ಚಿತ್ರದುರ್ಗ :ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣೆ ವಿರೋಧಿ ದಿನಾಚರಣೆ ಅಂಗವಾಗಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜಾಥಾ ಏರ್ಪಡಿಸಿ ಜನರಲ್ಲಿ ಈ ದಿನದ ಬಗ್ಗೆ ಅರಿವು ಮೂಡಿಸಲಾಯಿತು.
![](https://samagrasuddi.co.in/wp-content/uploads/2024/06/image-217-1024x540.png)
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ನಿರೀಕ್ಷಿತ ಭಾಷಣ ಮಾಡಿದರು. ಪ್ರಾಚಾರ್ಯರಾದ ಸಂಪತ್ ಕುಮಾರ್ ಸಿ ಡಿ ಮಾತನಾಡಿ ಮಾದಕ ದ್ರವ್ಯದ ಬಗ್ಗೆ ಮಾಹಿತಿ ನೀಡಿದರು. ಹೆಡ್ ಕೋ ಆರ್ಡಿನೇಟರ್ ಕೆ.ಬಸವರಾಜು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿಕ್ಷಕರಾದ ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್. ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ, ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್ ಮತ್ತು ಶಿಕ್ಷಕ/ಕಿಯರು ಭಾಗವಹಿಸಿದ್ದರು.