ವಿಶ್ವ ವಿಕಲಚೇತನರ ದಿನಾಚರಣೆ| ‘ವಿಶೇಷಚೇತನರಿಗೆ ಅಸಾಧ್ಯವೆಂಬುದಿಲ್ಲ’- ಬಿಇಓ ಗಿರಿಜಾ ಸಂದೇಶ.

ಚಿತ್ರದುರ್ಗ ಡಿ. 09

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ವಿಶೇಷಚೇತನರು ಅಸಮಾನ್ಯರು.ಅವರಿಗೆ ಅಸಾಧ್ಯ ಎಂಬುದು ಯಾವುದಿಲ್ಲವೆಂದು ಬಿಇಓ ಗಿರಿಜಾರವರು ತಿಳಿಸಿದರು.

ನಗರದ ಗುರುಭವನದ ಮುಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಗ್ರ ಶಿಕ್ಷಣ ಇಲಾಖೆ,ಅಂಗವಿಕಲರ ಕಲ್ಯಾಣ ಇಲಾಖೆ ಮತ್ತು ವಿಕಲಚೇತನ ಹಾರೈಕೆದಾರರ ಸಂಘದ ಸಹಯೋಗದೊಂದಿಗೆ ಮಂಗಳವಾರ ವಿಶ್ವವಿಕಲ ಚೇತನರ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು. ವಿಶೇಷಚೇತನರು ದೈಹಿಕವಾಗಿ ಅಸಹಯಕರಾಗಿರಬಹುದು.ಆದರೆ ಸಾಧಿಸುವ ಛಲ ಹಾಗು ಹಠದಿಂದ ಗುರಿ ಮುಟ್ಟುವ ತವಕ ಅವರಲ್ಲಿರುತ್ತದೆ.ಹೀಗಾಗಿಅವರ ಸಾಧನೆಗೆ ಸಮುದಾಯ ಸಹಕರಿಸಬೇಕು.ಅವರ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಡಯಟ್ ಉಪಪ್ರಾಂಶುಪಾಲರಾದ ನಾಗಭೂಷಣ ಮಾತನಾಡಿ ವಿಶೇಷ ಚೇತನರ ಹಾರೈಕೆದಾರರ ಸಂಘ,ಅಂಗವಿಕಲರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಅರ್ಥಪೂರ್ಣ ಎನಿಸಿದೆ.ಚಿತ್ರದುರ್ಗ ತಾಲ್ಲೂಕಿನ ವಿಶೇಷಚೇತನ ಮಕ್ಕಳು ಈ ದೇಶದ ಅಸ್ತಿ ಎನ್ನುವ ನಿಟ್ಟಿನಲ್ಲಿ ಅವರ ಹಾರೈಕೆಗೆ ಅವರ ಕುಟುಂಬಸ್ಥರೇ ಹಾರೈಕೆದಾರರ ಸಂಘಕಟ್ಟಿಕೊಂಡು ಪಾಲನೆ ಪೋಷಣೆ ಮಾಡ್ತಿರೋದು ಸ್ವಾಗತಾರ್ಹ.ಈ ಮಕ್ಕಳಿಗೆ ಇದು ಸ್ಪೂರ್ತಿಯಾಗಿ ಮುಂದಿನ ದಿನಗಳಲ್ಲಿ ಸ್ವಾವಲಂಬಿಗಳಾಗಿ ಸಾಧನೆಗೈಯ್ಯುವುದರಲ್ಲಿ ಯಾವ್ದೇ ಅನುಮಾನವಿಲ್ಲ. ಇಂತಹ ಮಕ್ಕಳಿಗೆ ಸರ್ಕಾರ ಸಾಕಷ್ಟು ನೆರವು ನೀಡಿದರು ಸಹ ಕುಟುಂಬಸ್ಥರು ಅವರ ಜವಬ್ದಾರಿ ಮೆರೆಯುವ ಮೂಲಕ ಉತ್ತಮ ಕಾರ್ಯ ನಡೆಸಿದ್ದಾರೆಂದರು.

