Skip to content
  • Thursday, March 26, 2026
  • ABOUT US
  • CONTACT US
  • Privacy Policy

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Privacy Policy
  • Horoscope
  • Home
  • Sports
  • WTC Final 2023: ಬಾಲ್​ ಟ್ಯಾಂಪರಿಂಗ್: ಆಸ್ಟ್ರೇಲಿಯಾ ತಂಡದಿಂದ ಮೋಸದಾಟ..!
Sports

WTC Final 2023: ಬಾಲ್​ ಟ್ಯಾಂಪರಿಂಗ್: ಆಸ್ಟ್ರೇಲಿಯಾ ತಂಡದಿಂದ ಮೋಸದಾಟ..!

June 10, 2023
samagrasuddi

WTC Final 2023: ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಮೋಸದಾಟವಾಡಿರುವುದು ಬೆಳಕಿಗೆ ಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ (163) ಹಾಗೂ ಸ್ಟೀವ್ ಸ್ಮಿತ್ (121) ಅವರ ಶತಕದ ನೆರವಿನಿಂದ 469 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭಿಕ ಕುಸಿತಕ್ಕೊಳಗಾಗಿತ್ತು. ಅಚ್ಚರಿ ಎಂದರೆ ಇದೇ ವೇಳೆ ಬಾಲ್ ಟ್ಯಾಂಪರಿಂಗ್ ಮಾಡಲಾಗಿರುವುದು ಇದೀಗ ಬೆಳಕಿಗೆ ಬಂದಿದೆ. 
ರೋಹಿತ್ ಶರ್ಮಾ (15) ಹಾಗೂ ಶುಭ್​ಮನ್ ಗಿಲ್ (13) ಔಟಾದ ಬಳಿಕ ಚೇತೇಶ್ವರ ಪೂಜಾರ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟುವ ಜವಾಬ್ದಾರಿವಹಿಸಿಕೊಂಡಿದ್ದರು. ಒಂದಷ್ಟು ಹೊತ್ತು ಈ ಇಬ್ಬರು ಆಟಗಾರರು ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನವನ್ನೂ ಸಹ ಮಾಡಿದ್ದರು.ಆದರೆ 13 ಓವರ್​ಗಳ ಬಳಿಕ ಚೆಂಡು ಹೆಚ್ಚು ಸ್ವಿಂಗ್ ಹಾಗೂ ಬೌನ್ಸ್ ಪಡೆಯಲಾರಂಭಿಸಿತು. ಇತ್ತ ಇದೇ ವೇಳೆ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಔಟಾಗಿದ್ದರು. ಇಲ್ಲಿ ಪೂಜಾರ ಕ್ಯಾಮರೋನ್ ಗ್ರೀನ್ ಎಸೆದ ಇನ್​ಸ್ವಿಂಗ್​ಗೆ ಔಟಾದರೆ, ವಿರಾಟ್ ಕೊಹ್ಲಿ ಸ್ಟಾರ್ಕ್​ ಅವರ ಅನಿರೀಕ್ಷಿತ ಬೌನ್ಸರ್​ಗೆ ಕ್ಯಾಚಿತ್ತರು.ಅಚ್ಚರಿ ಎಂದರೆ ಈ ಓವರ್​ಗಳ ನಡುವೆ ಮಾರ್ನಸ್ ಲಾಬುಶೇನ್ ಕ್ರೆಪ್ ಬ್ಯಾಂಡೇಜ್ ಧರಿಸಿ ಸಿಲ್ಲಿ ಪಾಯಿಂಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದರು. ಅಲ್ಲದೆ ಈ ವೇಳೆ ಒರಾಟದ ಬ್ಯಾಂಡೇಜ್​ ಬಟ್ಟೆಯಿಂದ ಚೆಂಡಿನ ಮೇಲ್ಮೈಯನ್ನು ಸವರುತ್ತಿರುವುದು ಕಂಡು ಬಂದಿದೆ.ಅಂದರೆ ಚೆಂಡಿನ ಒಳ ಮೇಲ್ಮೈಯ ಹೊಳಪನ್ನು ಹೋಗಲಾಡಿಸಿದರೆ ಬಾಲ್​ ಉತ್ತಮವಾಗಿ ರಿವರ್ಸ್ ಸ್ವಿಂಗ್ ಆಗುತ್ತದೆ. ಹಾಗೆಯೇ ಚೆಂಡು ಬೌನ್ಸ್ ಆಗಲು ಕೂಡ ನೆರವಾಗುತ್ತದೆ. ಇತ್ತ ಮಾರ್ನಸ್ ಲಾಬುಶೇನ್ ಬ್ಯಾಂಡೇಜ್​ನಿಂದ ಚೆಂಡನ್ನು ವಿರೂಪಗೊಳಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಐಸಿಸಿ ನಿಯಮದ ಪ್ರಕಾರ, ಅನುಮತಿಸಲಾದ ಟವೆಲ್​ನ್ನು ಹೊರತುಪಡಿಸಿ ಇತರೆ ಯಾವುದೇ ಬಟ್ಟೆಯಿಂದ ಚೆಂಡನ್ನು ಒರೆಸುವಂತಿಲ್ಲ. ಹಾಗೆಯೇ ಎಂಜಲನ್ನು ಕೂಡ ಬಳಸಿ ಚೆಂಡಿನ ಮೇಲ್ಮೈನ ಹೊಳಪನ್ನು ಹೋಗಲಾಡಿಸುವುದನ್ನು ಕೂಡ ನಿಷೇಧಿಸಲಾಗಿದೆ. ಇದಾಗ್ಯೂ ಫೀಲ್ಡ್ ಅಂಪೈರ್ ಹಾಗೂ ಥರ್ಡ್ ಅಂಪೈರ್ ಈ ಬಗ್ಗೆ ನೀರವ ಮೌನವಹಿಸಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಕಳ್ಳಾಟಕ್ಕೆ ಕುಖ್ಯಾತಿ ಹೊಂದಿರುವ ಆಸ್ಟ್ರೇಲಿಯನ್ನರು ಈ ಬಾರಿ ಕೂಡ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ.

