WTC Final 2023: ‘ಫೈಟರ್, ಸೂಪರ್ ಸ್ಟಾರ್, ಗಂಡುಗಲಿ’; ಕಿಂಗ್ ಕೊಹ್ಲಿಯ ಗುಣಗಾನ ಮಾಡಿದ ಆಸೀಸ್ ಕ್ರಿಕೆಟಿಗರು..!

WTC Final 2023: ‘ಫೈಟರ್, ಸೂಪರ್ ಸ್ಟಾರ್, ಗಂಡುಗಲಿ’; ಕಿಂಗ್ ಕೊಹ್ಲಿಯ ಗುಣಗಾನ ಮಾಡಿದ ಆಸೀಸ್ ಕ್ರಿಕೆಟಿಗರು..!

ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಮೈದಾನದಲ್ಲಿ ಉಭಯ ತಂಡಗಳ ತಯಾರಿಯೂ ನಡೆಯುತ್ತಿದೆ. ಎರಡೂ ತಂಡಗಳು ಬಿರುಸಿನ ಅಭ್ಯಾಸ ನಡೆಸುತ್ತಿವೆ. ಆದರೆ, ಈ ನಡುವೆ ಆಸೀಸ್ ಕ್ರಿಕೆಟಿಗರು ವಿರಾಟ್ ಕೊಹ್ಲಿ (Virat Kohli) ಗುಣಗಾನ ಮಾಡಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಕ್ರಿಕೆಟ್​ ಕಿಂಗ್ ಕೊಹ್ಲಿ ಬಗ್ಗೆ ಒಂದೇ ಒಂದು ಪದದಲ್ಲಿ ವಿವರಿಸಿ ಅಂತ ನಿಮ್ಮಲ್ಲೇನಾದ್ರೂ ಹೇಳಿದ್ರೆ, ನೀವೇನ್ ಹೇಳ್ತೀರಿ? ಇದೇ ಪ್ರಶ್ನೆಗೆ ಆಸ್ಟ್ರೇಲಿಯನ್ ಸ್ಟಾರ್ ಕ್ರಿಕೆಟರ್ಸ್, ವಿರಾಟ್ ಬಗ್ಗೆ ಮಾತನಾಡಿದ್ದಾರೆ. WTC ಫೈನಲ್​ ಸಮೀಪದಲ್ಲಿರುವಾಗ್ಲೇ ಆಸೀಸ್ ಪ್ಲೇಯರ್ಸ್ ಕೊಹ್ಲಿ ಬಗ್ಗೆ ಏನೇನ್ ಹೇಳಿದ್ದಾರೆ? ನೋಡೋಣ ಬನ್ನಿ..

ಕೊಹ್ಲಿ ಗಂಡುಗಲಿ ಎಂದ ಗ್ರೀನ್​, ಕವರ್​ ಡ್ರೈವ್ ಮೆಚ್ಚಿದ ವಾರ್ನರ್!

ಐಸಿಸಿ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ಗೂ ಮುನ್ನ, ಇಂಟರ್ ನ್ಯಾಷನಲ್​ ಕ್ರಿಕೆಟ್ ಕೌನ್ಸಿಲ್, ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಆಸೀಸ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್, ಕೊಹ್ಲಿಯನ್ನು ಭಾರತದ ಗಂಡುಗಲಿ ಅಂತ ಕರೆದಿದ್ದಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾವನ್ನು ದಶಕಗಳಿಂದ ಯಶಸ್ವಿಯಾಗಿ ಮುನ್ನಡೆಸಿದ ವ್ಯಕ್ತಿ ಅಂತ ಕೊಹ್ಲಿ ಬಗ್ಗೆ ಹೇಳಿದ್ದಾರೆ. ಇನ್ನು ಅನುಭವಿ ಬ್ಯಾಟ್ಸ್​ಮನ್​ ಡೇವಿಡ್ ವಾರ್ನರ್, ವಿರಾಟ್​ನ ಕವರ್ ಡ್ರೈವ್ ಅದ್ಭುತ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WTC Final 2023: ಹೊಸ ಟೆಸ್ಟ್ ಜರ್ಸಿಯಲ್ಲಿ ಮಿರ ಮಿರ ಮಿಂಚಿದ ರೋಹಿತ್ ಪಡೆ; ಫೋಟೋ ನೋಡಿ

