WTC Final 2023: ಹೊಸ ಟೆಸ್ಟ್ ಜರ್ಸಿಯಲ್ಲಿ ಮಿರ ಮಿರ ಮಿಂಚಿದ ರೋಹಿತ್ ಪಡೆ; ಫೋಟೋ ನೋಡಿ

ಟೀಂ ಇಂಡಿಯಾದ ಕಿಟ್ ಹಾಗೂ ಜರ್ಸಿ ಪ್ರಾಯೋಜಕತ್ವವನ್ನು ಅಡಿಡಾಸ್‌ ವಹಿಸಿಕೊಂಡಿದ್ದು, ಇದೀಗ ಈ ಸಂಸ್ಥೆಯ ಲೋಗೋ ಇರುವ ಜರ್ಸಿಯನ್ನು ತೊಟ್ಟು ಮುಂದಿನ ನಾಲ್ಕು ವರ್ಷಗಳ ಕಾಲ ಟೀಂ ಇಂಡಿಯಾ ಆಟಗಾರರು ಆಡಲಿದ್ದಾರೆ. ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರು ಈ ಹೊಸ ಜರ್ಸಿಯನ್ನು ತೊಟ್ಟು ಭಿನ್ನಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ಅದರ ಝಲಕ್ ಇಲ್ಲಿದೆ.ಟೀಂ ಇಂಡಿಯಾದ ನಾಯಕತ್ವವಹಿಸಿಕೊಂಡ ಬಳಿಕ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ತಂಡವನ್ನು ರೋಹಿತ್ ಮುನ್ನಡೆಸಲ್ಲಿದ್ದಾರೆ. ಇನ್ನು ಓವಲ್ ಮೈದಾನದಲ್ಲಿ ರೋಹಿತ್, 127 ರನ್ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.ರೋಹಿತ್ ಶರ್ಮಾ ಜೊತೆ ಮತ್ತೊಬ್ಬ ಆರಂಭಿಕರಾಗಿ ಕಣಕ್ಕಿಳಿಯುವ ಜವಬ್ದಾರಿ ಹೊತ್ತಿರುವ ಗಿಲ್​ ಮೇಲೆ ಅಪಾರ ನಂಬಿಕೆ ಇಡಲಾಗಿದೆ. ಏಕೆಂದರೆ ಇತ್ತೀಚೆಗೆ ಮುಗಿದ ಐಪಿಎಲ್​ನಲ್ಲಿ ಗಿಲ್, ಅತ್ಯಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು.ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪೂಜಾರ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪೂಜಾರ ಇದುವರೆಗೆ ಆಸೀಸ್ ವಿರುದ್ಧ ಆಡಿರುವ 24 ಟೆಸ್ಟ್‌ಗಳ 43 ಇನ್ನಿಂಗ್ಸ್‌ಗಳಲ್ಲಿ 2033 ರನ್ ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 24 ಟೆಸ್ಟ್‌ಗಳ 42 ಇನ್ನಿಂಗ್ಸ್‌ಗಳಲ್ಲಿ 1979 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಸದ್ಯಕ್ಕೆ ರನ್ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.ಭಾರತ ಪರ  82 ಟೆಸ್ಟ್ ಪಂದ್ಯಗಳನ್ನಾಡಿರುವ ರಹಾನೆ 4931 ರನ್ ಕಲೆಹಾಕಿದ್ದಾರೆ. ಅಲ್ಲದೆ ರಹಾನೆ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ. ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾ 2021 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿ ಅಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.ಮೊದಲ ಬಾರಿಗೆ ಟೀಂ ಇಂಡಿಯಾದ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಇಶಾನ್ ಕಿಶನ್​ಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರೆ, ಟೀಂ ಇಂಡಿಯಾ ಪರ 3 ಮಾದರಿಗಳಲ್ಲೂ ಕಿಶನ್ ಆಡಿದ್ದಂತ್ತಾಗುತ್ತದೆ.ಇನ್ನು ಎರಡನೇ ವಿಕೆಟ್ ಕೀಪರ್ ಆಗಿ ಟೀಂ ಇಂಡಿಯಾದಲ್ಲಿ ಆಯ್ಕೆಯಾಗಿರುವ ಕೆಎಸ್​ ಭರತ್ ಕೂಡ ತಂಡದಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.ಟೀಂ ಇಂಡಿಯಾದ ಸ್ಪಿನ್ ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಡೇಜಾಗೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಜಡೇಜಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲರು.ವೇಗಿಗಳಿಗೆ ಹೆಚ್ಚಾಗಿ ನೆರವಾಗುವ ಇಂಗ್ಲೆಂಡ್ ಪಿಚ್​ಗಳಲ್ಲಿ ಟೀಂ ಇಂಡಿಯಾ ಇಬ್ಬರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದರೆ, ಜಡೇಜಾ ಜೊತೆ ಅಶ್ವಿನ್ ಕೂಡ ತಂಡದಲ್ಲಿ ಆಡಲಿದ್ದಾರೆ.ಮೂರನೇ ಸ್ಪಿನ್ ಆಲ್​ರೌಂಡರ್​ ಆಗಿ ಅಕ್ಷರ್​ ಕೂಡ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ.ವೇಗದ ಬೌಲಿಂಗ್ ದಾಳಿಯ ಹೊಣೆ ಹೊತ್ತಿರುವ ಶಮಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದಕ್ಕೆ ಕಾರಣವೂ ಇದ್ದು, ಶಮಿ ಈ ಬಾರಿಯ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ತೆಗೆದು ಪರ್ಪಲ್ ಕ್ಯಾಪ್ ಕೂಡ ಗೆದ್ದಿದ್ದರು.ಶಮಿ ಜೊತೆಗೆ ಮೊಹಮ್ಮದ್ ಸಿರಾಜ್ ಕೂಡ ವೇಗದ ಬೌಲಿಂಗ್ ವಿಭಾಗದ ಜವಬ್ದಾರಿ ಹೊರಲಿದ್ದಾರೆ. ಸಿರಾಜ್ ಟೀಂ ಇಂಡಿಯಾದ 2ನೇ ಬೌಲರ್ ಆಗಿ ಕಣಕ್ಕಿಳಿಯುವುದು ಖಚಿತ.3ನೇ ಬೌಲರ್ ಹಾಗೂ ಬೌಲಿಂಗ್ ಆಲ್​ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.ಓವಲ್ ಮೈದಾನದಲ್ಲಿ ಉತ್ತಮ ಬೌಲಿಂಗ್ ದಾಖಲೆ ಹೊಂದಿರುವ ಉಮೇಶ್ ಯಾದವ್​ಗೆ ಕಡೆ ಕ್ಷಣದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೂ ಸಿಗಬಹುದು.ಇಂಜುರಿಯಿಂದಾಗಿ ಐಪಿಎಲ್​ನಿಂದ ಹೊರಬಿದ್ದಿದ್ದ ಜಯ್​ದೇವ್ ಉನದ್ಕಟ್ ಕೂಡ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

source https://tv9kannada.com/photo-gallery/cricket-photos/wtc-final-2023-bcci-shares-first-pics-of-team-indias-wtc-final-jersey-see-pics-psr-594549.html

Leave a Reply

Your email address will not be published. Required fields are marked *