WTC Final 2023: ‘ಐಪಿಎಲ್​ಗಿಂತ ದೇಶ ಮುಖ್ಯ’; ಅಚ್ಚರಿಯ ಹೇಳಿಕೆ ನೀಡಿದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್

ಐಸಿಸಿ ಪ್ರಶಸ್ತಿ ಗೆಲ್ಲುವಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ವಿಫಲವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು 209 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್ ಗೆದ್ದು ಬೀಗಿದೆ. ಆಸ್ಟ್ರೇಲಿಯಾ ತಂಡದ ಈ ಐತಿಹಾಸಿಕ ಗೆಲುವಿನ ನಂತರ ಮಾತನಾಡಿದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಾನು ಏಕೆ  ಟಿ20 ಲೀಗ್‌ಗಳಿಂದ ದೂರ ಉಳಿದಿದ್ದೇನೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ.ದಿ ಗಾರ್ಡಿಯನ್ ಜೊತೆಗಿನ ವಿಶೇಷ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ವೇಗಿ ಮಿಚೆಲ್ ಸ್ಟಾರ್ಕ್, ಆಸ್ಟ್ರೇಲಿಯಾ ಪರ ಟೆಸ್ಟ್ ಆಡುವುದೇ ನನಗೆ ಎಲ್ಲಕ್ಕಿಂತ ಮಿಗಿಲಾದ ವಿಚಾರ.  ಇದೇ ಕಾರಣಕ್ಕೆ ನಾನು ಐಪಿಎಲ್, ಬಿಗ್ ಬ್ಯಾಷ್ ಲೀಗ್ ಹಾಗೂ ಇತರ ಟಿ20 ಲೀಗ್‌ಗಳಿಂದ ದೂರ ಉಳಿದಿರುವುದು ಎಂದಿದ್ದಾರೆ. ನಾನು ಐಪಿಎಲ್ ಅನ್ನು ಆನಂದಿಸಿದೆ, ಹಾಗೆಯೇ 10 ವರ್ಷಗಳ ಹಿಂದೆ ಯಾರ್ಕ್‌ಷೈರ್‌ ಪರ ಆಡುವುದನ್ನು ಆನಂದಿಸಿದೆ. ಹಣ ಬರುತ್ತದೆ ಮತ್ತು ಹೋಗುತ್ತಿರುತ್ತದೆ. ಆದರೆ ಆಸ್ಟ್ರೇಲಿಯಾ ಪರ ಆಡುವ ಅವಕಾಶ ಸಿಕ್ಕಿರುವುದು ನನಗೆ ದೊಡ್ಡ ವಿಷಯ ಎಂದಿದ್ದಾರೆ. ನೂರು ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಪರವಾಗಿ 500 ಕ್ಕಿಂತ ಕಡಿಮೆ ಪುರುಷ ಕ್ರಿಕೆಟಿಗರು ಆಡಿದ್ದಾರೆ. ಅದರಲ್ಲಿ ನಾನು ಕೂಡ ಒಬ್ಬನಾಗಿರುವುದು ತುಂಬಾ ವಿಶೇಷವಾಗಿದೆ.  ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಕಡಿಮೆ ಅವಧಿಯಲ್ಲಿ ಸಾಕಷ್ಟು ಹಣ ಸಂಪಾಧಿಸಬಹುದು ಆದರೆ ಇದು ಕುಖ್ಯಾತಿಗೆ ವೇಗದ ಹಾದಿಯಾಗಿದೆ ಎಂದು ಸ್ಟಾರ್ಕ್​ ಹೇಳಿಕೊಂಡಿದ್ದಾರೆ.2015 ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೊನೆಯ ಬಾರಿಗೆ ಫ್ರಾಂಚೈಸ್ ಕ್ರಿಕೆಟ್ ಆಡಿದ ಸ್ಟಾರ್ಕ್​, ಐಪಿಎಲ್ ಬಗ್ಗೆಯೂ ಮಾತನಾಡಿದ್ದು, ನಾನು ಖಂಡಿತವಾಗಿಯೂ ಮತ್ತೆ ಐಪಿಎಲ್‌ನಲ್ಲಿ ಆಡಲು ಇಷ್ಟಪಡುತ್ತೇನೆ. ಆದರೆ ತಮ್ಮ ಮುಂದಿನ ಭವಿಷ್ಯಕ್ಕಾಗಿ ಟೆಸ್ಟ್ ಕ್ರಿಕೆಟ್​ಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿಕೊಂಡಿದ್ದಾರೆ.

source https://tv9kannada.com/photo-gallery/cricket-photos/wtc-final-2023-more-important-than-ipl-money-mitchell-starc-on-playing-tests-for-australia-psr-599615.html

Leave a Reply

Your email address will not be published. Required fields are marked *