IPL 2023: ಮತ್ತೆ ಮುಖಾಮುಖಿಯಾಗಲಿದೆಯಾ RCB vs LSG

IPL 2023: ಐಪಿಎಲ್​ನಲ್ಲಿನ ಮದಗಜಗಳ ಕಾದಾಟಕ್ಕೆ ಮತ್ತೆರಡು ತಂಡಗಳು ಸೇರ್ಪಡೆಯಾಗಿದೆ. ಈ ಹಿಂದೆ CSK ತಂಡವನ್ನು ಮಾತ್ರ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿ ಕಾಣುತ್ತಿದ್ದ RCB ಗೆ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಹೊಸ ಪ್ರತಿಸ್ಫರ್ಧಿಯಾಗಿ ಮಾರ್ಪಟ್ಟಿದೆ.ಇದಕ್ಕೆ ಕಾರಣ ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದ RCB vs LSG ನಡುವಣ ಪಂದ್ಯ. ಈ ಪಂದ್ಯದಲ್ಲಿ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿದ ಲಕ್ನೋ ಆಟಗಾರರು ಮೈಮರೆತು ಸಂಭ್ರಮಿಸಿದ್ದರು. ಅಲ್ಲದೆ LSG ತಂಡದ ಮೆಂಟರ್ ಗೌತಮ್ ಗಂಭೀರ್ ಆರ್​ಸಿಬಿ ಅಭಿಮಾನಿಗಳನ್ನು ಕೆಣಕಿದ್ದರು.ಆದರೆ ನಿರೀಕ್ಷೆಯಂತೆ 2ನೇ ಮುಖಾಮುಖಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಸೇಡು ತೀರಿಸಿಕೊಂಡಿದೆ. ಅದರಲ್ಲೂ ಮುಟ್ಟಿ ನೋಡಿಕೊಳ್ಳುವಂತಹ ಸಂಭ್ರಮದ ಮೂಲಕ ವಿರಾಟ್ ಕೊಹ್ಲಿ ಲೆಕ್ಕ ಚುಕ್ತಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆ ಬಳಿಕ ಮಾತಿನ ಚಕಮಕಿ ಕೂಡ ನಡೆದಿದೆ.
ಇದರೊಂದಿಗೆ ಗೂಗಲ್​ನಲ್ಲಿ ಉಭಯ ತಂಡಗಳ ಮುಂದಿನ ಪಂದ್ಯ ಯಾವಾಗ ಎಂಬ ಹುಡುಕಾಟ ಶುರುವಾಗಿದೆ. ಆದರೆ LSG vs RCB ಸದ್ಯಕ್ಕಂತು ಮುಖಾಮುಖಿಯಾಗುವುದಿಲ್ಲ. ಏಕೆಂದರೆ ಉಭಯ ತಂಡಗಳ ಲೀಗ್​ ಹಂತದ 2 ಪಂದ್ಯಗಳು ಪೂರ್ಣಗೊಂಡಿದೆ.ಇನ್ನೇನಿದ್ದರೂ ಪ್ಲೇಆಫ್​ವರೆಗೂ ಕಾಯಲೇಬೇಕು. ಅಂದರೆ ಆರ್​ಸಿಬಿ  ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಂದಿನ ಪಂದ್ಯಗಳನ್ನು ಗೆದ್ದು ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳಬೇಕು. ಇದರಿಂದ ಕ್ವಾಲಿಫೈಯರ್ ಅಥವಾ ಎಲಿಮಿನೇಟರ್ ಪಂದ್ಯವಾಡುವ ಅವಕಾಶ ದೊರೆಯಬಹುದು. ಇದಲ್ಲದೆ ಫೈನಲ್​ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಆಫ್​ ಹಂತಕ್ಕೇರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಆ ಬಳಿಕವಷ್ಟೇ ಉಭಯ ತಂಡಗಳ ಮುಖಾಮುಖಿ ನಿರ್ಧಾರವಾಗಲಿದೆ.ಇದಲ್ಲದೆ ಫೈನಲ್​ನಲ್ಲೂ ಮುಖಾಮುಖಿಯಾಗುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್​ ಪ್ಲೇಆಫ್​ ಹಂತಕ್ಕೇರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಆ ಬಳಿಕವಷ್ಟೇ ಉಭಯ ತಂಡಗಳ ಮುಖಾಮುಖಿ ನಿರ್ಧಾರವಾಗಲಿದೆ.

source https://tv9kannada.com/photo-gallery/cricket-photos/ipl-2023-rcb-vs-lsg-next-match-kannada-news-zp-568722.html

Leave a Reply

Your email address will not be published. Required fields are marked *