WTC Final: ಭಾರತ ವಿರುದ್ಧದ ಡಬ್ಲ್ಯುಟಿಸಿ ಫೈನಲ್​ಗೆ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ

WTC Final: ಭಾರತ ವಿರುದ್ಧದ ಡಬ್ಲ್ಯುಟಿಸಿ ಫೈನಲ್​ಗೆ 17 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
Australia Squad for WTC Final Australia name squad for WTC final and Ashes Tests

ಭಾರತದ (Team India) ವಿರುದ್ಧ ಲಂಡನ್‌ನ ಕಿಂಗ್‌ಸ್ಟನ್ ಓವಲ್‌ನಲ್ಲಿ ಜೂನ್ 7 ರಿಂದ 11 ರ ನಡುವೆ ನಡೆಯಲ್ಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ಗೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ತಂಡವನ್ನು ಪ್ರಕಟಿಸಿದೆ. ಡಬ್ಲ್ಯುಟಿಸಿ ಫೈನಲ್‌ಗೆ (WTC Final) ಆಸ್ಟ್ರೇಲಿಯಾ ಒಟ್ಟು 17 ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದು, ಈ ತಂಡವನ್ನು ಖಾಯಂ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಮುನ್ನಡೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ ಮುಗಿದ ಬಳಿಕ ಇದೇ ಆಸೀಸ್ ತಂಡ ಇಂಗ್ಲೆಂಡ್‌ ಎದುರು ಆಶಸ್ ಸರಣಿಯನ್ನು (Ashes series) ಆಡಲಿದೆ. ಈ ಬಾರಿ ಇಂಗ್ಲೆಂಡ್ ಆತಿಥ್ಯ ವಹಿಸಿರುವ ಆಶಸ್ ಸರಣಿಯು ಜೂನ್ 16 ರಿಂದ ಪ್ರಾರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಆಶಸ್ ಸರಣಿಗೆ  ಆಯ್ಕೆಯಾದ ಆಸ್ಟ್ರೇಲಿಯಾ ತಂಡವು ಕಾಗದದ ಮೇಲೆ ಬಹಳ ಪ್ರಬಲವಾಗಿದೆ. ಆಲ್ ರೌಂಡರ್ ಮಿಚೆಲ್ ಮಾರ್ಷ್ (Mitchell Marsh) ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದ್ದಾರೆ. ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ತಮ್ಮ ಅನುಭವಿ ಆಟಗಾರರಿಂದ ಸಂಪೂರ್ಣವಾಗಿ ಸಜ್ಜುಗೊಂಡಿದೆ.

ಡಬ್ಲ್ಯುಟಿಸಿ ಮತ್ತು ಆಶಸ್ ಸರಣಿಗೆ ಆಸೀಸ್ ಪಾಳಯದ ವೇಗದ ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಕಾಟ್ ಬೋಲ್ಯಾಂಡ್ ಅವರಂತಹ ಆಟಗಾರರು ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಟೀಂ ಇಂಡಿಯಾ ವಿರುದ್ಧ ಚೊಚ್ಚಲ ಪಂದ್ಯದಲ್ಲೇ ಛಾಪು ಮೂಡಿಸಿದ ಸ್ಪಿನ್ನರ್ ಟಾಡ್ ಮರ್ಫಿ ಈ ತಂಡದಲ್ಲಿ ಸ್ಥಾನ ಪಡೆದಿದ್ದು, ಇವರೊಂದಿಗೆ ಅನುಭವಿ ನಾಥನ್ ಲಿಯಾನ್ ಕೂಡ ಸ್ಥಾನ ಪಡೆದಿದ್ದಾರೆ. ಅದೇ ಸಮಯದಲ್ಲಿ, ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಆಲ್‌ರೌಂಡರ್‌ಗಳು ಕೂಡ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ.

 

View this post on Instagram

 

A post shared by Cricket Australia (@cricketaustralia)

RCB vs CSK Highlights IPL 2023: ಆರ್​ಸಿಬಿ ಸಾಂಘಿಕ ಹೋರಾಟ ವ್ಯರ್ಥ; ಚೆನ್ನೈಗೆ 8 ರನ್ ಜಯ

ಡೇವಿಡ್ ವಾರ್ನರ್​ಗೂ ತಂಡದಲ್ಲಿ ಸ್ಥಾನ

ಡಬ್ಲ್ಯುಟಿಸಿ ಫೈನಲ್ ಮತ್ತು ಆಶಸ್ ಸರಣಿಗೆ ಆಸ್ಟ್ರೇಲಿಯಾ ತಂಡದ ಆಯ್ಕೆಯಲ್ಲಿ ದೊಡ್ಡ ಪ್ರಶ್ನೆ ಡೇವಿಡ್ ವಾರ್ನರ್ ಕುರಿತಾಗಿತ್ತು. ವಾರ್ನರ್ ಔಟ್ ಆಫ್ ಫಾರ್ಮ್‌ನಿಂದಾಗಿ, ಅವರ ಆಯ್ಕೆಯ ಬಗ್ಗೆ ಅನುಮಾನವಿತ್ತು. ಆದರೆ, ಆಡಳಿತ ಮಂಡಳಿ ಅವರ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಅರ್ಥಾತ್ ಅವರು ಉಸ್ಮಾನ್ ಖವಾಜಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವುದನ್ನು ಕಾಣಬಹುದು. ಇವರಲ್ಲದೆ, ಮ್ಯಾಟ್ ರೆನ್ಶಾ ಮತ್ತು ಮಾರ್ಕಸ್ ಹ್ಯಾರಿಸ್ ಕೂಡ ತಮ್ಮ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಬ್ಲ್ಯುಟಿಸಿ ಫೈನಲ್ ಮತ್ತು ಆಶಸ್‌ಗಾಗಿ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ (ಉಪನಾಯಕ), ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಟ್ ರೆನ್ಶಾ, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/australia-squad-for-wtc-final-australia-name-squad-for-wtc-final-and-ashes-tests-psr-au14-559285.html

Leave a Reply

Your email address will not be published. Required fields are marked *