ಚಿತ್ರದುರ್ಗದಲ್ಲಿ ಮಾರ್ಚ್ 24ರಂದು “World Women’s Day” ಹಾಗೂ ಶಿವಶಿಂಪಿ ಮಹಿಳಾ ಸಂಭ್ರಮ

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 18
ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಶಿವಶಿಂಪಿ ಮಹಿಳಾ ಸಂಭ್ರಮವನ್ನು ಮಾ. 24 ಮಂಗಳವಾರ ನಗರದ ಎಸ್.ಆರ್.ಬಿ.ಎಂ.ಎಸ್. ರೋಟರಿ ಬಾಲಭವನ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದ ಖಂಜಾಚಿ ನಿರ್ಮಲ ಬಸವರಾಜು ತಿಳಿಸಿದ್ದಾರೆ. 


ವಿಶ್ವ ಮಹಿಳಾ ದಿನಾಚರಣೆ ಶಿವಶಿಂಪಿ ಮಹಿಳಾ ಸಂಭ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಇಂದಿರಾ ಜಯದೇವಮೂರ್ತಿ ವಹಿಸಲಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರು, ಉಪನ್ಯಾಸಕರಾದ ಶ್ರೀಮತಿ ನಿರ್ಮಲ ಮರಡಿಹಳ್ಳಿ  ಭಾಗವಹಿಸಲಿದ್ದು, ‘ಇಂದಿನ ಮಹಿಳೆಯರ ಶಿಕ್ಷಣ ಮತ್ತು ಜೀವನ’ದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. 


ಇದೇ ಸಂದರ್ಭದಲ್ಲಿ ಸಾಗರದ ಭರತನಾಟ್ಯ ಕಲಾವಿದೆ ಕುಮಾರಿ ಎಸ್.ಎಂ. ಚಂದನರವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಲಿಂಗಾಯತ ಶಿವಶಿಂಪಿ ಚಿತ್ರದುರ್ಗ ಮಹಿಳಾ ಘಟಕದ  ಕಾರ್ಯದರ್ಶಿ ಶ್ರೀಮತಿ ಶೈಲ ವಿಜಯಕುಮಾರ್ ಭಾಗವಹಿಸಲಿದ್ದಾರೆ. ಸಮಾರಂಭದ ನಂತರ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ.

Leave a Reply

Your email address will not be published. Required fields are marked *