WTC Final 2023: ಭಾರತದ ವಿರುದ್ಧ ದಾಖಲೆಯ ಜೊತೆಯಾಟವನ್ನಾಡಿದ ಸ್ಮಿತ್- ಹೆಡ್..!

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ಮೊದಲ ದಿನದ ಮೊದಲ ಸೆಷನ್​ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು ಬಿಟ್ಟರೆ ಉಳಿದಂತೆ ದಿನವಿಡಿ ಆಸೀಸ್ ಬ್ಯಾಟರ್​ಗಳದ್ದೇ ಅಬ್ಬರ ಹೆಚ್ಚಾಗಿತ್ತು. ಮೊದಲ ದಿನದಲ್ಲಿ ಶತಕ ಸಿಡಿಸಿದ ಹೆಡ್ ಡಬ್ಲ್ಯುಟಿಸಿ ಫೈನಲ್​ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು.ಇದೀಗ ಎರಡನೇ ದಿನದಾಟದ ಆರಂಭದಲ್ಲೇ ಶತಕ ಪೂರೈಸಿರುವ ಸ್ಟೀವ್ ಸ್ಮಿತ್ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ 31ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದಾರೆ.ಭಾರತದ ವಿರುದ್ಧ 37 ಇನ್ನಿಂಗ್ಸ್‌ಗಳಲ್ಲಿ ಸ್ಮಿತ್ 9 ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಭಾರತದ ವಿರುದ್ಧ ಜೋ ರೂಟ್ 45 ಇನ್ನಿಂಗ್ಸ್‌ಗಳಲ್ಲಿ 9 ಶತಕ, ಗ್ಯಾರಿ ಸೋಬರ್ಸ್ 30 ಇನ್ನಿಂಗ್ಸ್‌ಗಳಲ್ಲಿ 8, ವಿವ್ ರಿಚರ್ಡ್ಸ್ 41 ಇನ್ನಿಂಗ್ಸ್‌ಗಳಲ್ಲಿ 8 ಮತ್ತು ರಿಕಿ ಪಾಂಟಿಂಗ್ 51 ಇನ್ನಿಂಗ್ಸ್‌ಗಳಲ್ಲಿ 8 ಶತಕ ಬಾರಿಸಿದ್ದಾರೆ.ಸ್ಮಿತ್ ದಾಖಲೆಯ ಶತಕ ಸಿಡಿಸಿದಲ್ಲದೆ ಟ್ರಾವಿಸ್ ಹೆಡ್ ಜೊತೆ ದಾಖಲೆಯ ಜೊತೆಯಾಟವನ್ನು ನಡೆಸಿದರು. 76 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸೀಸ್ ಇನ್ನಿಂಗ್ಸ್ ಜವಬ್ದಾರಿ ತೆಗೆದುಕೊಂಡ ಸ್ಮಿತ್ ಹಾಗೂ ಹೆಡ್ ಬರೋಬ್ಬರಿ 285ರನ್​ಗಳ ಜೊತೆಯಾಟ ನಡೆಸಿದರು.ಈ ಜೊತೆಯಾಟದ ಮೂಲಕ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಪರ ನಾಲ್ಕನೇ ವಿಕೆಟ್​ಗೆ ನಡೆದ ಅತಿ ದೊಡ್ಡ ಜೊತೆಯಾಟ ಇದಾಗಿದೆ. ಇದಲ್ಲದೆ ಸ್ಮಿತ್ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 2000 ರನ್ ಪೂರೈಸಿದ ದಾಖಲೆ ಕೂಡ ಬರೆದಿದ್ದಾರೆ. ಅಂತಿಮವಾಗಿ ಈ ಜೊತೆಯಾಟವನ್ನು ಸಿರಾಜ್ ಮುರಿಯುವಲ್ಲಿ ಯಶಸ್ವಿಯಾದರು. ತಮ್ಮ ಇನ್ನಿಂಗ್ಸ್​ನಲ್ಲಿ 174 ಎಸೆತಗಳನ್ನು ಎದುರಿಸಿದ ಹೆಡ್ 25 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 163 ರನ್ ಸಿಡಿಸಿ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.

source https://tv9kannada.com/photo-gallery/cricket-photos/wtc-final-2023-steve-smith-and-travis-head-highest-fourth-wicket-partnerships-record-for-australia-in-england-psr-596871.html

Leave a Reply

Your email address will not be published. Required fields are marked *