source https://tv9kannada.com/photo-gallery/cricket-photos/wtc-final-2023-australian-team-accused-of-ball-tampering-kannada-news-zp-598249.html

Tags: Cricket, samagrasuddi, ಸಮಗ್ರ ಸುದ್ದಿ

Post navigation

Delhi Capitals: ಡೆಲ್ಲಿ ತಂಡದಲ್ಲಿ ಮೇಜರ್ ಸರ್ಜರಿ; ಮುಖ್ಯ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್..!
ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದನ್ನು ನಾನು ನೋಡಿದ್ದೇನೆ: ರೆಫರಿ ಸಾಕ್ಷ್ಯ

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 9 | ದಿನ 81

March 26, 2026
samagrasuddi
Spiritual

2026 ಶ್ರೀರಾಮನವಮಿ: ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಧ್ಯಾತ್ಮಿಕ ಮಹತ್ವದ ಸಂಪೂರ್ಣ ಮಾಹಿತಿ

March 25, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 9 | ದಿನ 81
  • 1ನೇ ತರಗತಿ ದಾಖಲಾತಿ: 6 ವರ್ಷದ ಕಡ್ಡಾಯ ನಿಯಮ ಸಡಿಲಿಸಿದ ರಾಜ್ಯ ಸರ್ಕಾರ, ಪೋಷಕರಿಗೆ ಭರ್ಜರಿ ರಿಲೀಫ್!
  • ಕರ್ನಾಟಕ ಹೈಕೋರ್ಟ್ ನೇಮಕಾತಿ 2026: 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನ.”
  • SSLC 2026 : ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆ ಮುಂದೂಡಿಕೆ; ಹೊಸ ದಿನಾಂಕದ ವಿವರ.
  • Horoscope Today, 26 March: ಈ ರಾಶಿಯವರಿಗೆ ಇಂದು ಮಾನಸಿಕವಾಗಿ ಸ್ವಲ್ಪ ಗೊಂದಲದ ದಿನ.
Copyright © 2026
CONTACT US
Theme by: Theme Horse
Proudly Powered by: WordPress