WPL 2023: 41 ರನ್​ಗಳ ಜಯ: ಪ್ಲೇಆಫ್ ಪ್ರವೇಶಿಸಲು RCB ತಂಡದ ಲೆಕ್ಕಾಚಾರ ಹೀಗಿದೆ

How RCB Can Qualify For The WPL Playoffs

WPL 2023: ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್​ನ 2ನೇ ಸುತ್ತಿನ ಪಂದ್ಯಗಳ ಮುಕ್ತಾಯಕ್ಕೂ ಮೊದಲೇ ಎರಡು ತಂಡಗಳು ಪ್ಲೇಆಫ್ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್ (Mumbai Indians) ತಂಡವು 6 ಪಂದ್ಯಗಳಲ್ಲಿ 5 ಜಯ ಸಾಧಿಸಿ 10 ಪಾಯಿಂಟ್​ಗಳೊಂದಿಗೆ ಪ್ಲೇಆಫ್ ಹಂತಕ್ಕೇರಿದರೆ, ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು 6 ರಲ್ಲಿ 4 ಜಯ ಸಾಧಿಸಿ 8 ಅಂಕಗಳೊಂದಿಗೆ ಮುಂದಿನ ಹಂತಕ್ಕೇರಿದೆ. ಇನ್ನು ಒಂದು ತಂಡಕ್ಕೆ ಮಾತ್ರ ಪ್ಲೇಆಫ್ ಹಂತಕ್ಕೇರುವ ಅವಕಾಶವಿದೆ. ಅಂದರೆ ವುಮೆನ್ಸ್ ಪ್ರೀಮಿಯರ್ ಲೀಗ್ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಹಾಗೆಯೇ 2ನೇ ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವಾಡಲಿದೆ. ಇದರಲ್ಲಿ ಗೆಲ್ಲುವ ತಂಡಕ್ಕೆ ಫೈನಲ್ ಆಡುವ ಅವಕಾಶ ಸಿಗಲಿದೆ. ಈಗಾಗಲೇ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಪ್ರವೇಶಿಸುವುದರಿಂದ ಇನ್ನು ಒಂದು ತಂಡಕ್ಕೆ ಮಾತ್ರ ಟಾಪ್-3 ನಲ್ಲಿ ಕಾಣಿಸಿಕೊಳ್ಳುವ ಅವಕಾಶವಿದೆ.

ಇಲ್ಲಿ ಮೂರನೇ ಸ್ಥಾನ ಪಡೆಯಲು ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಅಂದರೆ ಮೂರನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್, 4ನೇ ಸ್ಥಾನದಲ್ಲಿ ಆರ್​ಸಿಬಿ ಹಾಗೂ 5ನೇ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ನಡುವೆ ಎಲಿಮಿನೇಟರ್ ಹಂತಕ್ಕೇರಲು ಪೈಪೋಟಿ ಕಂಡು ಬರಲಿದೆ. ಇದರ ಬೆನ್ನಲ್ಲೇ ಪ್ಲೇಆಫ್ ಹಂತಕ್ಕೇರಲು ಆರ್​ಸಿಬಿ ತಂಡದ ಲೆಕ್ಕಚಾರಗಳು ಕೂಡ ಮುನ್ನಲೆಗೆ ಬಂದಿವೆ.

ಆರ್​ಸಿಬಿ ತಂಡವು ಮೊದಲ 5 ಪಂದ್ಯಗಳಲ್ಲಿ ಸೋತರೂ, ಇದೀಗ ಬ್ಯಾಕ್ ಟು ಬ್ಯಾಕ್ 2 ಗೆಲುವು ದಾಖಲಿಸಿದೆ. ಈ ಮೂಲಕ ಎಲಿಮಿನೇಟರ್ ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಇಲ್ಲಿ ಆರ್​ಸಿಬಿ ತಂಡವು ಎಲಿಮಿನೇಟರ್ ಹಂತಕ್ಕೇರಲು ಉಳಿದ ತಂಡಗಳ ಪಂದ್ಯಗಳ ಫಲಿತಾಂಶ ಕೂಡ ನಿರ್ಣಾಯಕ.

