WPL Auction: ವುಮೆನ್ಸ್ ಪ್ರೀಮಿಯರ್ ಲೀಗ್​​ ಹರಾಜು: ಆಟಗಾರ್ತಿಯರ ಮೂಲಬೆಲೆ ಘೋಷಣೆ

Women's Premier League 2023

WPL 2023 auction: ವುಮೆನ್ಸ್ ಪ್ರೀಮಿಯರ್ ಲೀಗ್​ನ ಹರಾಜಿಗಾಗಿ ಅಂತಿಮ ಪಟ್ಟಿ ಸಿದ್ಧವಾಗಿದೆ. ಈ ಬಾರಿ ಒಟ್ಟು 409 ಆಟಗಾರ್ತಿಯರು ಹೆಸರು ನೋಂದಾಯಿಸಿಕೊಂಡಿದ್ದು, ಇವರಲ್ಲಿ 246 ಭಾರತೀಯರು ಮತ್ತು 163 ವಿದೇಶಿ ಆಟಗಾರ್ತಿಯರಿದ್ದಾರೆ. ಹಾಗೆಯೇ ಸಹವರ್ತಿ ರಾಷ್ಟ್ರಗಳ 8 ಆಟಗಾರ್ತಿಯರು ಸಹ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಬಾರಿಯ ಹರಾಜಿನಲ್ಲಿ ಒಟ್ಟು 5 ತಂಡಗಳು ಕಾಣಿಸಿಕೊಳ್ಳುತ್ತಿದ್ದು, 90 ಆಟಗಾರ್ತಿಯರಿಗೆ ಅವಕಾಶ ಸಿಗಲಿದೆ. ಇದರಲ್ಲಿ 30 ವಿದೇಶಿ ಆಟಗಾರ್ತಿಯರು ಸ್ಥಾನ ಪಡೆಯಲಿದ್ದಾರೆ. ಅಂದರೆ 60 ಭಾರತೀಯ ಹಾಗೂ 30 ವಿದೇಶಿ ಆಟಗಾರ್ತಿಯರನ್ನು ಹರಾಜಿನ ಮೂಲಕ 5 ತಂಡಗಳು ಆಯ್ಕೆ ಮಾಡಬಹುದು.

ಈ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರ್ತಿಯರ ಮೂಲ ಬೆಲೆ 10 ಲಕ್ಷ ರೂ. ನಿಂದ 20 ಲಕ್ಷ ರೂ. ನಡುವೆ ಇರಲಿದೆ. ಅಂತೆಯೆ ಕ್ಯಾಪ್ಡ್ ಆಟಗಾರ್ತಿಯರ ಮೂಲ ಬೆಲೆ 30 ಲಕ್ಷ ರೂ. ನಿಂದ 50 ಲಕ್ಷ ರೂ. ನಿಗದಿ ಮಾಡಲಾಗಿದೆ. ಇವರಲ್ಲಿ 24 ಆಟಗಾರ್ತಿಯರು ತಮ್ಮ ಮೂಲಬೆಲೆಯನ್ನು 50 ಲಕ್ಷ ರೂ. ಎಂದು ಘೋಷಿಸಿದ್ದಾರೆ.

50 ಲಕ್ಷ ರೂ. ಮೂಲಬೆಲೆ ಪಟ್ಟಿಯಲ್ಲಿರುವ ಪ್ರಮುಖ ಭಾರತೀಯ ಆಟಗಾರ್ತಿಯರೆಂದರೆ ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಶಫಾಲಿ ವರ್ಮಾ. ಹಾಗೆಯೇ ಎಲ್ಲೀಸ್ ಪೆರ್ರಿ, ಸೋಫಿ ಎಕ್ಲೆಸ್ಟೋನ್, ಸೋಫಿ ಡಿವೈನ್ ಮತ್ತು ಡಿಯಾಂಡ್ರಾ ಡಾಟಿನ್ ಸೇರಿದಂತೆ 13 ವಿದೇಶಿ ಆಟಗಾರ್ತಿಯರು ಐವತ್ತು ಲಕ್ಷ ರೂ. ಮೂಲಬೆಲೆ ಘೋಷಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಟೀಮ್ ಇಂಡಿಯಾದ 7 ಬ್ಯಾಟ್ಸ್​ಮನ್​ಗಳ ಪಟ್ಟಿ ಇಲ್ಲಿದೆ

ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದ್ದು, 409 ಆಟಗಾರ್ತಿಯರಲ್ಲಿ 90 ಪ್ಲೇಯರ್ಸ್​ಗಳಿಗೆ ಈ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ದೊರೆಯಲಿದೆ. ಇನ್ನು ಬೆಂಗಳೂರು, ದೆಹಲಿ, ಗುಜರಾತ್ ಜೈಂಟ್ಸ್, ಲಕ್ನೋ ಮತ್ತು ಮುಂಬೈ ಹೀಗೆ ಒಟ್ಟು ಐದು ತಂಡಗಳು ವುಮೆನ್ಸ್ ಪ್ರೀಮಿಯರ್ ಲೀಗ್ 2023ರ ಉದ್ಘಾಟನಾ ಸೀಸನ್​ನಲ್ಲಿ ಭಾಗವಹಿಸಲಿವೆ.

 

 

source https://tv9kannada.com/sports/cricket-news/wpl-2023-auction-409-players-to-go-under-the-hammer-kannada-news-zp-au50-516383.html

Leave a Reply

Your email address will not be published. Required fields are marked *