ಕಾರ್ಯ ನಿರತಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎಸ್.ಸಿದ್ದರಾಜು ಮಾತನಾಡಿ,ಇಂದಿನ ಸಮಾಜದಲ್ಲಿ ವಯಸ್ಸಾದ ತಂದೆತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವ ಸಂಪ್ರದಾಯ ನಿರಂತರವಾಗಿದೆ. ಆದರೆ ಈ ವಿಶೇಷಚೇತನ ಮಕ್ಕಳು ಅವರ ಕುಟುಂಬದ ಪಾಲಿಗೆ ಅಧೃಷ್ಟವಂತರಾಗಿದ್ದಾರೆ.ಅವರ ಪರಿಸ್ಥಿತಿ, ಅಸಹಯಕತೆಯಿಂದ ದುರಾಧೃಷ್ಟವಂತರು ಎನಿಸಿದ್ರು ಸಹ ಹೆತ್ತವರಿಗೆ ಅಧೃಷ್ಟವಂತರೆನಿಸಿದ್ದಾರೆ.ಕೊನೆತನಕ ಹೆತ್ತವರ ಉಸಿರಾಗಿ ಬದುಕುತ್ತಾರೆ.ಹೆತ್ತವರು ನನ್ನ ಮಗ ನಮ್ಮನ್ನು ನೋಡ್ಕೊಳ್ಳಲಿಲ್ಲ ಅಂತ ಎನ್ನುವುದಕ್ಕಿಂತ ತಾಯಿಯೇ ಜೀವನ ಪರ್ಯಂತ ಈ ಮಕ್ಕಳನ್ನು ನೋಡ್ಕೊತಾರೆ. ಎಂದಿಗೂ ಹೆತ್ತವರಿಗೆ ನೋವು ನೀಡದೇ ಸದಾ ಅವರ ಮಡಿಲಲ್ಲೇ ಬೆಳೆದು ವಯಸ್ಸಾದ ತಂದೆತಾಯಿಗಳು ವೃದ್ದಾಪ್ಯ ಜೀವನವನ್ನು ನೆಮ್ಮದಿಯಿಂದ ಕಳೆಯಲು ಸಹಕಾರಿ ಎನಿಸಿದ್ದಾರೆ.ಇನ್ನು ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಹುಟ್ಟುವಾಗಲೇ ವಿಕಲಚೇತನರಾಗಿ ಜನ್ಮಪಡೆದರು ಕೂಡ ಕಣ್ಣಲ್ಲಿ ಕಣ್ಣಿಟ್ಟು ಹಾರೈಕೆ ಮಾಡುವ ತಾಳ್ಮೆ,ಸಹನೆ ಸೇರಿದಂತೆ ಸೇವಾ ಭಾವನೆ ಹೊಂದಿರುವ ವಿಕಲಚೇತನ ಹಾರೈಕೆದಾರರ ಸಂಘ ಸ್ಥಾಪಿಸಿರುವ ಅಧ್ಯಕ್ಷರಾದ ಅನ್ನಪೂರ್ಣ ಅವರ ಕಾರ್ಯ ಶ್ಲಾಘನೀಯ ಎಂದರು. ಸತತ 10 ವರ್ಷಗಳಿಂದ ಅವರ ವಿಕಲಚೇತನ ಮಗುವನ್ನು ಹಾರೈಕೆ ಮಾಡಿರುವ ಇವರು, ಸ್ವಾರ್ಥಿಯಾಗದೇ ಅವರ ಮಗುವಿನ ಪಾಲನೆಯೊಂದೇ ಮುಖ್ಯವೆಂದು ಭಾವಿಸದೇ ಜಿಲ್ಲೆಯ ವಿಶೇಷ ಚೇತನ ಮಕ್ಕಳ ಏಳಿಗೆಗಾಗಿ ಕಟ್ಟಿರುವ ಹಾರೈಕೆದಾರರ ಸಂಘಟನೆ ಈ ಮಕ್ಕಳ ಪಾಲಿಗೆ ವರವಾಗಿದೆ.ಈ ಸಂಘಟನೆ ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸಿದರು.

