WTC Final 2023: ಆಪದ್ಬಾಂಧವ ಅಜಿಂಕ್ಯ; ಭಾರತದ ಪರ ಇತಿಹಾಸ ಸೃಷ್ಟಿಸಿದ ರಹಾನೆ..!

ಕೇವಲ 71 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸುತ್ತಿರುವ ಟೀಂ ಇಂಡಿಯಾದ ಆಪದ್ಬಾಂಧವ ಅಜಿಂಕ್ಯ ರಹಾನೆ, ಆಸೀಸ್ ವೇಗಿಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅವಶ್ಯಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಅವರಂತಹ ಬ್ಯಾಟ್ಸ್‌ಮನ್‌ಗಳು ಆಸ್ಟ್ರೇಲಿಯಾ ವಿರುದ್ಧ ಮಕಾಡೆ ಮಲಗಿದಾಗ ಓವಲ್ ಮೈದಾನದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಮಾಡುತ್ತಿರುವ ರಹಾನೆ, ಡಬ್ಲ್ಯುಟಿಸಿ ಫೈನಲ್‌ನ ಮೂರನೇ ದಿನ 92 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ್ದಾರೆ.18 ತಿಂಗಳ ನಂತರ ರಹಾನೆ ಟೆಸ್ಟ್ ಪಂದ್ಯ ಆಡುತ್ತಿರುವ ರಹಾನೆ, ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 50 ರನ್ ಪೂರೈಸಿದರು. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್‌ನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ರಹಾನೆ, ಎರಡೂ ಇನ್ನಿಂಗ್ಸ್‌ಗಳಲ್ಲಿ ಫ್ಲಾಪ್ ಆಗಿದ್ದರು. ಇದಾದ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಈಗ ಬಹಳ ದಿನಗಳ ನಂತರ ಭಾರತ ತಂಡಕ್ಕೆ ಮರಳಿರುವ ರಹಾನೆ ಅರ್ಧಶತಕ ಸಿಡಿಸಿದಲ್ಲದೆ ಇದಕ್ಕೂ ಮುನ್ನ ರವೀಂದ್ರ ಜಡೇಜಾ ಅವರೊಂದಿಗೆ 71 ರನ್ ಜೊತೆಯಾಟವಾಡಿದರು. ಇದಾದ ಬಳಿಕ ಶಾರ್ದೂಲ್ ಠಾಕೂರ್ ಜೊತೆ ಉತ್ತಮ ಜೊತೆಯಾಟವಾಡುತ್ತಿದ್ದಾರೆ.

source https://tv9kannada.com/photo-gallery/cricket-photos/wtc-final-2023-ajinkya-rahane-enters-history-books-in-wtc-final-psr-597682.html

Views: 0

Leave a Reply

Your email address will not be published. Required fields are marked *