World Book and Copyright Day 2024 :ಒಂದೊಳ್ಳೆಯ ಪುಸ್ತಕ ನಿಮ್ಮ ಬದುಕಿಗೆ ದಾರಿ ದೀಪ

Day Special: ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದ್ದಂತೆ ಇಂದಿನ ಯುವಕ ಯುವತಿಯರಲ್ಲಿ ಪುಸ್ತಕ ಓದುವ ಹವ್ಯಾಸಗಳು ಕಡಿಮೆಯಾಗುತ್ತಿದೆ. ಪುಸ್ತಕದ ಜಾಗವನ್ನು ಮೊಬೈಲ್, ಲ್ಯಾಪ್ ಟಾಪ್ ನಂತಹ ಸಾಧನಗಳು ತುಂಬಿಕೊಂಡಿದೆ. ಆದರೆ ಈ ಪುಸ್ತಕದ ಮಹತ್ವ, ಓದುವಿಕೆ, ಪ್ರಕಾಶನ ಹಾಗೂ ಕೃತಿಸ್ವಾಮ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್ 23 ರಂದು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದ್ದು, ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪುಸ್ತಕಕ್ಕಿಂತ ಉತ್ತಮವಾದ ಗೆಳೆಯ ಮತ್ತೊಂದು ಇಲ್ಲ ಎನ್ನುವ ಮಾತಿದೆ. ಕೆಲವರು ಪುಸ್ತಕ ಓದುವುದನ್ನು ಹವ್ಯಾಸವಾಗಿ ತೆಗೆದುಕೊಂಡರೆ, ಇನ್ನು ಕೆಲವರು ಜ್ಞಾನ ಸಂಪಾದನೆಗಾಗಿ ಪುಸ್ತಕವನ್ನು ಓದುತ್ತಾರೆ. ಆದರೆ ಓದುವವರ ಅಭಿರುಚಿ ಹಾಗೂ ಆಯ್ಕೆ ಮಾಡುವ ಪುಸ್ತಕಗಳು ಮಾತ್ರ ಬೇರೆ ಬೇರೆಯಾಗಿರುತ್ತದೆ. ಅದಲ್ಲದೇ ಈ ಪುಸ್ತಕವು ಒಂಟಿತನವನ್ನು ದೂರ ಮಾಡುವ ಗೆಳೆಯ ಕೂಡ ಆಗುತ್ತದೆ. ಆದರೆ ಇಂದಿನ ಮಕ್ಕಳಿಗೆ ಪುಸ್ತಕ ಓದುವ ಅಭ್ಯಾಸವೇ ಇಲ್ಲ. ಓದುವ ತುಡಿತಯಿರುವ ಅದೆಷ್ಟೋ ವ್ಯಕ್ತಿಗಳು ಇಂದಿಗೂ ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಆದರೆ ಓದುಗ ವರ್ಗವನ್ನು ಮತ್ತಷ್ಟು ಹೆಚ್ಚಿಸಲು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಇತಿಹಾಸ:

ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಎನ್ನುವವರು ಈ ಪುಸ್ತಕ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ತಂದರು. ವೆಲೆನ್ಸಿಯನ್ ಬರಹಗಾರ ವಿಸೆಂಟೆ ಕ್ಲಾವೆಲ್ ಆ್ಯಂಡ್ರೆಸ್ ಅವರ ಜನ್ಮದಿನವಾದ ಅಕ್ಟೋಬರ್ 7 ರಂದು ಪುಸ್ತಕ ದಿನವನ್ನಾಗಿ ಆಚರಿಸಲಾಯಿತು. ನಂತರದಲ್ಲಿ ಅವರು ಮರಣ ಹೊಂದಿದ ದಿನವಾದ ಏಪ್ರಿಲ್ 23 ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಯಿತು. ಆದರೆ ಯುನೆಸ್ಕೊ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಆಚರಣೆ ಮಾಡಲು 1995 ರಲ್ಲಿ ಪ್ಯಾರಿಸ್ ಜೆನೆರಲ್ ಕಾನ್ಸರೆನ್ಸ್ ನಲ್ಲಿ ತೀರ್ಮಾನ ತೆಗೆದುಕೊಂಡಿತು. ಅಂದಿನಿಂದ ಪ್ರತಿ ವರ್ಷವು ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.

ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಉದ್ದೇಶ:

ಇಂದಿನ ಯುವಕ ಯುವತಿಯರಲ್ಲಿ ಪುಸ್ತಕ ಓದಿಸುವುದನ್ನು ಹವ್ಯಾಸವನ್ನು ಬೆಳೆಸುವುದರೊಂದಿಗೆ ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಸೇರಿದಂತೆ ವಿವಿಡೆದೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

Source:https://tv9kannada.com/lifestyle/world-book-and-copyright-day-2024-history-significance-and-all-you-need-to-know-lifestyle-news-siu-819942.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *