಪ್ತ ಸ್ಪರ್ಧೆ ಮಾಡ್ತಾರಾ..?

ಕೋಲಾರ: ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಯೇ ಗೊಂದಲದ ಗೂಡಾಗಿತ್ತು. ಬಳಿಕ ನಾನು ಕೋಲಾರದಲ್ಲಿಯೇ ನಿಲ್ಲುತ್ತೇನೆ ಎಂದು ಓಡಾಟ ಕೂಡ ನಡೆಸಿದ್ದರು. ಆದರೆ ಹೈಕಮಾಂಡ್ ಅಲ್ಲಿ ನಿಲ್ಲುವುದು ಬೇಡ, ಸೇಫೆಸ್ಟ್ ಜಾಗ ನೋಡಿಕೊಳ್ಳಿ. ನಿಮ್ಮ ಗೆಲುವು ನಮಗೆ ತುಂಬಾ ಮುಖ್ಯ ಎಂದು ಸಲಹೆ ನೀಡಿದ್ದಾರೆ. ಈ ಬೆನ್ನಲ್ಲೆ ಈಗ ಕೋಲಾರದ ಸ್ಪರ್ಧೆ ಚರ್ಚೆಯಾಗ್ತಾ ಇದೆ.

ಕೋಲಾರದಲ್ಲಿ ಸಿದ್ದರಾಮಯ್ಯ ನಿಲ್ಲಲ್ಲ ಅಂದ್ರೆ ಬೇರೆ ಯಾರಿಗೆ ಟಿಕೆಟ್ ಎಂಬ ಪ್ರಶ್ನೆಯ ಜೊತೆಗೆ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಾ ಇದೆ. ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ತಾರೆ ಎಂದಿದ್ದಕ್ಕೆ ತಣ್ಣಗಾಗಿದ್ದ ಆಕಾಂಕ್ಷಿಗಳು ಈಗ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ಡಿಕೆ ಶಿವಕುಮಾರ್ ತಮ್ಮ ದಾಳ ಉರುಳಿಸುವುದಕ್ಕೆ ಶುರು ಮಾಡಿದ್ದಾರೆ.

ಕೋಲಾರಕ್ಕೆ ಎಂಟ್ರಿ ಕೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ತನ್ನ ಆಪ್ತನನ್ನು ಕಣಕ್ಕೆ ಇಳಿಸಲು ಯೋಜನೆ ರೂಪಿಸಿದ್ದಾರೆ. ಬ್ಯಾಲನಹಳ್ಳಿ ಗೋವಿಂದೇಗೌಡ ಅವರಿಗೆ ಚುನಾವಣೆಗೆ ಸಿದ್ಧರಾಗುವಂತೆ ಸೂಚನೆ‌ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು. ಗೋವಿಂದೇಗೌಡ ಅವರು ಸಿದ್ದರಾಮಯ್ಯ ಅವರಿಗೂ ಆಪ್ತರಾಗಿದ್ದಾರೆ.

The post ಕೋಲಾರದಲ್ಲಿ ಸಿದ್ದರಾಮಯ್ಯ ಬದಲಿಗೆ ಡಿಕೆ ಶಿವಕುಮಾರ್ ಆಪ್ತ ಸ್ಪರ್ಧೆ ಮಾಡ್ತಾರಾ..? first appeared on Kannada News | suddione.

from ರಾಜ್ಯ ಸುದ್ದಿ – Kannada News | suddione https://ift.tt/WK3lf9R
via IFTTT

Leave a Reply

Your email address will not be published. Required fields are marked *