ವಿಕಲಚೇತನ ಕಲ್ಯಾಣಾಧಿಕಾರಿ ವೈಶಾಲಿಯವರು ಸಹ ಮಕ್ಕಳನ್ನುದ್ದೇಶಿಸಿ ಮಾತನಾಡಿದ್ದು, ತಾಳ್ಮೆ,ಸಹನೆ ಇರುವ ಪೋಷಕರಿಗೆ ದೈವತ್ವ ಇರುವ ಪೋಷಕರು ಜನಿಸಲಿದ್ದಾರೆ.ಇಂತಹ ಮಕ್ಕಳನ ಪಾಲನೆ, ಹಾರೈಕೆಗಾಗಿ ವಿಕಲಚೇತನ ಇಲಾಖೆ,ಶಿಕ್ಷಣಇಲಾಕೆ ಸಹಕರಿಸಲಿವೆ.ಶಾಲಾಧಾಖಲಾತಿಯಿಂದ,ಮಕ್ಕಳ ಆರೋಗ್ಯ ಹಾಗು ತೆರಫಿ ಚಿಕಿತ್ಸೆಗಾಗಿ ಶಿಕ್ಷಣ ಇಲಾಖೆ ಸಹಕಾರ ಶ್ಲಾಘನೀಯ ಎಂದರು.

ಬಿಆರ್‍ಸಿ ಸಂಪತ್ ಕುಮಾರ್ ಮಾತನಾಡಿ, ವಿಕಲಚೇತನ ಮಕ್ಕಳು ಬಂದಾಯ ಆರೋಗ್ಯ ತಪಾಸಣೆ ಅಥವಾ ಜಾಗೃತಿ ಕಾರ್ಯಕ್ರಮ ಅಂತ ಭಾವಿಸುವ ವಾತಾವರಣ ಇತ್ತು.ಇಂದು ಆ ಮಕ್ಕಳಲ್ಲಿ ಸಂಭ್ರಮದ ವಾತಾವರಣವಿದೆ.ಇಂತಹ ಮಕ್ಕಳನ್ನು ಕಂಡಾಗ ಇಡೀ ಕುಟುಂಬ ನಲುಗಿರುತ್ತದೆ. ಆದರೆ ಇಂತಹ ಮಕ್ಕಳ ಪಾಲನೆಯೊಂದಿಗೆ ಅವರನ್ನು ಮುಖ್ಯವಾಹಿನಿಗೆ ತರಲು ಅಧಿಕಾರಿಗಳೊಂದಿಗೆ ಕುಟುಂಬ ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ ಪತ್ರಕರ್ತರಾದ ಎಸ್.ಸಿದ್ದರಾಜು ಸೇರಿದಂತೆ ವಿಕಲಚೇತನ ಮಕ್ಕಳ ತಾಯಂದಿರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಬಿಆರ್‍ಸಿ ಕೇಂದ್ರದ ಡಿಆರ್ ಟಿ ರಾಜಣ್ಣ ನೆರವೇರಿಸಿದರು.ಎಪಿಡಿ ಸಂಸ್ಥೆಯ ನಂದಿನಿ,ವೇದಮೂರ್ತಿ,ಪುಷ್ಪ ಹಾಗು ಹಾರೈಕೆದಾರರಸಂಘದ ಪ್ರಧಾನಕಾರ್ಯದರ್ಶಿ ಭವ್ಯ, ಕಾರ್ಯದರ್ಶಿ ಚನ್ನಪ್ಪ ಇತರರು ಇದ್ದರು.

Views: 59

Leave a Reply

Your email address will not be published. Required fields are marked *