WPL 2024: RCB ತಂಡಕ್ಕೆ ಭರ್ಜರಿ ಜಯ

WPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು.

ಆರಂಭಿಕ ಆಟಗಾರ್ತಿ ಬೆತ್ ಮೂನಿ ಕೇವಲ 8 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಲಿಚ್​ಫೀಲ್ಡ್​ 5 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ವೇದಾ ಕೃಷ್ಣ ಮೂರ್ತಿ ಕೇವಲ 9 ರನ್​ಗಳಿಸಲಷ್ಟೇ ಶಕ್ತರಾದರು. ಇನ್ನು ಹರ್ಲೀನ್ ಡಿಯೋಲ್ 31 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 22 ರನ್​ಗಳನ್ನು ಮಾತ್ರ.

ಇದಾಗ್ಯೂ ಕೆಳ ಕ್ರಮಾಂಕದಲ್ಲಿ ಆರ್​ಸಿಬಿ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಹೇಮಲತಾ 31 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುಜರಾತ್ ಜೈಂಟ್ಸ್ ತಂಡವು 107 ರನ್​ ಕಲೆಹಾಕಿತು.

108 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ಪರ ಸೋಫಿ ಡಿವೈನ್ (6) ಮತ್ತೊಮ್ಮೆ ವಿಫಲರಾದರು. ಮತ್ತೊಂದೆಡೆ ನಾಯಕಿಯ ಆಟವಾಡಿದ ಸ್ಮೃತಿ ಮಂಧಾನ 27 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 43 ರನ್ ಬಾರಿಸಿ ಮಿಂಚಿದರು.

ಇನ್ನು ಸಬ್ಬಿನೇನಿ ಮೇಘನಾ ಅಜೇಯ 36 ಹಾಗೂ ಎಲ್ಲಿಸ್ ಪೆರ್ರಿ ಅಜೇಯ 23 ರನ್​ ಬಾರಿಸುವ ಮೂಲಕ 12.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆರ್​ಸಿಬಿ ತಂಡವು 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಆರ್​ಸಿಬಿ ಪ್ಲೇಯಿಂಗ್ 11: ಸೋಫಿ ಡಿವೈನ್ , ಸ್ಮೃತಿ ಮಂಧಾನ (ನಾಯಕಿ) , ಸಬ್ಬಿನೇನಿ ಮೇಘನಾ , ಎಲ್ಲಿಸ್ ಪೆರ್ರಿ , ರಿಚಾ ಘೋಷ್ (ವಿಕೆಟ್ ಕೀಪರ್) , ಜಾರ್ಜಿಯಾ ವೇರ್ಹಮ್ , ಸೋಫಿ ಮೊಲಿನೆಕ್ಸ್ , ಶ್ರೇಯಾಂಕಾ ಪಾಟೀಲ್ , ಸಿಮ್ರಾನ್ ಬಹದ್ದೂರ್ , ಆಶಾ ಶೋಭಾನಾ , ರೇಣುಕಾ ಠಾಕೂರ್ ಸಿಂಗ್.

ಗುಜರಾತ್ ಜೈಂಟ್ಸ್ ಪ್ಲೇಯಿಂಗ್​ 11: ಬೆತ್ ಮೂನಿ (ನಾಯಕಿ) , ವೇದಾ ಕೃಷ್ಣಮೂರ್ತಿ , ಹರ್ಲೀನ್ ಡಿಯೋಲ್ , ಫೋಬೆ ಲಿಚ್​ಫೀಲ್ಡ್ , ದಯಾಲನ್ ಹೇಮಲತಾ , ಆಶ್ಲೀಗ್ ಗಾರ್ಡ್ನರ್ , ಕ್ಯಾಥರಿನ್ ಬ್ರೈಸ್ , ಸ್ನೇಹ ರಾಣಾ , ತನುಜಾ ಕನ್ವರ್ , ಲೀ ತಹುಹು , ಮೇಘನಾ ಸಿಂಗ್.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *