Women IPL 2023: ಕನಿಷ್ಠ ಸಾವಿರ ಕೋಟಿ ಇದ್ದರಷ್ಟೇ ಐಪಿಎಲ್ ತಂಡ ಖರೀದಿಗೆ ಬನ್ನಿ! ಬಿಸಿಸಿಐ ಖಡಕ್ ರೂಲ್ಸ್

Women IPL 2023 Bcci women ipl franchise ownership 1000 crore rupee net worth for interested parties

ಸುದೀರ್ಘ ಕಾಯುವಿಕೆಯ ನಂತರ ಬಿಸಿಸಿಐ (BCCI) ಕೊನೆಗೂ ಮಹಿಳಾ ಐಪಿಎಲ್ (Women’s IPL) ಆರಂಭಿಸಲು ಕ್ರಮ ಕೈಗೊಂಡಿದೆ. ಹೊಸ ವರ್ಷದ ಆರಂಭದೊಂದಿಗೆ ಬಿಸಿಸಿಐ ಕೂಡ ಭಾರೀ ಪ್ಲಾನ್ ಮಾಡಿದೆ. ಮಾರ್ಚ್ 2023 ರಲ್ಲಿ ಪಂದ್ಯಾವಳಿಯ ಮೊದಲ ಸೀಸನ್ ಆಯೋಜಿಸಲು ಮುಂದಾಗಿದೆ. ಇದಕ್ಕಾಗಿ ಆಟಗಾರರ ನೋಂದಣಿಯಿಂದ ಹಿಡಿದು, ಫ್ರಾಂಚೈಸಿಗಳ ಮಾರಾಟದವರೆಗೂ ಬಿಸಿಸಿಐ ಪ್ರಕಟಣೆಗಳನ್ನು ಹೊರಡಿಸಿದೆ. ಅಲ್ಲದೆ ಬಿಸಿಸಿಐ ಫ್ರಾಂಚೈಸಿಗಳ ಖರೀದಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 21ಕ್ಕೆ ನಿಗದಿ ಮಾಡಲಾಗಿದ್ದು, ಐಪಿಎಲ್ ಫ್ರಾಂಚೈಸಿಯನ್ನು ಖರೀದಿಸಲು ಇಚ್ಚಿಸುವವರಿಗೆ ಬಿಸಿಸಿಐ ಕೆಲುವು ಕಟ್ಟು ನಿಟ್ಟಾದ ನಿಯಮಗಳನ್ನು ಹೊರಡಿಸಿದೆ.

ಮಹಿಳಾ ಐಪಿಎಲ್‌ನ ಐದು ಫ್ರಾಂಚೈಸಿಗಳ ಖರೀದಿಗೆ ಬಿಸಿಸಿಐ ಇತ್ತೀಚೆಗೆ ಟೆಂಡರ್ ಕರೆದಿತ್ತು. ಇದರ ಅಡಿಯಲ್ಲಿ ಬಿಸಿಸಿಐ, ಮಹಿಳಾ ಐಪಿಎಲ್ ತಂಡವನ್ನು ಖರೀದಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಪುರುಷ ಐಪಿಎಲ್ ಫ್ರಾಂಚೈಸಿ ಮಾಲೀಕರು ಸೇರಿದಂತೆ ಹೊಸ ಹಕ್ಕುದಾರರು ಅರ್ಜಿ ಹಾಕುವ ಸಾಧ್ಯತೆಗಳಿವೆ. ಆದರೆ ಮಹಿಳಾ ಐಪಿಎಲ್ ತಂಡವನ್ನು ಖರೀದಿಸಲು ಕೆಲವು ಷರತ್ತುಗಳನ್ನು ಅನುಸರಿಸಬೇಕಾಗಿದೆ.

IPL 2023: ಪಂತ್ ಐಪಿಎಲ್ ಆಡುವುದು ಡೌಟ್; ಡೆಲ್ಲಿ ತಂಡಕ್ಕೆ ಯಾರು ನಾಯಕ? ರೇಸ್​ನಲ್ಲಿ ಈ ನಾಲ್ವರು

