World Turtle Day 2025: ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಆಮೆಗಳ ಪಾತ್ರ ಅಪಾರ; ವಿಶ್ವ ಆಮೆ ದಿನದ ಮಹತ್ವ.

ಈ ಭೂಮಿಯ ಮೇಲೆ ಅನೇಕ ಪ್ರಬೇಧದ ಜೀವಿಗಳಿವೆ, ಅವುಗಳಲ್ಲಿ ಕೆಲವೊಂದು ಅಳಿದು ಹೋಗಿವೆ. ಈ ಜೀವ ವೈವಿಧ್ಯಗಳು ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿವೆ. ಅವುಗಳಲ್ಲಿ ಆಮೆಯೂ ಕೂಡಾ ಒಂದು. ಈ ಪ್ರಪಂಚದಲ್ಲಿ ಹಲವು ಜಾತಿಯ ಆಮೆಗಳಿದ್ದು, ಅವುಗಳಲ್ಲಿ ಅವೆಷ್ಟೋ ಅಳಿವಿನಂಚಿಗೆ ತಲುಪಿವೆ. ಹಾಗಾಗಿ ಅವುಗಳನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ನೀವು ಕೂಡ ಆಮೆ (Turtle) ಮತ್ತು ಮೊಲದ ಕಥೆಯನ್ನು ಕೇಳಿದ್ದೀರಿ ಅಲ್ವಾ. ತುಂಬಾ ತಾಳ್ಮೆ ಹಾಗೂ ನಿಧಾನವಾಗಿ ಚಲಿಸುವ ಆಮೆಗಳು  ಭೂಮಿಯ ಮೇಲಿನ ಅತಿ ಹೆಚ್ಚು ಕಾಲ ಬದುಕುವ ಜೀವಿಗಳಲ್ಲಿ ಒಂದಾಗಿದೆ. ಸರೀಸೃಪ ಗುಂಪಿಗೆ ಸೇರಿದ ಆಮೆಯ  150 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು ಎಂದು ನಂಬಲಾಗಿದೆ. ಭೂಮಿಯ ಮೇಲೆ ಲಕ್ಷಾಂತರ ವರ್ಷಗಳಿಂದ ಅಸ್ತಿತ್ವದಲ್ಲಿರು ಆಮೆಗಳು ಪರಿಸರ ವ್ಯವಸ್ಥೆಯನ್ನು (ecosystem) ಸ್ಥಿರವಾಗಿಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತಿವೆ. ಈ ಪ್ರಪಂಚದಲ್ಲಿ ಹಲವಾರು ಜಾತಿಯ ಆಮೆಗಳಿದ್ದು, ಮಾನವನ ಸ್ವಾರ್ಥಕ್ಕೆ ಅವುಗಳ ಅಸ್ತಿತ್ವಕ್ಕೆ ಕಂಟಕ ಎದುರಾಗಿದೆ. ಹಾಗಾಗಿ ಆಮೆಗಳನ್ನು ಸಂರಕ್ಷಿಸಲು, ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಮೇ 23 ರಂದು ವಿಶ್ವ ಆಮೆ (World Turtle Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ತಿಳಿಯಿರಿ.

ವಿಶ್ವ ಆಮೆ ದಿನದ ಇತಿಹಾಸ:

ವಿಶ್ವ ಆಮೆ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಅಮೆರಿಕನ್‌ ಟಾರ್ಟಾಯಿಸ್‌ ರೆಸ್ಕ್ಯೂ ಎಂಬ ಲಾಭರಹಿತ ಸಂಸ್ಥೆ ಪ್ರಾರಂಭಿಸಿತು. ಇದು ಅಳಿವಿನಂಚಿನಲ್ಲಿರುವ ಮತ್ತು ಅಪಾಯದಲ್ಲಿರುವ ಆಮೆಗಳನ್ನು ರಕ್ಷಿಸುವ ಅವುಗಳಿಗೆ ಸುರಕ್ಷಿತ ಸ್ಥಳವನ್ನು ಒದಗಿಸಿ ಕೊಡುವ ಉದ್ದೇಶವನ್ನು ಹೊಂದಿದೆ.

