ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆಯಲ್ಲಿ ಜೂ.14 ರ ಶನಿವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಯಿತು.

ತಂದೆಯರ ದಿನಾಚರಣೆಯ ಅಂಗವಾಗಿ ಶಾಲೆಯವತಿಯಿಂದ ನರ್ಸರಿ ಓದುತ್ತಿರುವ ಮಕ್ಕಳ ತಂದೆಯರಿಗೆ
ವಿವಿಧ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಗೆದ್ದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ರೀತಿಯ ನೃತ್ಯ, ಭಾಷಣ,ಹಾಗೂ ಹಾಡುಗಳನ್ನು ಸಹ ತಂದೆಯರಿಂದ ಹಾಗೂ ಮಕ್ಕಳಿಂದ ನಡೆಸಿಕೊಡಲಾಯಿತು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಉತ್ತಮ್ ಚಂದ್ ಸುರಾನ ,ಕಾರ್ಯದರ್ಶಿ ಸುರೇಶ್ ಕುಮಾರ್ ಸಿಸೋಡಿಯಾ , ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಜಿಮಾ ಸ್ವಾಲೆಹಾ, ಶ್ರೀಮತಿ ಶಾಂತಕುಮಾರಿ, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.

Views: 15

Leave a Reply

Your email address will not be published. Required fields are marked *