ಕಾರ್ಲೋಸ್ ಅಲ್ಕಾರಝ್ ಭಾನುವಾರದಂದು ನಡೆದ ಐದು ಸೆಟ್ಗಳ ರೋಚಕ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕಾರಝ್ 1-6, 7-6 (8/6), 6-1, 3-6, 6-4 ಗೇಮ್ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಡನ್ : ಕಾರ್ಲೋಸ್ ಅಲ್ಕಾರಝ್ ಭಾನುವಾರದಂದು ನಡೆದ ಐದು ಸೆಟ್ಗಳ ರೋಚಕ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ಕಾರ್ಲೋಸ್ ಅಲ್ಕಾರಝ್ 1-6, 7-6 (8/6), 6-1, 3-6, 6-4 ಗೇಮ್ಗಳಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಡನ್ನ ಸೆಂಟರ್ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದ ಆರಂಭದಲ್ಲಿ ಜೊಕೊವಿಕ್ ಅವರು ಮೊದಲ ಸೆಟ್ನಲ್ಲಿ 6-1 ರಿಂದ ಮುನ್ನಡೆ ಸಾಧಿಸಿದರು.ಟೈಬ್ರೇಕರ್ನ ಎರಡನೇ ಸೆಟ್ನಲ್ಲಿ ಅಲ್ಕರಾಜ್ ತಿರುಗೇಟು ನೀಡಿದರು.ವಿಶ್ವ ನಂಬರ್ 1 ಆಟಗಾರನಾಗಿರುವ ಅಲ್ಕರಾಜ್ 7-6 (8/6) ರಿಂದ ಗೆಲುವು ಸಾಧಿಸಿದರು.ತಮ್ಮ ಪ್ರಾಬಲ್ಯವನ್ನು ಮುಂದುವರಿಸಿಸುವ ಮೂಲಕ ಅವರು ಮೂರನೇ ಸೆಟ್ ಅನ್ನು 6-1 ರಿಂದ ತಮ್ಮದಾಗಿಸಿಕೊಂಡರು.
ಆದಾಗ್ಯೂ, ಜೊಕೊವಿಕ್ ಕೂಡ ಗಮನಾರ್ಹವಾದ ಪುನರಾಗಮನವನ್ನು ಮಾಡಿ ನಾಲ್ಕನೇ ಸೆಟ್ನಲ್ಲಿ 6-3 ಗೆಲುವು ಸಾಧಿಸುವುದರೊಂದಿಗೆ ಪಂದ್ಯವನ್ನು ಅಂತಿಮ ಸೆಟ್ಗೆ ಕೊಂಡೊಯ್ದರು. ಆದರೆ ಅಲ್ಕರಾಜ್ ಅಂತಿಮ ಸೆಟ್ನಲ್ಲಿ ಜೊಕೊವಿಕ್ ವಿರುದ್ಧ ಮುನ್ನಡೆ ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.