“WTC 2025-27: ವೆಸ್ಟ್ ಇಂಡೀಸ್ ವಿರುದ್ಧ ಭಾರತದ ಕ್ಲೀನ್ ಸ್ವೀಪ್; ಅಂಕಪಟ್ಟಿಯಲ್ಲಿ ಬದಲಾವಣೆ, ಶುಭಮನ್ ಗಿಲ್ ನಾಯಕತ್ವದಲ್ಲಿ ಸರಣಿ ಗೆಲುವು!”

Sports News: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ದದ ಎರಡನೇ ಪಂದ್ಯವನ್ನು ಗೆದ್ದ ಭಾರತ ತಂಡವು ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಶುಭಮನ್‌ ಗಿಲ್‌ ನಾಯಕನಾಗಿ ಮೊದಲ ಬಾರಿಗೆ ಸರಣಿ ಗೆದ್ದುಕೊಂಡರು. ಅಹಮದಾಬಾದ್‌ ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಇನ್ನಿಂಗ್ಸ್‌ ಅಂತರದಿಂದ ಸುಲಭದಲ್ಲಿ ಗೆದ್ದುಕೊಂಡರೆ, ಹೊಸದಿಲ್ಲಿಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯವನ್ನು ಗಿಲ್‌ ಪಡೆ ಏಳು ವಿಕೆಟ್‌ ಅಂತರದಿಂದ ಗೆದ್ದುಕೊಂಡಿತು.

ಈ ಗೆಲುವಿನಿಂದಾಗಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನಲ್ಲಿ ತನ್ನ ಅಂಕಗಳನ್ನು 52 ಕ್ಕೆ ಏರಿಸಿಕೊಂಡಿದ್ದು, ಪಿಸಿಟಿ (ಸಂಗ್ರಹಿಸಿದ ಅಂಕಗಳ ಶೇಕಡಾವಾರು) 61.90 ಕ್ಕೆ ಏರಿದೆ. ಆದರೂ, ಸರಣಿಯನ್ನು ಗೆದ್ದ ಶುಭಮನ್ ಗಿಲ್ ಪಡೆ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳಲಾಗಿಲ್ಲ.
ಈ ಡಬ್ಲ್ಯೂಟಿಸಿಯಲ್ಲಿ ಭಾರತ ತಂಡವು ಏಳು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದೆ. ಒಂದು ಡ್ರಾ ಮತ್ತು ಎರಡು ಸೋಲುಗಳು ಕಳೆದ ಇಂಗ್ಲೆಂಡ್‌ ಸರಣಿಯಲ್ಲಿ ಬಂದಿತ್ತು.


2025-27 ರ ಡಬ್ಲ್ಯೂಟಿಸಿ ಸೈಕಲ್ ಆರಂಭದಿಂದಲೂ ಆಡಿರುವ ಮೂರು ಪಂದ್ಯಗಳಲ್ಲಿ ಗೆದ್ದಿರುವ ಆಸ್ಟ್ರೇಲಿಯಾ 100 PCT ಯೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿರುವ ಎರಡು ಪಂದ್ಯದಲ್ಲಿ ಒಂದನ್ನು ಗೆದ್ದಿರುವ ಶ್ರೀಲಂಕಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ, ಅದು 66.67 ಅಂಕ ಹೊಂದಿದೆ. ಭಾರತದ ನಂತರ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ಕ್ರಮವಾಗಿ 43.33, 16.67 ಮತ್ತು 0.00 PCT ಗಳೊಂದಿಗೆ ಇವೆ.
2025-27 ರ ಡಬ್ಲ್ಯೂಟಿಸಿ ಸೈಕಲ್ ನಲ್ಲಿ ವೆಸ್ಟ್‌ ಇಂಡೀಸ್‌ ತಂಡವು ಐದು ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಪಂದ್ಯ ಗೆದ್ದಿಲ್ಲ.

2011 ರ ನಂತರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಪಂದ್ಯವು ಐದನೇ ದಿನಕ್ಕೆ ತಲುಪಿದ್ದು ಇದೇ ಮೊದಲು. ಬೆಳಗಿನ ಅವಧಿಯಲ್ಲಿ ಕೇವಲ ಒಂದು ಗಂಟೆ ಮಾತ್ರ ಚೇಸಿಂಗ್ ನಡೆದರೂ, ವೆಸ್ಟ್ ಇಂಡೀಸ್ ತಂಡವು ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ನೀಡಿತು.

Views: 9

Leave a Reply

Your email address will not be published. Required fields are marked *