ವಿಜ್ಞಾನಿಗಳು ಹೇಳುವ ಪ್ರಕಾರ ಅಮೆಗಳು ಈ ಭೂಮಿಯ ಮೇಲಿರುವ ಅತ್ಯಂತ ಹಳೆಯ ಪ್ರಾಣಿಗಳಾಗಿವೆ. ಆಮೆಗಳು ಭೂಮಿಯ ಮೇಲೆ ಸುಮಾರು 220 ಮಿಲಿಯನ್‌ ವರ್ಷಗಳಿಂದ ಅಸ್ತಿತ್ವದಲ್ಲಿವೆ. ಅಂದರೆ ಡೈನೋಸಾರ್‌ ಭೂಮಿಯ ಮೇಲೆ ಬರುವುದಕ್ಕೂ ಮುಂಚೆಯೇ ಇವುಗಳ ಅಸ್ತಿತ್ವವಿತ್ತು. ಆದರೆ ಇಂದು ಇವುಗಳ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗಿದೆ. ಹಾಗಾಗಿ ಇವುಗಳ ರಕ್ಷಣೆಯ ಉದ್ದೇಶದಿಂದ ಈ ಲಾಭರಹಿತ ಸಂಸ್ಥೆ ಈ ವಿಶೇಷ ದಿನದ ಆಚರಣೆಯನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಆಮೆ ದಿನದ ಮಹತ್ವ:

ಆಮೆಗಳು ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ. ಅಕ್ರಮ ವ್ಯಾಪಾರ, ಪರಿಸರ ಮಾಲಿನ್ಯ, ಹವಾಮಾನ ಬದಲಾವಣೆ ಈ ಎಲ್ಲಾ ಕಾರಣಗಳಿಂದ ಆಮೆಗಳ ಸಂತತಿ ಅಳಿವಿನಂಚಿಗೆ ತಲುಪಿದ್ದು, ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಆಮೆಗಳನ್ನು ಕೇವಲ ಚಿತ್ರಗಳಲ್ಲಿ ನೋಡುವ ಕಾಲ ಬಂದರೂ ಆಶ್ಚರ್ಯವಿಲ್ಲ. ಹಾಗಾಗಿ ಇವುಗಳ ಸಂರಕ್ಷಣೆಯ ಉದ್ದೇಶದಿಂದ ಈ ದಿನದ ಆಚರಣೆ ಮಹತ್ವದ್ದಾಗಿದೆ.

ಈ ದಿನ ಜನರಿಗೆ ಶಿಕ್ಷಣ ನೀಡುವ, ಆಮೆಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಡಲ ತೀರಗಳನ್ನು ಸ್ವಚ್ಛಗೊಳಿಸುವುದು, ಆಮೆಗಳ ಆವಾಸಸ್ಥಾನಗಳನ್ನು ಸ್ವಚ್ಛಗೊಳಿಸುವುದು ಇತ್ಯಾದಿ ಕಾರ್ಯಗಳನ್ನು ಆಯೋಜಿಸಲಾಗುತ್ತದೆ.

ಪರಿಸರ ವ್ಯವಸ್ಥೆಯಲ್ಲಿ ಆಮೆಗಳ ಪಾತ್ರ:

ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿಡುವಲ್ಲಿ ಆಮೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಲಿವ್‌ ರಿಡ್ಲಿ, ಲೆದರ್‌ ಬ್ಯಾಕ್‌ ಮುಂತಾದ ಸಮುದ್ರ ಆಮೆಗಳು ಕರಾವಳಿ ಪ್ರದೇಶಗಳನ್ನು ಸ್ವಚ್ಛಗೊಳಿಸವಲ್ಲಿ ಮತ್ತು ಸತ್ತ ಮೀನುಗಳನ್ನು ಕೊಳೆತ ಸಸ್ಯರಾಶಿಗಳನ್ನು ತಿನ್ನುವ ಮೂಲಕ ಸಮುದ್ರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಭೂಮಿಯ ಮೇಲೆ ವಾಸಿಸುವ ಆಮೆಗಳು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *