Skip to content
  • Tuesday, March 24, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • WTC Final 2023: 2 ವರ್ಷ 18 ಪಂದ್ಯ; ಹೀಗಿತ್ತು ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಪ್ರಯಾಣ
Sports

WTC Final 2023: 2 ವರ್ಷ 18 ಪಂದ್ಯ; ಹೀಗಿತ್ತು ಟೀಂ ಇಂಡಿಯಾದ ಡಬ್ಲ್ಯುಟಿಸಿ ಫೈನಲ್ ಪ್ರಯಾಣ

June 1, 2023
samagrasuddi

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಮೊದಲ ಆವೃತ್ತಿಯ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದ್ದ ಟೀಂ ಇಂಡಿಯಾ ಇದೀಗ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಅಂದಹಾಗೆ ಟೀಂ ಇಂಡಿಯಾದ ಈ ಫೈನಲ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಹಲವು ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿದ ರೋಹಿತ್ ಪಡೆ ಮತ್ತೊಮ್ಮೆ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿದೆ.ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಒಟ್ಟು 6 ಟೆಸ್ಟ್ ಸರಣಿಗಳನ್ನು ಆಡಿದೆ. ಈ ಪೈಕಿ ತಂಡ ಕೇವಲ ಒಂದು ಬಾರಿ ಸರಣಿ ಸೋತಿದ್ದು, ಒಂದು ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಇದಲ್ಲದೇ ನಾಲ್ಕು ಸರಣಿಗಳನ್ನು ಟೀಂ ಇಂಡಿಯಾ ಗೆದ್ದಿದೆ. ಭಾರತ ತಂಡ ಈ ಆವೃತ್ತಿಯಲ್ಲಿ ಒಟ್ಟು 18 ಪಂದ್ಯಗಳನ್ನು ಆಡಿದೆ. ಈ 18 ಪಂದ್ಯಗಳಲ್ಲಿ 10ರಲ್ಲಿ ಗೆಲುವು ಸಾಧಿಸಿರುವ ಭಾರತ 5ಪಂದ್ಯಗಳಲ್ಲಿ ಸೋತಿದೆ. ಇನ್ನುಳಿದಂತೆ 3 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಮ್ ಇಂಡಿಯಾದ ಪ್ರಯಾಣ ಹೇಗಿತ್ತು ಎಂಬುದನ್ನು ನೋಡುವುದಾದರೆ.. ನ್ಯೂಜಿಲೆಂಡ್ ವಿರುದ್ಧದ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋತ ನಂತರ, ಅಂದರೆ ಆಗಸ್ಟ್ 2021 ರಲ್ಲಿ, ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿತು. ಎರಡೂ ತಂಡಗಳ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಬೇಕಿತ್ತು. ಆದರೆ ಅಲ್ಲಿ 4 ಟೆಸ್ಟ್‌ಗಳು ಮಾತ್ರ ನಡೆದವು. ಸರಣಿಯ 5 ನೇ ಮತ್ತು ಕೊನೆಯ ಟೆಸ್ಟ್ ಜುಲೈ 2022 ಕ್ಕೆ ಮುಂದೂಡಲಾಯಿತು. ಅಂತಿಮವಾಗಿ 5 ಪಂದ್ಯಗಳ ಈ ಸರಣಿ 2-2ರಲ್ಲಿ ಸಮಬಲಗೊಂಡಿತು.ನಂತರ ಡಿಸೆಂಬರ್ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ 2 ಪಂದ್ಯಗಳನ್ನು ಆಡಿದ್ದ ಟೀಂ ಇಂಡಿಯಾ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತು.ಡಿಸೆಂಬರ್ 2021 ಮತ್ತು ಜನವರಿ 2022 ರ ನಡುವೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ ಟೀಂ ಇಂಡಿಯಾ ಆತಿಥೇಯರ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 1-2 ರ ಅಂತರದಲ್ಲಿ ಕಳೆದುಕೊಂಡಿತು.ಮಾರ್ಚ್ 2022 ರಲ್ಲಿ ಶ್ರೀಲಂಕಾ ವಿರುದ್ಧ ತವರಿನಲ್ಲಿ 2ಟೆಸ್ಟ್ ಪಂದ್ಯಗಳ ಸರಣಿಯನ್ನಾಡಿದ ಭಾರತ, ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ಪ್ರವಾಸ ಮಾಡಿದ ಭಾರತ, ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು.ಫೆಬ್ರವರಿ-ಮಾರ್ಚ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 4 ಟೆಸ್ಟ್ ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಿದ ಭಾರತ, ಸರಣಿಯನ್ನ 2-1 ರಿಂದ ಗೆದ್ದುಕೊಂಡಿತು.

source https://tv9kannada.com/photo-gallery/cricket-photos/wtc-final-2023-team-indias-journey-to-the-finals-of-wtc-2023-psr-591959.html

Tags: Cricket, samagrasuddi, ಸಮಗ್ರ ಸುದ್ದಿ

Post navigation

Ruturaj Gaikwad Marriage: ರುತುರಾಜ್ ಕೈ ಹಿಡಿಯುತ್ತಿರುವ ಈ ಮಹಿಳಾ ಕ್ರಿಕೆಟರ್ ಯಾರು ಗೊತ್ತಾ?
MS Dhoni Knee Surgery: ಧೋನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಸರ್ಜರಿಗೂ ಮುನ್ನ ಕೈಯಲ್ಲಿ ಭಗವದ್ಗೀತೆ ಹಿಡಿದ ಕ್ಯಾಪ್ಟನ್ ಕೂಲ್!

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
  • ಕರ್ನಾಟಕ ಆಯುಷ್ ಇಲಾಖೆ ನೇಮಕಾತಿ 2026:ಬೆಂಗಳೂರಿನಲ್ಲಿ ಖಾತೆ ಸಹಾಯಕ ಹುದ್ದೆಗೆ ನೇರ ಸಂದರ್ಶನ | AYUSH Karnataka Recruitment
  • ಇತಿಹಾಸದಲ್ಲೇ ಮೊದಲ ಬಾರಿಗೆ 94ರ ಗಡಿ ದಾಟಿದ ಡಾಲರ್: ರೂಪಾಯಿ ಮೌಲ್ಯ ತೀವ್ರ ಕುಸಿತಕ್ಕೆ ಕಾರಣಗಳೇನು?
  • ಹವಾಮಾನ ಬದಲಾವಣೆಯಿಂದ ಕಾಡುತ್ತಿರುವ ಒಣ ಕೆಮ್ಮು: ಕಾರಣ, ಲಕ್ಷಣ ಮತ್ತು ಪರಿಹಾರ.
  • ​Day Special, ಮಾರ್ಚ್ 23: ದೇಶಪ್ರೇಮದ ಕಿಚ್ಚು ಮತ್ತು ಜಾಗತಿಕ ಬದಲಾವಣೆಯ ದಿನ – ಒಂದು ಸಮಗ್ರ ನೋಟ
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80
Copyright © 2026
CONTACT US
Theme by: Theme Horse
Proudly Powered by: WordPress