ಕನಿಷ್ಠ 1000 ಕೋಟಿ ರೂ. ಇರಬೇಕು

ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್ ವರದಿಯ ಪ್ರಕಾರ, ಮಹಿಳಾ ಐಪಿಎಲ್‌ನಲ್ಲಿ ಫ್ರಾಂಚೈಸಿ ಖರೀದಿಸಲು ಬಯಸುವ ಯಾವುದೇ ಕಂಪನಿ ಅಥವಾ ಖಾಸಗಿ ಸಂಸ್ಥೆಯೂ ತಮ್ಮ ಬ್ಯಾಂಕ್‌ನಲ್ಲಿ ಕನಿಷ್ಠ 1000 ಕೋಟಿ ರೂ.ಗಳನ್ನು ಹೊಂದಿರಬೇಕು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. 2021 ರಲ್ಲಿ, ಪುರುಷರ ಐಪಿಎಲ್​ಗೆ ಎರಡು ಹೊಸ ತಂಡಗಳನ್ನು ಸೇರಿಸಿದ್ದ ಬಿಸಿಸಿಐ, ಈ ಎರಡು ಹೊಸ ಫ್ರಾಂಚೈಸಿಗಳನ್ನು ಖರೀದಿಸಲು 3,000 ಕೋಟಿ ರೂ ಮೂಲ ಬೆಲೆಯನ್ನು ಇರಿಸಿತ್ತು. ಅಂದರೆ, ಈ ಎರಡು ತಂಡಗಳನ್ನು ಖರೀದಿಸಲು ಇಚ್ಚಿಸುವ ತಂಡಗಳು ತಮ್ಮ ಬ್ಯಾಂಕ್​ ಖಾತೆಯಲ್ಲಿ ಕನಿಷ್ಠ 3 ಸಾವಿರ ಕೋಟಿ ಹಣವನ್ನು ಹೊಂದಿರಬೇಕು ಎಂಬ ನಿಯಮ ಹೊರಡಿಸಿತ್ತು.

ಈ ನಿಯಮದ ಜೊತೆಗೆ, ಮಹಿಳಾ ಐಪಿಎಲ್ ಫ್ರಾಂಚೈಸ್ ಖರೀದಿಸಲು ಯಾವುದೇ ಒಕ್ಕೂಟ ಅಂದರೆ ಸಣ್ಣ ಷೇರುದಾರರು ಒಟ್ಟಾಗಿ ಬಿಡ್ ಮಾಡುವಂತಿಲ್ಲ ಎಂದು ಬಿಸಿಸಿಐ ಹೇಳಿದೆ. ಅಂದರೆ, ಯಾರು ಫ್ರಾಂಚೈಸ್ ಅನ್ನು ಖರೀದಿಸಲು ಇಚ್ಚಿಸುತ್ತಾರೋ, ಅವರು ಫ್ರಾಂಚೈಸ್ ಅನ್ನು ಒಂದು ಪಾರ್ಟಿಯಾಗಿ ಖರೀದಿಸಬೇಕಾಗುತ್ತದೆ.

ಜನವರಿ 25 ರಂದು ಪ್ರಕಟ

ಬಿಸಿಸಿಐ ಫ್ರಾಂಚೈಸಿಗಳ ಖರೀದಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 21ಕ್ಕೆ ನಿಗದಿ ಮಾಡಲಾಗಿದೆ. ಇದಕ್ಕಾಗಿ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಖರೀದಿಸಲು 5 ಲಕ್ಷ ರೂ. ಶುಲ್ಕವನ್ನು ಕಟ್ಟಬೇಕಾಗಿದೆ. ಈ ದಾಖಲೆಗಳನ್ನು ಜನವರಿ 23 ರಂದು ಪರಿಶೀಲಿಸಲಾಗುವುದು. ಅರ್ಜಿದಾರರ ದಾಖಲೆಗಳಲ್ಲಿ ಯಾವುದೇ ನ್ಯೂನತೆ ಕಂಡುಬಂದರೆ, ಮಂಡಳಿಯು ಅದನ್ನು ಸ್ಥಳದಲ್ಲೇ ತಿರಸ್ಕರಿಸಲಿದೆ. ಈ ಎಲ್ಲ ಅರ್ಜಿಗಳ ದಾಖಲೆಯ ಪರಿಶೀಲನೆಯ ನಂತರ ಅಂದೇ, ಅಂದರೆ ಜನವರಿ 25ರಂದೇ ಮಹಿಳಾ ಐಪಿಎಲ್‌ನ 5 ಫ್ರಾಂಚೈಸಿಗಳ ಮಾಲೀಕರನ್ನು ಬಿಸಿಸಿಐ ಪ್ರಕಟಿಸಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/women-ipl-2023-bcci-women-ipl-franchise-ownership-1000-crore-rupee-net-worth-for-interested-parties-psr-au14-498011.html

Leave a Reply

Your email address will not be published. Required fields are marked *