ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ.

ಮೈಸೂರು:ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ದಿನಾಂಕ 05.06.2025 ರಂದು ಹೈದರಲಿರಸ್ಥೆ ಇಲ್ಲಿ ಪರಿಸರ ಸಂರಕ್ಷಣೆ ಜಾಗೃತಿಗಾಗಿ ಜಾಥ ಕಾರ್ಯಕ್ರಮ ನಡೆಸಲಾಯಿತು. ಹೈದರಲಿ ರಸ್ಥೆ ಇಲ್ಲಿಂದ ಆರಂಭವಾಗಿ ಚಾಮುಂಡೇಶ್ವರಿ ಸ್ಟೇಡಿಯಂ ಮುಂಬಾಗ, ಗೋಪಾಲಗೌಡ ಆಸ್ಪತ್ರೆ, ಹಾಲಿನಡೈರಿ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬಂದು ಪರಿಸರ ಸಂರಕ್ಷಣೆಗೆ ಮನವಿಯನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಉಧ್ಘಾಟಕರಾಗಿ ಶ್ರೀ. ಚಂದ್ರೇಗೌಡರು, ಕೆ.ಎ.ಎಸ್ ಮಾಜಿ ಆಯುಕ್ತರು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗ ಬೆಂಗಳೂರು ಇವರು ಮಾತನಾಡುತ್ತಾ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಧ್ಯೇಯವಾಕ್ಯದೊಂದಿಗೆ ಜೂನ್ 5 ರಂದು ವಿಶ್ವ ಪರಿಸರ ದಿನ 2025 ಅನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ತುರ್ತು ಜಾಗತಿಕ ಕ್ರಮಕ್ಕೆ ಈ ಕಾರ್ಯಕ್ರಮ ಕರೆ ನೀಡುತ್ತದೆ.
ಪರಿಸರ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ
2025 ರ ಧ್ಯೇಯವಾಕ್ಯವು ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಮೈಸೂರಿನ ಐದರಲ್ಲಿ ರಸ್ತೆಯಲ್ಲಿ ಹಳೆಯ 40ಕ್ಕೆ ಹೆಚ್ಚು ಮರಗಳನ್ನು ಕರೆದಿದ್ದು ಅದಕ್ಕೂ ಪರ್ಯಾಯವಾಗಿ ಗಿಡಗಳನ್ನು ನೆಡಬೇಕು ಎಂದು ತಿಳಿಸಿದರು. ಯುವ ಜನತೆಯ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಹವಾಮಾನ ಬದಲಾವಣೆಯಿಂದ ಹಿಡಿದು ಜೀವವೈವಿಧ್ಯತೆಯ ನಷ್ಟದವರೆಗೆ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ.ರಾಷ್ಟ್ರೀಯ ಗಡಿಗಳನ್ನು ಮೀರಿದ ಪರಿಸರ ಸವಾಲುಗಳನ್ನು ಪರಿಹರಿಸುವಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಬೆಳೆಸುತ್ತದೆ.
2025 ರ ‘ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’ ಎಂಬ ಧ್ಯೇಯವಾಕ್ಯವು ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವುದು, ಮರುಬಳಕೆಯನ್ನು ಉತ್ತೇಜಿಸುವುದು ಮತ್ತು ಪ್ಲಾಸ್ಟಿಕ್ ಉತ್ಪನ್ನಗಳಿಗೆ ಸುಸ್ಥಿರ ಪರ್ಯಾಯಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. ಈ ಗಮನವು ಸಮುದ್ರ ಜೀವನ, ವನ್ಯಜೀವಿಗಳು ಮತ್ತು ಮಾನವ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ಹಾನಿಕಾರಕ ಪರಿಣಾಮಗಳನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಪರಿಸರ ಸಂರಕ್ಷಣೆಯ ಗುರಿಯನ್ನು ಹೊಂದಿರುವ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ನೀತಿಗಳನ್ನು ಬೆಂಬಲಿಸುವ ಮೂಲಕ, ವ್ಯಕ್ತಿಗಳು ಮತ್ತು ಸಮುದಾಯಗಳು ನಮ್ಮ ಗ್ರಹದ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಬಹುದು ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸರಸ್ವತಿ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮತ್ತು ಉದ್ದೇಶದ ಕುರಿತು ತಿಳಿಸಿದರು. ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯು ಒಂದು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕಳೆದ 40 ವರ್ಷಗಳಿಂದಲೂ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ 56 ಕೊಳಚೆ ಪ್ರದೇಶಗಳಲ್ಲಿ ಮತ್ತು ಉತ್ತರ ಕರ್ನಾಟಕದ 5 ಹಿಂದುಳಿದ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ, ಮಕ್ಕಳಾಭಿವೃದ್ಧಿ, ಯುವಕರ ಸಬಲೀಕರಣ, ಮಹಿಳಾಭಿವೃದ್ಧಿ ಸಮೂದಾಯ ಆರೋಗ್ಯ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಯೋಜನೆಗಳ ಸದುಪಯೋಗ ಕುರಿತು ಜನರೊಟ್ಟಗೆ ಶ್ರಮಿಸುತ್ತದೆ. ಅಲ್ಲದೆ ಸಂಸ್ಥೆ ವತಿಯಿಂದ ಮೈಸೂರು, ಗುಂಡ್ಲುಪೇಟೆ, ಗುಲ್ಬರ್ಗ ಮತ್ತು ಬೀದರ್ ತಾಲ್ಲೂಕಿನಲ್ಲಿ 40 ಯುವಕರ ಗುಂಪುಗಳನ್ನು ರಚನೆಮಾಡಿದ್ದು ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಯೂತ್‌ನೆಟ್ವರ್ಕ್ ಎಂಬ ಗುಂಪು ರಚನೆಯಾಗಿದೆ. ಯುವಜನರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಪರಿಸರ ಸಂಬಂದಿಸಿದ ಕಾರ್ಯಕ್ರಮಗಳು, ಸಾವಯವ ಗೊಬ್ಬರಗಳ ಬಳಕೆ, ಪ್ಲಾಸ್ಟಿಕ್ ಬಳಕೆಯ ನಿಷೇಧ, ಘನತ್ಯಾಜ್ಯ ಘಟಕ, ಜಾಗತಿಕ ತಾಪಮಾನ ಹಾಗೂ ಪ್ರಕೃತಿ ವಿಕೋಪ ಹೀಗೆ ಹಲವಾರು ಪರಿಸರಕ್ಕೆ ಸಂಬಂದಿಸಿದ ವಿಷಯಗಳ ಕುರಿತು ಮಕ್ಕಳು, ಮಹಿಳೆಯರು, ಯುವಜನರು ಮತ್ತು ಸಮುದಾಯಕ್ಕೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಅತಿಥಿಗಳಾಗಿ ಶ್ರೀ ಪ್ರೋ. ಜೋಸ್ ವಿ, ಕೆ. ಕಾರ್ಯದರ್ಶಿಗಳು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಸುಮಾರು 100ಕ್ಕೂ ಹೆಚ್ಚು ಯುವಕ/ಯುವತಿಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *