World Dance Day 2024: ವಿಶ್ವ ನೃತ್ಯ ದಿನ: ಜನರನ್ನು ಒಟ್ಟುಗೂಡಿಸುವುದೇ ಇದರ ಉದ್ದೇಶ.

Day Special: ಏಪ್ರಿಲ್ 29 ವಿಶ್ವ ನೃತ್ಯ ದಿನ. ನೃತ್ಯದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಮೂಲಕ ಜನರನ್ನು ಒಟ್ಟುಗೂಡಿಸುವುದೇ ದಿನ ಉದ್ದೇಶವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ನೃತ್ಯವನ್ನು ಹವ್ಯಾಸವಾಗಿ ತೆಗೆದುಕೊಂಡವರು ಹಲವರಿದ್ದಾರೆ. ಈ ಕಲಾಪ್ರಕಾರಗಳಲ್ಲಿ ಒಂದಾಗಿರುವ ನೃತ್ಯದ ಮಹತ್ವವನ್ನು ಎಲ್ಲರಿಗೂ ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಈ ದಿನವನ್ನು ನೃತ್ಯದ ಕಲಾ ಪ್ರಕಾರಗಳಿಗೆ ಮೀಸಲಿಡಲಾಗಿದೆ. ನೃತ್ಯವನ್ನು ಸಾರ್ವತ್ರಿಕ ಸ್ವತ್ತಾಗಿ ಉತ್ತೇಜಿಸಲು ಮತ್ತು ನೃತ್ಯ ಕ್ಷೇತ್ರದಲ್ಲಿನ ಎಲ್ಲ ರಾಜಕೀಯ, ಸಾಂಸ್ಕೃತಿಕ ಮತ್ತು ಜನಾಂಗೀಯ ಅಡೆತಡೆಗಳನ್ನು ಮೆಟ್ಟುವ ಗುರಿಯನ್ನು ಈ ದಿನ ಹೊಂದಿದೆ. ಇಂದಿನ ಜನರ ಜೀವನ ಶೈಲಿ ಯು ಸಂಪೂರ್ಣವಾಗಿ ಬದಲಾಗಿದೆ. ಒತ್ತಡದ ಜೀವನದ ಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಹೆಚ್ಚಿನವರು ಅನಾರೋಗ್ಯಕ್ಕೆ ಚಿಕಿತ್ಸೆಯಾಗಿ ನೃತ್ಯವು ರೂಪುಗೊಂಡಿದ್ದು, ಹೀಗಾಗಿ ಹೆಚ್ಚಿನವರು ನೃತ್ಯ ಕಲಿಕೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ನೃತ್ಯ ದಿನದ ನಿಮಿತ್ತ ಪ್ರತಿ ವರ್ಷ ಇಂಟರ್​​ನ್ಯಾಷನಲ್ ಡ್ಯಾನ್ಸ್ ಕಮಿಟಿ ಮತ್ತು ಇಂಟರ್ನ್ಯಾಷನಲ್ ಥಿಯೇಟರ್ ಇನ್​ಸ್ಟಿಟ್ಯೂಟ್ (ಐಟಿಐ) ಜಗತ್ತಿನಾದ್ಯಂತ ಎಲ್ಲ ನೃತ್ಯಗಾರರಿಗೆ ವಿಶೇಷ ಸಂದೇಶವನ್ನು ನೀಡಲು ಅತ್ಯುತ್ತಮ ನೃತ್ಯ ಸಂಯೋಜಕ ಅಥವಾ ನರ್ತಕಿರನ್ನು ಆಯ್ಕೆ ಮಾಡುತ್ತದೆ.

ವಿಶ್ವ ನೃತ್ಯ ದಿನದ ಇತಿಹಾಸ: 1982ರಲ್ಲಿ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆರಂಭಿಸಿದ್ದು ಇಂಟರ್​ನ್ಯಾಷನಲ್ ಥಿಯೇಟರ್ ಇನ್​ಸ್ಟಿಟ್ಯೂಟ್​. ಈ ನೃತ್ಯ ಸಮಿತಿಯು ಯುನೆಸ್ಕೋನ ಪ್ರದರ್ಶನ ಕಲೆಗಳಿಗಾಗಿ ಮುಖ್ಯ ಪಾಲುದಾರ ಸಂಸ್ಥೆ. ಆಧುನಿಕ ಬ್ಯಾಲೆಯ ಸೃಷ್ಟಿಕರ್ತ ಜೀನ್ ಜಾರ್ಜಸ್ ನೊವರ್ರೆ (1727-1810) ಅವರ ಜನ್ಮದಿನ ಗೌರವಾರ್ಥ ಮೊದಲು ಬಾರಿಗೆ ಏಪ್ರಿಲ್ 29ರಂದು ನೃತ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಕಲಾ ಪ್ರಕಾರಗಳನ್ನು ಸಂಭ್ರಮಿಸಲು ಪ್ರತಿ ವರ್ಷ ಅಂತಾರಾಷ್ಟ್ರೀಯ ನೃತ್ಯ ದಿನವನ್ನು ಆಚರಿಸಲಾಗುತ್ತಿದೆ. ನೃತ್ಯದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ಮೂಲಕ ಜನರನ್ನು ಒಟ್ಟುಗೂಡಿಸುವುದು ಈ ದಿನದ ಉದ್ದೇಶ.

