ವಿಶ್ವ ವಿಕಲಚೇತನರ ದಿನಾಚರಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 24 ಸರ್ಕಾರ ನಿಮ್ಮ ಜೊತೆಗಿದೆ. ವಿಕಲಚೇತನರೆಂಬ ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಅಂಗವಿಕಲರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕರೆ ನೀಡಿದರು.

ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘ, ಎಂ.ಆರ್.ಡಬ್ಯ್ಲೂ, ಯು.ಆರ್.ಡಬ್ಯು, ವಿ.ಆರ್.ಡಬ್ಯು. ವತಿಯಿಂದ
ಐ.ಎಂ.ಎ.ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಮಾವೇಶ
ಉದ್ಘಾಟಿಸಿ ಮಾತನಾಡಿದ ಅವರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗಿಗಳಾಗಿ.
ನೂನ್ಯತೆ ಮರೆತು ಎಲ್ಲರಂತೆ ಬದುಕಿ. ನಿಮ್ಮ ಏನೆ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ. ನನ್ನ ಹಂತದಲ್ಲಿ
ಆಗುವುದನ್ನು ಬಗೆಹರಿ ಸುತ್ತೇನೆ ಎಂದು ಹೇಳಿದರು.

ನನ್ನ ಅನುದಾನದಲ್ಲಿ ಅಂಗವಿಕಲರಿಗೆ ಪ್ರತಿ ವರ್ಷವೂ ಇಪ್ಪತ್ತು ಲಕ್ಷ ರೂ.ಗಳನ್ನು ಮೀಸಲಿಡುತ್ತೇನೆ ವಸತಿ ನಿಗಮಗಳ
ಯೋಜನೆಯಲ್ಲಿ ಮೀಸಲಾತಿ, ಗ್ರಾಮ ಪಂಚಾಯಿತಿಯಲ್ಲಿ ಶೇ.5 ರಷ್ಟು ಅನುದಾನ ಮೀಸಲಿಡುತ್ತೇನೆ. ಪ್ರತಿ ಮತ ಕ್ಷೇತ್ರದಲ್ಲಿ ಶೇ. 5
ರಷ್ಟು ವಿಕಲಚೇತನರಿದ್ದಾರೆ. ಆಧಾರ್ ಯೋಜನೆಯಲ್ಲಿ ಒಂದು ಲಕ್ಷ ರೂ.ಸಾಲ ಸಿಗುತ್ತದೆ. ಅದರಲ್ಲಿ ಐವತ್ತು ಸಾವಿರ
ರೂ.ಸಬ್ಸಡಿ.ಲ್ಯಾಪ್‍ಟಾಪ್, ಹೊಲಿಗೆ ಯಂತ್ರ, ಅಂಧರಿಗೆ ಸ್ಮಾರ್ಟ್ ಫೋನ್‍ಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ
ವಿಕಲಚೇತನರಿಗೆ ಸಮುದಾಯ ಭವನ ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಅಂಗವಿಕಲರಿಗೆ ಅನುಕಂಪ ಬೇಡ. ಅವಕಾಶ
ಸಿಗಬೇಕು. ಸಾಮಾನ್ಯರಿಗಿಂತ ವಿಕಲಚೇತನರಲ್ಲಿ ವಿಶೇಷವಾದ ಸಾಮಥ್ರ್ಯವಿರುತ್ತದೆ. ಅಂಗವಿಕಲರಿಗೆ ಕೇವಲ ಸರ್ಕಾರದ ಸಹಾಯ
ಸಿಕ್ಕರೆ ಸಾಲದು. ಸಾರ್ವಜನಿಕರು, ವಿವಿಧ ಸಂಘಟನೆಗಳ ಜವಾಬ್ದಾರಿಯೂ ಇದೆ.ಸಬ್ಸಡಿ ಜೊತೆ ಬ್ಯಾಂಕ್‍ಗಳಲ್ಲಿ ಅಂಗವಿಕಲರಿಗೆ
ಸಾಲ ಸಿಗುವ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ದಲಿತ ಮುಖಂಡ ಬಿ.ರಾಜಣ್ಣ ಮಾತನಾಡುತ್ತ ಅಂಗವಿಕಲರಿಗೆ ಸರ್ಕಾರಿ ನೌಕರಿ ಸಿಗಬೇಕು. ಚಿತ್ರದುರ್ಗದಲ್ಲಿ ಕೈಗಾರಿಕಾ ಘಟಕ
ಪ್ರಾರಂಭಿಸಿದರೆ ವಿಕಲಚೇತರಿಗೆ ಉದ್ಯೋಗ ದೊರಕುತ್ತದೆ. ಹಾಗಾಗಿ ಕೈಗಾರಿಕೆ ಕಡೆ ಹೆಚ್ಚಿನ ಗಮನ ಕೊಡಬೇಕೆಂದು ಶಾಸಕ
ಕೆ.ಸಿ.ವೀರೇಂದ್ರಪಪ್ಪಿರವರಲ್ಲಿ ಅಂಗವಿಕಲರ ಪರವಾಗಿ ವಿನಂತಿಸಿದರು.

ಲೇಖಕ ಹೆಚ್.ಆನಂದಕುಮಾರ್, ಸೆಲ್ಕೋ ಪೌಂಡೇಶನ್‍ನ ಮಂಜುನಾಥ್ ಭಾಗವತ್ ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ
ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಟಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪಾಪಣ್ಣ, ಕಾರ್ಯದರ್ಶಿ ಕೆ.ಆನಂದ್,

ಎನ್.ಮೈಲಾರಪ್ಪಟಿ.ಕೆ.ವೆಂಕಟೇಶ್, ಭಾನುಕಿರಣ್, ಅಜ್ಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ,
ನ್ಯಾಯವಾದಿ ಪ್ರತಾಪ್‍ಜೋಗಿ, ಬಡಗಿ ಕೆಲಸಗಾರರ ಸಂಘದಅಧ್ಯಕ್ಷ ಎ.ಜಾಕಿರ್‍ಹುಸೇನ್, ವಾಗೀಶ್, ಜಾನಪದ ಜಾಗೃತಿ ಪರಿಷತ್
ಅಧ್ಯಕ್ಷ ಹೆಚ್.ಪ್ಯಾರೆಜಾನ್ ವೇದಿಕೆಯಲ್ಲಿದ್ದರು. ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *