ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಎಲ್ಲಿ ಶೀತವಾಗುತ್ತದೆ ಎಂಬ ಭಯದಿಂದ ಬಹುತೇಕ ಮಂದಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಬೇಗ ಬಿಸಿ ನೀರು ಪಡೆಯಲು ಸಾಕಷ್ಟು ಮಂದಿ ತಮ್ಮ ಮನೆಯಲ್ಲಿ ವಾಟರ್ ಹೀಟರ್ ಬಳಸುತ್ತಾರೆ.

ನಿಮ್ಮನ್ನು ತಾಜಾ ಆಗಿಡಲು ಮತ್ತು ದಿನದ ಕೆಲಸಕ್ಕೆ ಸಿದ್ಧವಾಗಲು ನೆರವಾಗುವ ಬೆಳಗಿನ ನಿತ್ಯಕರ್ಮವೆಂದರೆ, ಅದು ಸ್ನಾನ. ಸ್ನಾನ ವೈಯಕ್ತಿಕ ನೈರ್ಮಲ್ಯಕ್ಕೆ ಅಗತ್ಯವಾಗಿದ್ದು, ಪ್ರಪಂಚದ್ಯಾಂತ ಪ್ರತಿಯೊಬ್ಬರು ಸ್ನಾನ ಮಾಡುತ್ತಾರೆ.

ಈ ನಡುವೆ ಚಳಿಗಾಲ ಆರಂಭವಾಗಿದೆ. ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಎಲ್ಲಿ ಶೀತವಾಗುತ್ತದೆ ಎಂಬ ಭಯದಿಂದ ಬಹುತೇಕ ಮಂದಿ ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಬೇಗ ಬಿಸಿ ನೀರು ಪಡೆಯಲು ಸಾಕಷ್ಟು ಮಂದಿ ತಮ್ಮ ಮನೆಯಲ್ಲಿ ವಾಟರ್ ಹೀಟರ್ ಬಳಸುತ್ತಾರೆ.

ಆದರೆ ವಾಟರ್ ಹೀಟರ್ ಖರೀದಿಸಿದರೆ ಸಾಕಾಗುವುದಿಲ್ಲ. ಅದನ್ನು ಹೇಗೆ ಉಪಯೋಗಿಸಬೇಕು ಮತ್ತು ಅದರ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುವುದು ಬಹಳ ಮುಖ್ಯ. ಸದ್ಯ ನಾವಿಂದು ನಿಮಗೆ ವಾಟರ್ ಹೀಟರ್ ಹೇಗೆ ಬಳಸಬೇಕು ಎಂಬುವುದರ ಬಗ್ಗೆ ಕೆಲವೊಂದಷ್ಟು ಮಾಹಿತಿ ನೀಡುತ್ತೇವೆ.
ಹೀಟರ್ ನಲ್ಲಿ ಗಟ್ಟಿಯಾದ ನೀರು ಅಂದರೆ ಉಪ್ಪು ನೀರನ್ನು ಹೆಚ್ಚಾಗಿ ಬಳಸಬಾರದು. ಇದರಿಂದ ಖನಿಜ ಲವಣಗಳು ಹೀಟರ್ ನ ಒಳಭಾಗಕ್ಕೆ ಅಂಟಿಕೊಳ್ಳುತ್ತವೆ. ನಂತರ ಹೀಟರ್ನ ದಕ್ಷತೆಯು ಕಡಿಮೆಯಾಗುತ್ತದೆ.

ಇಷ್ಟೇ ಅಲ್ಲದೇ ಬೇರ್ ಹೀಟರ್ ಅನ್ನು ಬಿಸಿ ಮಾಡಬೇಡಿ. ನೀವು ಇದನ್ನು ಮಾಡಿದರೆ, ಹೀಟರ್ ಕೆಟ್ಟುಹೋಗಿ ಅದನ್ನು ರಿಪೇರಿ ಮಾಡಿಸಲು ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.

ಹೀಟರ್ಗಳು ಕೆಲವೊಮ್ಮೆ ಸ್ವಯಂಚಾಲಿತವಾಗಿ ಆಫ್ ಆಗುತ್ತವೆ. ಈ ವೈಶಿಷ್ಟ್ಯವನ್ನು ಹೊಂದಿರದ ಹೀಟರ್ಗಳನ್ನು ಬಳಕೆಯಲ್ಲಿರುವಾಗ ಸೂಕ್ತ ಸಮಯದಲ್ಲಿ ಸ್ವಿಚ್ ಆಫ್ ಮಾಡಬೇಕು. ಈ ಕೆಲಸವನ್ನು ಮಾಡದಿದ್ದರೆ ಕರೆಂಟ್ ಬಿಲ್ ಹೆಚ್ಚಾಗಿ ಬರುವುದರ ಜೊತೆಗೆ ಹೀಟರ್ ಕೂಡ ಕೆಡುತ್ತದೆ.

ಹೀಟರ್ಗಾಗಿ ಪವರ್ ಸಾಕೆಟ್ ಒಳಗೆ ನೀರು ಬರದಂತೆ ಎಚ್ಚರಿಕೆ ವಹಿಸಿ. ಈ ದೋಷ ಸಂಭವಿಸುವ ಸಾಧ್ಯತೆ ಹೆಚ್ಚು. ಇದನ್ನು ಗಮನಿಸಲು ವಿಫಲವಾದರೆ ದುರಂತಕ್ಕೆ ಕಾರಣವಾಗಬಹುದು. ಹೀಟರ್ನಲ್ಲಿ ಸೂಕ್ತವಾದ ನೀರಿನ ತಾಪಮಾನವು 40 ರಿಂದ 45 ಡಿಗ್ರಿ ಸೆಲ್ಸಿಯಸ್ ಆಗಿದೆ. ಹೀಟರ್ ಅನ್ನು ಇದಕ್ಕಿಂತ ಹೆಚ್ಚು ಬಿಸಿ ಮಾಡಿದಾಗ, ನಂತರ ಅದನ್ನು ಸಮತೋಲನಗೊಳಿಸಲು ನೀರನ್ನು ಸೇರಿಸಬೇಕಾಗಬಹುದು. ವಿದ್ಯುತ್ ಮತ್ತು ಹೀಟರ್ನ ಕೆಲಸವು ವ್ಯರ್ಥವಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1