ಬಿಜೆಪಿ ಮಹಿಳಾ ಮೋರ್ಚಾದವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಪೌರ ಕಾರ್ಮಿಕರಿಗೆ ಸನ್ಮಾನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 11 : ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದವತಿಯಿಂದ ಇತ್ತೀಚೆಗೆ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಐದು ಜನ ಮಹಿಳಾ ಪೌರ ಕಾರ್ಮಿಕರಿಗೆ ಸನ್ಮಾನವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎ.ಮುರಳಿ ಇತ್ತಿಚಿನ ದಿನದಲ್ಲಿ ಮಹಿಳೆಯರು ಎಲ್ಲದರಲ್ಲೂ ಸಹಾ ಸಾಧನೆಯನ್ನು
ಮಾಡುತ್ತಿದ್ದಾರೆ. ಪುರುಷರಂತೆ ಅವರು ಸಹಾ ಸರಿಸಮನಾದ ರೀತಿಯಲ್ಲಿ ಬದುಕುತ್ತಿದ್ದಾರೆ. ಎಲ್ಲಾ ಕೆಲಸಗಳಲ್ಲಿಯೂ ಸಹಾ ಮಹಿಳೆಯರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಮನೆ ಕೆಲಸದಿಂದ ಹಿಡಿದು ಕಚೇರಿಯ ಕೆಲಸದಲ್ಲಿಯೂ ಸಹಾ ಮಹಿಳೆಯರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದಾರೆ. ಇಂತಹ ಮಹಿಳೆಯನ್ನು ನಾವುಗಳು ಗೌರವಿಸಬೇಕಿದೆ. ಇಂದಿನ ದಿನಮಾನದಲ್ಲಿ ಮಹಿಳೆ ಇಲ್ಲದ ಮನೆ ಇಲ್ಲ ಕಚೇರಿಯೂ ಇಲ್ಲ ಎನ್ನುವಂತಾಗಿದೆ ಎಂದರು.

ಪೌರ ಕಾರ್ಮಿಕರು ನಮಗಾಗಿ ಪ್ರತಿ ದಿನ ನಗರವನ್ನು ಶುಚಿಗೂಳಿಸುವ ಕಾರ್ಯವನ್ನು ಮುಂಜಾನೆಯಿಂದಲೇ ಮಾಡುತ್ತಾರೆ. ಇದರಲ್ಲಿ
ಪುರುಷರಷ್ಟೇ ಸಮಾನವಾಗಿ ಮಹಿಳೆಯರು ಸಹಾ ಕೆಲಸವನ್ನು ಮಾಡುತ್ತಾರೆ, ಇದರಲ್ಲಿ ಕಸಗೂಡಿಸುವುದು, ಕಸವನ್ನು
ತೆಗೆದುಕೊಂಡು ಹೋಗುವುದು, ಬೀದಿಯನ್ನು ಸ್ವಚ್ಚವಾಗಿ ಇಡುವುದು ಸೇರಿದಂತೆ ಇತರೆ ಕೆಲಸವನ್ನು ಮಾಡುತ್ತಾರೆ ಇವರ
ಕೆಲಸವನ್ನು ಬೇರೆಯವರು ಮಾಡುವುದಿಲ್ಲ ಇವರೇ ಮಾಡುತ್ತಾರೆ ಇಂತಹರಿಗೆ ನಾವು ಗೌರವವÀನ್ನು ನೀಡಬೇಕಿದೆ ಅವರ
ಕಾರ್ಯವನ್ನು ಶ್ಲಾಘಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಾದ ಶಾರದಮ್ಮ, ಯಲ್ಲಮ್ಮ, ಹೊನ್ನಮ್ಮ, ಸಾವಿತ್ರಮ್ಮ ಹಾಗೂ ಶಾರದಮ್ಮ ರವರನ್ನು
ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್. ಸುರೇಶ್ ಸಿದ್ದಾಪುರ, ಜಿಲ್ಲಾ ಮಹಿಳಾ
ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಜಗದಾಂಬ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಬಸಮ್ಮ, ಕವನ, ಸಿಂಧೂ,
ರೂಪ ರುದ್ರಮ್ಮ, ಶಾರದಮ್ಮ, ವೀಣಾ, ಕಾಂಚನ, ಚಂದ್ರಿಕಾ ಗೀತಾ, ಮಂಜುಳಮ್ಮ ಭಾಗವಹಿಸಿದ್ದರು.

Leave a Reply

Your email address will not be published. Required fields are marked *