World Cup 2023: ಇಂಡೋ-ಪಾಕ್ ಪಂದ್ಯದ ಪ್ರತಿ 10 ಸೆಕೆಂಡ್ ಜಾಹಿರಾತಿಗೆ ರೂ.30 ಲಕ್ಷ ಫಿಕ್ಸ್…!!

Disney + Hotstar: ಹಲವಾರು ಜಾಹೀರಾತು ಏಜೆನ್ಸಿಗಳು ಈಗಾಗಲೇ ಡಿಸ್ನಿ ಸ್ಟಾರ್ ಬ್ರಾಡ್‌ ಕಾಸ್ಟರ್‌ ನ ಪ್ರೈಸ್ ಕಾರ್ಡ್’ಗಳನ್ನು ಪಡೆದುಕೊಂಡಿವೆ. ಇನ್ನು ಆರಂಭಿಕ ದಿನದಲ್ಲಿ ಇಂಡೋ-ಪಾಕ್ ಪಂದ್ಯ ವೇಳೆ ಪ್ರತಿ 10 ಸೆಕೆಂಡ್​ ಗೆ 17 ರಿಂದ 18 ಲಕ್ಷಕ್ಕೆ ದರವನ್ನು ನಿಗದಿ ಮಾಡಲಾಗಿತ್ತು.

Disney + Hotstar: ಡಿಸ್ನಿ+ ಹಾಟ್ ಸ್ಟಾರ್ ಮುಂಬರುವ ICC ಏಕದಿನ ವರ್ಲ್ಡ್ ಕಪ್ 2023 ಪ್ರಸಾರ ಮಾಡಲಿದ್ದು, ಈ ಸಂದರ್ಭವನ್ನು ಲಾಭವನ್ನಾಗಿ ಪರಿವರ್ತಿಸಲು ಮುಂದಾಗಿದೆ. ಭಾರತದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ಏಕದಿನ ವಿಶ್ವಕಪ್ ನಡೆಯಲಿದ್ದು, ಇದರಲ್ಲಿ ಅತೀ ಹೆಚ್ಚು ರೋಚಕತೆ ಸೃಷ್ಟಿಸಿರುವುದು ಭಾರತ ಪಾಕಿಸ್ತಾನ ಪಂದ್ಯ.

ಹಲವಾರು  ಜಾಹೀರಾತು ಏಜೆನ್ಸಿಗಳು ಈಗಾಗಲೇ ಡಿಸ್ನಿ ಸ್ಟಾರ್ ಬ್ರಾಡ್‌ ಕಾಸ್ಟರ್‌ ನ ಪ್ರೈಸ್ ಕಾರ್ಡ್’ಗಳನ್ನು ಪಡೆದುಕೊಂಡಿವೆ. ಇನ್ನು ಆರಂಭಿಕ ದಿನದಲ್ಲಿ ಇಂಡೋ-ಪಾಕ್ ಪಂದ್ಯ ವೇಳೆ ಪ್ರತಿ 10 ಸೆಕೆಂಡ್​ ಗೆ 17 ರಿಂದ 18 ಲಕ್ಷಕ್ಕೆ ದರವನ್ನು ನಿಗದಿ ಮಾಡಲಾಗಿತ್ತು. ಆದರೆ ಈಗ ಪಂದ್ಯದ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಕಾರಣ, ಇದನ್ನೇ ಬಂಡವಾಳವಾಗಿರಿಸಿಕೊಂಡ ಸಂಸ್ಥೆ ದರ ಹೆಚ್ಚಳ ಮಾಡಿದೆ.

ಪಂದ್ಯದ ದಿನಾಂಕ ಬದಲಾವಣೆ:

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಜನರು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಸದ್ಯ ಈ ಬಾರಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ದಿನಾಂಕವನ್ನು ಮರು ನಿಗದಿಪಡಿಸುವ ಸಾಧ್ಯತೆ ಇದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಅದೇ ಸಮಯದಲ್ಲಿ, ಭಾರತ ಮತ್ತು ಪಾಕಿಸ್ತಾನ ತಮ್ಮ ಮೊದಲ ಪಂದ್ಯವನ್ನು ಅಕ್ಟೋಬರ್ 6 ಮತ್ತು 8 ರಂದು ಆಡಲಿವೆ. ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯವನ್ನು ಆಡಲಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

ಈ ಬಾರಿ ವಿಶ್ವಕಪ್ ಮಹಾ ಪಂದ್ಯ ಭಾರತದಲ್ಲಿ ನಡೆಯುತ್ತಿದೆ. 46 ದಿನಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಆದರೆ ಭಾರತ-ಪಾಕಿಸ್ತಾನ ಪಂದ್ಯವನ್ನು ಮರು ನಿಗದಿಪಡಿಸುವ ಹೆಚ್ಚಿನ ಸಾಧ್ಯತೆಗಳಿವೆ. ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯ ಪ್ರಕಾರ ಎರಡೂ ತಂಡಗಳು ಅಕ್ಟೋಬರ್ 15 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಲಿವೆ.

ಮಾಧ್ಯಮ ವರದಿಯ ಪ್ರಕಾರ, ನವರಾತ್ರಿಯ ಮೊದಲ ದಿನದಂದು ಗುಜರಾತ್‌ ನಲ್ಲಿ ಅತಿದೊಡ್ಡ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ರಾಜ್ಯದೆಲ್ಲೆಡೆಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗರ್ಬಾ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಿರುವಾಗ ಭದ್ರತಾ ಏಜೆನ್ಸಿಗಳು ಪಂದ್ಯವನ್ನು ಮರು ನಿಗದಿಪಡಿಸುವಂತೆ ಬಿಸಿಸಿಐಗೆ ಸಲಹೆ ನೀಡಿವೆ.

Source : https://zeenews.india.com/kannada/sports/disney-star-quotes-rs-30-lakh-per-10-seconds-advertisement-during-ind-vs-pak-world-cup-2023-match-148509

Leave a Reply

Your email address will not be published. Required fields are marked *