ಅಂದರೆ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೆ ಮಾತ್ರ ಸಾಲದು. ಬದಲಾಗಿ ಗುಜರಾತ್ ಜೈಂಟ್ಸ್ ತಂಡವು ಯುಪಿ ವಾರಿಯರ್ಸ್ ಅನ್ನು ಸೋಲಿಸಬೇಕು. ಹಾಗೆಯೇ ಯುಪಿ ವಾರಿಯರ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಬೇಕು. ಅಂದರೆ ಮುಂದಿನ 2 ಪಂದ್ಯಗಳಲ್ಲೂ ಯುಪಿ ವಾರಿಯರ್ಸ್ ತಂಡವು ಸೋತರೆ ಮಾತ್ರ ಆರ್​ಸಿಬಿಗೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಸಿಗಲಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಆರ್​ಸಿಬಿ ತಂಡವು ತನ್ನ ನೆಟ್​ ರನ್​ ರೇಟ್ ಹೆಚ್ಚಿಸಲು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಬೇಕು. ಅಂದರೆ ಕನಿಷ್ಠ 41 ರನ್​ಗಳ ಅಂತರದ ಜಯ ಸಾಧಿಸಲೇಬೇಕು.

ಅದೇ ರೀತಿ ಯುಪಿ ವಾರಿಯರ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಕನಿಷ್ಠ 41 ರನ್​ಗಳ ಅಂತರದಿಂದ ಸೋಲು ಕಾಣಬೇಕು. ಇದರಿಂದ ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿರುವ ಯುಪಿ ವಾರಿಯರ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಹಾಗೆಯೇ 4ನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೆಚ್ಚಿನ ನೆಟ್​ ರನ್​ ರೇಟ್ ಮೂಲಕ 3ನೇ ಸ್ಥಾನಕ್ಕೇರಲಿದೆ.

ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಟಾಪ್-3 ನಲ್ಲಿ ಸ್ಥಾನ ಪಡೆದು ಆರ್​ಸಿಬಿ ತಂಡವು ಎಲಿಮಿನೇಟರ್ ಪಂದ್ಯವಾಡಬಹುದು. ಹೀಗಾಗಿ ಆರ್​ಸಿಬಿ ತಂಡದ ಮುಂದಿನ ಪಂದ್ಯವು ಸಂಪೂರ್ಣ ಲೆಕ್ಕಾಚಾರಗಳಿಂದ ಕೂಡಿರಲಿದೆ. ಹಾಗೆಯೇ ಯುಪಿ ವಾರಿಯರ್ಸ್ ತಂಡದ ಪಂದ್ಯದ ವೇಳೆಯೂ ಆರ್​ಸಿಬಿ ಲೆಕ್ಕಾಚಾರ ಮಾಡಲಿದೆ.

ವಿ.ಸೂ: ಮುಂದಿನ 2 ಪಂದ್ಯಗಳಲ್ಲಿ ಯುಪಿ ವಾರಿಯರ್ಸ್​ ಒಂದು ಪಂದ್ಯ ಗೆದ್ದರೆ ಆರ್​ಸಿಬಿ ಪ್ಲೇಆಫ್ ರೇಸ್​ನಿಂದ ಹೊರಬೀಳಲಿದೆ.

ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಡಿವೈನ್ , ಎಲ್ಲಿಸ್ ಪೆರ್ರಿ , ಕನಿಕಾ ಅಹುಜಾ , ಹೀದರ್ ನೈಟ್ , ಶ್ರೇಯಾಂಕಾ ಪಾಟೀಲ್ , ಎರಿನ್ ಬರ್ನ್ಸ್ , ಕೋಮಲ್ ಝಂಝಾದ್ , ರೇಣುಕಾ ಠಾಕೂರ್ ಸಿಂಗ್ , ಸಹನಾ ಪವಾರ್ , ಪೂನಮ್ ಖೇಮ್ನಾರ್ , ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್ , ಪ್ರೀತಿ ಬೋಸ್ , ಇಂದ್ರಾಣಿ ರಾಯ್ , ಆಶಾ ಶೋಬನಾ.

 

source https://tv9kannada.com/sports/cricket-news/wpl-2023-how-can-rcb-womens-qualify-for-playoffs-zp-au50-539159.html

Views: 0

Leave a Reply

Your email address will not be published. Required fields are marked *