ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ವಿರುದ್ಧ ರೋಚಕ ಗೆಲುವು ದಾಖಲಿಸುವ ಮೂಲಕ ಆರ್‌ಸಿಬಿ ಚೊಚ್ಚಲ ಬಾರಿಗೆ ಫೈನಲ್ ತಲುಪಿದೆ. ಮಹಿಳಾ ಪ್ರೀಮಿಯರ್ ಲೀಗ್ 2ನೇ ಸೀಸನ್‌ನಲ್ಲೇ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಮಾರ್ಚ್ 17ರಂದು ನಡೆಯಲಿರುವ ಡಬ್ಲ್ಯೂಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸೆಣಸಾಡಲಿದೆ.
![](https://samagrasuddi.co.in/wp-content/uploads/2024/03/image-155-819x1024.png)
ವಿಶೇಷ ಎಂದರೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಫೈನಲ್ ನಲ್ಲಿ ಸೆಣಸಾಡುತ್ತಿದ್ದು, ಇಬ್ಬರಲ್ಲಿ ಯಾರೇ ಗೆದ್ದರೂ ಸಹ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಹೌದು, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ 2ನೇ ಬಾರಿಗೆ ಡಬ್ಲ್ಯೂಪಿಎಲ್ ಫೈನಲ್ ತಲುಪಿದೆ. ಆದರೆ ಬೆಂಗಳೂರು ತಂಡವು ಇದೇ ಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿದೆ.
ಹೀಗಾಗಿ ಇಬ್ಬರಲ್ಲಿ ಯಾರೇ ಗೆದ್ದರು ಇಬ್ಬರಿಗೂ ಅದು ಚೊಚ್ಚಲ ಡಬ್ಲ್ಯೂಪಿಎಲ್ ಪ್ರಶಸ್ತಿ ಆಗಲಿದೆ. ಇನ್ನು, ಈ ಎರಡೂ ತಂಡಗಳ ಪುರುಷರ ಟೀಮ್ ಐಪಿಎಲ್ ನಲ್ಲಿ ಕಳೆದ 16 ವರ್ಷಗಳಿಂದ ಆಟವಾಡುತ್ತಿದೆ. ಆದರೆ ಡೆಲ್ಲಿ ಮತ್ತು ಬೆಂಗಳೂರು ಪುರುಷರ ತಂಡ ಈವರೆಗೆ ಒಮ್ಮೆಯೂ ಕಪ್ ಗೆದ್ದಿಲ್ಲ. ಹೀಗಾಗಿ ಮಹಿಳೆಯರು ಇಬ್ಬರಲ್ಲಿ ಯಾರೇ ಗೆದ್ದರೂ ಅದು ದಾಖಲೆ ಆಗಲಿದೆ.
ಈಗಾಗಲೇ ಪುರುಷರ ಐಪಿಎಲ್ ನಲ್ಲಿ ಕಳೆದ 16 ಸೀಸನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಬಾರಿ ಫೈನಲ್ಗೆ ಹಾಗೂ ಡೆಲ್ಲಿ ತಂಡ 2 ಬಾರಿ ಫೈನಲ್ಗೆ ಪ್ರವೇಶಿಸಿದ್ದವು. ಆದರೆ ಫೈನಲ್ ನಲ್ಲಿ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ವುಮೆನ್ಸ್ ತಂಡ ಇಬ್ಬರಲ್ಲಿ ಯಾರೇ ಗೆದ್ದರೂ ಸಹ ಉಭಯ ತಂಡಗಳ ಪ್ರಾಂಚೈಸಿಗೆ ಚೊಚ್ಚಲ ಟ್ರೋಫಿ ಇದಾಗಲಿದೆ.
ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವುಮೆನ್ಸ್ ಏನಾದರೂ ಡಬ್ಲ್ಯೂಪಿಎಲ್ ಪ್ರಶಸ್ತಿಗೆ ಮುತ್ತಿಕ್ಕಿದರೆ ಇದು ಪುರುಷರು ಕಪ್ ಗೆಲ್ಲುವ ಮೊದಲೇ ಕಪ್ ಗೆದ್ದಂತಾಗುತ್ತದೆ. ಅಲ್ಲದೇ ಆರ್‌ಸಿಬಿ ಮಹಿಳೆಯರು ಕಪ್ ಗೆಲ್ಲಬೇಕೆಂದು ಕೋಟ್ಯಾಂತರ ಆರ್‌ಸಿಬಿ ಅಭಿಮಾನಿಗಳು ಹಾರೈಸುತ್ತಿದ್ದು, ಕಾತುರದಿಂದ ಕಾಯುತ್ತಿದ್ದಾರೆ. ಡೆಲ್ಲಿ ಅಭಿಮಾನಿಗಳೂ ಸಹ ಇದೇ ಕಾತುರತೆಯಲ್ಲಿದ್ದಾರೆ.
ಇನ್ನು, ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 17ರಂದು ದೆಹಲಿಯ ಅರುಣ್ ಜೆಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯವು ಸಂಜೆ 7 ಗಂಟೆಗೆ ಟಾಸ್ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈಗಾಗಲೇ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿದ್ದು, ಇನ್ನೊಂದು ದಿನದಲ್ಲಿ ಚಾಂಪಿಯನ್ ಯಾರೆಂದು ತಿಳಿಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ(C), ಸೋಫಿ ಮೊಲಿನೆಕ್ಸ್, ಎಲ್ಲಿಸ್ ಪೆರ್ರಿ, ಸೋಫಿ ಡಿವೈನ್, ರಿಚಾ ಘೋಷ್(WK), ಜಾರ್ಜಿಯಾ ವಾರೆಹಮ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನಾ, ಶ್ರದ್ಧಾ ಪೋಖರ್ಕರ್, ರೇಣುಕಾ ಠಾಕೂರ್ ಸಿಂಗ್, ಸಿಮ್ರಾನ್ ಬಹದ್ದೂರ್, ಇಂದ್ರಾಣಿ ರಾಯ್, ಶುದಿನೆ ರಾಯ್, ಡಿ ಕ್ಲರ್ಕ್, ಸಬ್ಬಿನೇನಿ ಮೇಘನಾ, ಕೇಟ್ ಕ್ರಾಸ್, ಏಕ್ತಾ ಬಿಷ್ಟ್.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಆಲಿಸ್ ಕ್ಯಾಪ್ಸೆ, ಅರುಂಧತಿ ರೆಡ್ಡಿ, ಜೆಮಿಮಾ ರಾಡ್ರಿಗಸ್, ಜೆಸ್ ಜೊನಾಸೆನ್, ಲಾರಾ ಹ್ಯಾರಿಸ್, ಮರಿಜಾನ್ನೆ ಕಪ್, ಮೆಗ್ ಲ್ಯಾನಿಂಗ್, ಮಿನ್ನು ಮಣಿ, ಪೂನಂ ಯಾದವ್, ರಾಧಾ ಯಾದವ್, ಶಫಾಲಿ ವರ್ಮಾ, ಶಿಖಾ ಪಾಂಡೆ, ಸ್ನೇಹಾ ದೀಪ್ತಿ, ತನಿಯಾ ಭಾಟಿಯಾ, ಅನ್ನಾಪರ್ ಮೊನ್‌ಡಾಲ್ ಸಾಧು , ಅಶ್ವನಿ ಕುಮಾರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1