Women’s T20 World Cup 2024: ಪರಿಷ್ಕೃತ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್.

ಅಕ್ಟೋಬರ್​ 3 ರಿಂದ ಆರಂಭವಾಗಿರುವ ಮಹಿಳಾ ಟಿ20 ವಿಶ್ವಕಪ್ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಿದೆ. ವಾಸ್ತವವಾಗಿ ಮಹಿಳೆಯರ ಟಿ20 ವಿಶ್ವಕಪ್ ಅನ್ನು ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿ ಹದಗ್ಗೆಟ್ಟ ಪರಿಸ್ಥಿತಿಗಳಿಂದಾಗಿ ಈ ಚುಟುಕು ಸಮರವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ವರ್ಗಾಯಿಸಲಾಯಿತು. ಈ ಟೂರ್ನಿಯ ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಮತ್ತು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಅಕ್ಟೋಬರ್ 3 ರಂದು ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

ಈ ದಿನದಂದು ಭಾರತ- ಪಾಕ್ ಫೈಟ್

ಇನ್ನು ಟೀಂ ಇಂಡಿಯಾದ ವೇಳಾಪಟ್ಟಿಯನ್ನು ಗಮನಿಸುವುದಾದರೆ..ಹರ್ಮನ್​ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಆ ನಂತರ ಅಕ್ಟೋಬರ್ 6 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ರಲ್ಲಿ ಈ ಬಾರಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯು ಅಕ್ಟೋಬರ್ 3 ರಿಂದ ಆರಂಭವಾಗಲಿದ್ದು, ಅಕ್ಟೋಬರ್ 20 ರವರೆಗೆ ನಡೆಯಲಿದೆ. ಇದಲ್ಲದೆ ಈ ಬಾರಿ ಸೆಮಿಫೈನಲ್ ಮತ್ತು ಫೈನಲ್‌ಗೆ ಮೀಸಲು ದಿನವನ್ನು ಸಹ ಇರಿಸಲಾಗಿದೆ.

2 ಗುಂಪುಗಳಾಗಿ ವಿಂಗಡಣೆ

ಈ ಬಾರಿ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ ಇದ್ದರೆ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ತಂಡಗಳನ್ನು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಎರಡೂ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ಎರಡು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಸೆಮಿಫೈನಲ್​ನಲ್ಲಿ ಗೆದ್ದ ತಂಡಗಳು ಫೈನಲ್​ಗೆ ಅರ್ಹತೆ ಪಡೆಯಲ್ಲಿವೆ.

ಪೂರ್ಣ ವೇಳಾಪಟ್ಟಿ

ದಿನಾಂಕಮುಖಾಮುಖಿಗುಂಪುಸಮಯಸ್ಥಳ
ಅಕ್ಟೋಬರ್ 3, ಗುರುವಾರಬಾಂಗ್ಲಾದೇಶ vs ಸ್ಕಾಟ್ಲೆಂಡ್ಬಿಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 3, ಗುರುವಾರಪಾಕಿಸ್ತಾನ vs ಶ್ರೀಲಂಕಾಸಂಜೆ 7:30 ಶಾರ್ಜಾ
ಅಕ್ಟೋಬರ್ 4, ಶುಕ್ರವಾರದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ಬಿಮಧ್ಯಾಹ್ನ 3:30 ದುಬೈ
ಅಕ್ಟೋಬರ್ 4, ಶುಕ್ರವಾರಭಾರತ vs ನ್ಯೂಜಿಲ್ಯಾಂಡ್ಸಂಜೆ 7:30 ದುಬೈ
ಅಕ್ಟೋಬರ್ 5, ಶನಿವಾರಬಾಂಗ್ಲಾದೇಶ vs ಇಂಗ್ಲೆಂಡ್ಬಿಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 5, ಶನಿವಾರಆಸ್ಟ್ರೇಲಿಯಾ vs ಶ್ರೀಲಂಕಾಸಂಜೆ 7:30 ಶಾರ್ಜಾ
ಅಕ್ಟೋಬರ್ 6, ಭಾನುವಾರಭಾರತ vs ಪಾಕಿಸ್ತಾನಮಧ್ಯಾಹ್ನ 3:30 ದುಬೈ
ಅಕ್ಟೋಬರ್ 6, ಭಾನುವಾರವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ಸಂಜೆ 7:30 ದುಬೈ
ಅಕ್ಟೋಬರ್ 7, ಸೋಮವಾರಇಂಗ್ಲೆಂಡ್ vs ದಕ್ಷಿಣ ಆಫ್ರಿಕಾಬಿಸಂಜೆ 7:30 ಶಾರ್ಜಾ
ಅಕ್ಟೋಬರ್ 8, ಮಂಗಳವಾರಆಸ್ಟ್ರೇಲಿಯಾ vs ನ್ಯೂಜಿಲೆಂಡ್ಸಂಜೆ 7:30 ಶಾರ್ಜಾ
ಅಕ್ಟೋಬರ್ 9, ಬುಧವಾರದಕ್ಷಿಣ ಆಫ್ರಿಕಾ vs ಸ್ಕಾಟ್ಲೆಂಡ್ಬಿಮಧ್ಯಾಹ್ನ 3:30 ದುಬೈ
ಅಕ್ಟೋಬರ್ 9, ಬುಧವಾರಭಾರತ vs ಶ್ರೀಲಂಕಾಸಂಜೆ 7:30 ದುಬೈ
ಅಕ್ಟೋಬರ್ 10, ಗುರುವಾರಬಾಂಗ್ಲಾದೇಶ vs ವೆಸ್ಟ್ ಇಂಡೀಸ್ಬಿಸಂಜೆ 7:30 ಶಾರ್ಜಾ
ಅಕ್ಟೋಬರ್ 11, ಶುಕ್ರವಾರಆಸ್ಟ್ರೇಲಿಯಾ vs ಪಾಕಿಸ್ತಾನಸಂಜೆ 7:30 ದುಬೈ
ಅಕ್ಟೋಬರ್ 12, ಶನಿವಾರನ್ಯೂಜಿಲ್ಯಾಂಡ್ vs ಶ್ರೀಲಂಕಾಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 12, ಶನಿವಾರಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾಬಿಸಂಜೆ 7:30 ದುಬೈ
ಅಕ್ಟೋಬರ್ 13, ಭಾನುವಾರಇಂಗ್ಲೆಂಡ್ vs ಸ್ಕಾಟ್ಲೆಂಡ್ಬಿಮಧ್ಯಾಹ್ನ 3:30 ಶಾರ್ಜಾ
ಅಕ್ಟೋಬರ್ 13, ಭಾನುವಾರಭಾರತ vs ಆಸ್ಟ್ರೇಲಿಯಾಸಂಜೆ 7:30 ಶಾರ್ಜಾ
ಅಕ್ಟೋಬರ್ 14, ಸೋಮವಾರಪಾಕಿಸ್ತಾನ vs ನ್ಯೂಜಿಲ್ಯಾಂಡ್ಸಂಜೆ 7:30 ದುಬೈ
ಅಕ್ಟೋಬರ್ 15, ಮಂಗಳವಾರಇಂಗ್ಲೆಂಡ್ vs ವೆಸ್ಟ್ ಇಂಡೀಸ್ಬಿಸಂಜೆ 7:30 ದುಬೈ
ಅಕ್ಟೋಬರ್ 17, ಗುರುವಾರಸೆಮಿಫೈನಲ್ 1ಸಂಜೆ 7:30 ದುಬೈ
ಅಕ್ಟೋಬರ್ 18, ಶುಕ್ರವಾರಸೆಮಿಫೈನಲ್ 2ಸಂಜೆ 7:30 ಶಾರ್ಜಾ
ಅಕ್ಟೋಬರ್ 20, ಭಾನುವಾರಫೈನಲ್ಸಂಜೆ 7:30 ದುಬೈ

Source : https://tv9kannada.com/sports/cricket-news/womens-t20-world-cup-2024-icc-released-updated-fixture-list-kannada-news-psr-903805.html

Leave a Reply

Your email address will not be published. Required fields are marked *