ಉಸ್ಮಾನ್​ಗೆ ಕೊಹ್ಲಿ ಸ್ಪರ್ಧಾತ್ಮಕ ವ್ಯಕ್ತಿ, ಮಿಚೆಲ್ ಸ್ಟಾರ್ಕ್​ ಹೇಳಿದ್ದೇನು?

ಐಸಿಸಿಯ ವಿಡಿಯೋದಲ್ಲಿ ಮುಂದೆ, ಅನುಭವಿ ಸ್ಪಿನ್ನರ್ ಉಸ್ಮಾನ್ ಖವಾಜಾ ಮತ್ತು ವೇಗಿ ಮಿಚೆಲ್ ಸ್ಟಾರ್ಕ್​ ಕೊಹ್ಲಿ ಬಗ್ಗೆ ಒಂದೇ ಪದದಲ್ಲಿ ವಿವರಿಸೋ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಖವಾಜಾ, ಕಿಂಗ್​ ಕೊಹ್ಲಿಯನ್ನು ಬಹಳ ಸ್ಪರ್ಧಾತ್ಮಕ ಆಟಗಾರ ಅಂತ ಬಣ್ಣಿಸಿದ್ರೆ, ಘಾತಕ ವೇಗಿ ಸ್ಟಾರ್ಕ್, ವಿರಾಟ್​ನನ್ನು ಸ್ಕಿಲ್​ಫುಲ್​ ಪ್ಲೇಯರ್ ಎಂದಿರೋದಲ್ಲದೆ, ಆತ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬೆನ್ನೆಲುಬು ಅಂತ ಬಣ್ಣಿಸಿದ್ದಾರೆ.

View this post on Instagram

A post shared by ICC (@icc)

ಕೊಹ್ಲಿ ಫೈಟರ್ ಎಂದ ಕಮಿನ್ಸ್, ಸೂಪರ್ ಸ್ಟಾರ್ ಎಂದ ಸ್ಮಿತ್!

ಇನ್ನು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್​ನ ಬಗ್ಗೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್​ ಮತ್ತು ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ಗುಣಗಾನ ಮಾಡಿದ್ದಾರೆ. ಕಮಿನ್ಸ್​, ಕೊಹ್ಲಿಯನ್ನು ಉತ್ತಮ ಆಟಗಾರ, ಎಲ್ಲೇ ಇದ್ರೂ ತಂಡದ ಪರ ಯುದ್ಧಕ್ಕೆ ನಿಲ್ಲುವಾತ ಅಂತ ಹೇಳಿದ್ದಾರೆ. ಇನ್ನು ಸ್ಮಿತ್, ಕೊಹ್ಲಿಯನ್ನು ಕ್ರಿಕೆಟ್​ ಜಗತ್ತಿನ ಸೂಪರ್ ಸ್ಟಾರ್ ಅಂತ ಶ್ಲಾಘಿಸಿದ್ದಾರೆ.

ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾದ ಎಲ್ಲಾ ಆಟಗಾರರ ಗಮನವೆಲ್ಲ ಕೊಹ್ಲಿ ಮೇಲೆಯೇ ನೆಟ್ಟಿದೆ. ಯಾಕಂದ್ರೆ, ಆಸೀಸ್ ವಿರುದ್ಧ 24 ಟೆಸ್ಟ್​ ಪಂದ್ಯಗಳನ್ನಾಡಿರುವ ಕೊಹ್ಲಿ, ಭರ್ಜರಿ 8 ಶತಕಗಳನ್ನು ಬಾರಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/wtc-final-2023-how-australian-players-described-virat-kohli-watch-video-psr-594680.html

Leave a Reply

Your email address will not be published. Required fields are marked *