ವಿಶ್ವ ನೃತ್ಯ ದಿನದ ಮಹತ್ವ: ನಮ್ಮ ಜೀವನದಲ್ಲಿ ನೃತ್ಯದ ಮಹತ್ವವನ್ನು ಉತ್ತೇಜಿಸುವಲ್ಲಿ ವಿಶ್ವ ನೃತ್ಯ ದಿನವು ಮಹತ್ವದ್ದಾಗಿದೆ. ನೃತ್ಯವು ಕಲೆ ಮತ್ತು ಅಭಿವ್ಯಕ್ತಿಯ ಒಂದು ರೂಪ ಮಾತ್ರವಲ್ಲದೆ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೃತ್ಯವು ಒತ್ತಡವನ್ನು ಕಡಿಮೆ ಮಾಡಲು, ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸಲು, ನಮ್ಯತೆಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ವಿಶ್ವ ನೃತ್ಯ ದಿನವನ್ನು ಆಚರಿಸುವುದರಿಂದ ನೃತ್ಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಈ ಕಲಾ ಪ್ರಕಾರದಲ್ಲಿ ಭಾಗವಹಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. ಇದು ನೃತ್ಯದ ಸಾಂಸ್ಕೃತಿಕ ಮಹತ್ವವನ್ನು ಮತ್ತು ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕಾಲಾನಂತರದಲ್ಲಿ ಅದು ಹೇಗೆ ವಿಕಸನಗೊಂಡಿತು ಎಂಬುದನ್ನು ಎತ್ತಿ ತೋರಿಸುತ್ತದೆ. ಅಂತಾರಾಷ್ಟ್ರೀಯ ನೃತ್ಯ ದಿನವು ಕಲಾಪ್ರಕಾರಗಳಲ್ಲಿ ಒಂದಾಗಿರುವ ನೃತ್ಯದ ಮೌಲ್ಯ, ನೃತ್ಯ ಸಮುದಾಯ ಮತ್ತು ವ್ಯಕ್ತಿಗೆ ಅದರ ಮಹತ್ವದ ಕುರಿತು ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಮನಸ್ಸನ್ನು ತಣಿಸುವ ಆರೋಗ್ಯಕ್ಕೆ ಚಿಕಿತ್ಸೆಯಾಗಿರುವ ಈ ನಿತ್ಯ ದಿನದಂದು ವಿವಿಧ ನೃತ್ಯ ಕಾರ್ಯಕ್ರಮಗಳು ಮತ್ತು ಉತ್ಸವಗಳು ನಡೆಯುತ್ತವೆ. ಕಲಾಪ್ರಕಾರವಾದ ನೃತ್ಯದಲ್ಲಿ ಸಾಧನೆ ಮಾಡಿಗೈದ ವ್ಯಕ್ತಿಗಳನ್ನು ಗುರುತಿಸುವ ಕೆಲಸಗಳನ್ನು ಮಾಡಲಾಗುತ್ತದೆ.

ಭಾರತದ ವಿವಿಧ ರಾಜ್ಯಗಳ ನೃತ್ಯಗಳು:

  • ಒಡಿಸ್ಸಿ ನೃತ್ಯ ರೂಪಕ
  • ಭರತನಾಟ್ಯ ನೃತ್ಯ ರೂಪಕ
  • ಸಮಕಾಲೀನ ನೃತ್ಯ ರೂಪಕ
  • ನಿಯೋಕ್ಲಾಸಿಕಲ್ ನೃತ್ಯ ರೂಪಕ
  • ತಾಂಡವ ನೃತ್ಯ ರೂಪಕ
  • ಕೂಚಿಪುಡಿ ನೃತ್ಯ ರೂಪಕ
  • ಕಥಕ್ ನೃತ್ಯ ರೂಪಕ
  • ಚೌ ನೃತ್ಯ ರೂಪಕ
  • ಕಥಕ್ಕಳಿ ನೃತ್ಯ ರೂಪಕ
  • ಮಣಿಪುರಿ ನೃತ್ಯ ರೂಪಕ

ವಿಶ್ವ ಪ್ರಸಿದ್ಧ ಭಾರತೀಯ ಶಾಸ್ತ್ರೀಯ ನೃತ್ಯಗಾರರು:

  • ರುಕ್ಮಿಣಿ ದೇವಿ ಅರುಂಡೇಲ್
  • ಪಂಡಿತ್ ಬಿರ್ಜು ಮಹಾರಾಜ್
  • ಉದಯ ಶಂಕರ್
  • ಸುಧಾ ಚಂದ್ರನ್
  • ಕೇಲುಚರಣ್ ಮಹಾಪಾತ್ರ
  • ಮೃಣಾಲಿನಿ ಸಾರಾಭಾಯ್
  • ಗುರು ವೆಂಪತಿ ಚಿನ್ನ ಸತ್ಯಂ
  • ಗುರು ಬಿಪಿನ್ ಸಿಂಗ್


Source: https://www.etvbharat.com/kn/!bharat/international-dance-day-bringing-people-together-kas24042803350

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *