WTC Final, IND vs AUS: ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಹೈ ಅಲರ್ಟ್, ದಿಢೀರ್ ಬ್ಯಾಕಪ್ ಪಿಚ್ ರೆಡಿ ಮಾಡಿದ ಐಸಿಸಿ: ಯಾಕೆ ಗೊತ್ತೇ?

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂದಿನಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಶುರುವಾಗಲಿದೆ. ಒಟ್ಟು ದಿನಗಳ ಕಾಲ ನಡೆಯಲಿರುವ ಎರಡನೇ ಆವೃತ್ತಿಯ ಡಬ್ಲ್ಯೂಟಿಸಿ 2023 ಫೈನಲ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.ಆದರೀಗ ಈ ಪಂದ್ಯದ ಮೇಲೆ ಕರಿ ನೆರಳು ಬಿದ್ದಿದೆ. ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯಕ್ಕೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಐಸಿಸಿ ಬ್ಯಾಕಪ್ ಪಿಚ್ ಅನ್ನು ಕೂಡ ತಯಾರು ಮಾಡಿದೆ. ಯಾಕೆ ಗೊತ್ತೇ?.'ಜಸ್ಟ್ ಸ್ಟಾಪ್ ಆಯಿಲ್' ಕಾರ್ಯಕರ್ತರು US ನಾದ್ಯಂತ ಕ್ರೀಡಾಕೂಟಗಳಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್‌ಬಾಲ್, ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ಮತ್ತು ಪ್ರೀಮಿಯರ್ ರಗ್ಬಿ ಯೂನಿಯನ್ ಪಂದ್ಯಗಳ ಮೇಲೆ ಇದರ ಪರಿಣಾಮ ಬೀರಿದೆ.ಕಳೆದ ವಾರ ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಲಾರ್ಡ್ಸ್‌ಗೆ ತೆರಳುತ್ತಿದ್ದ ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ಬಸ್ ಅನ್ನು ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ಸೋಮವಾರ ಬೆಳಗ್ಗೆ, ತರಬೇತಿಗಾಗಿ ಓವಲ್‌ಗೆ ತೆರಳುತ್ತಿದ್ದಾಗ 'ಜಸ್ಟ್ ಸ್ಟಾಪ್ ಆಯಿಲ್' ಪ್ರತಿಭಟನೆಯಿಂದಾಗಿ ಆಸ್ಟ್ರೇಲಿಯಾ ತಂಡದ ಬಸ್ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ತಡವಾಗಿ ತಲುಪಬೇಕಾಯಿತು.ಇದೀಗ 'ಜಸ್ಟ್ ಸ್ಟಾಪ್ ಆಯಿಲ್' ಕಾರ್ಯಕರ್ತರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮೇಲೂ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಪಂದ್ಯ ನಡೆಯಲಿರುವ ಪಿಚ್​ಗೆ ಏನಾದರು ಹಾನಿಗೊಳಿಸಿದರೆ ಬ್ಯಾಕಪ್ ಪಿಚ್ ಬೇಕೆಂದು ಐಸಿಸಿ ತಯಾರು ಮಾಡಿದೆ.143 ವರ್ಷಗಳ ಇತಿಹಾಸ ಹೊಂದಿರುವ ಓವಲ್‌ ಗ್ರೌಂಡ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ ನಡೆಯುತ್ತಿದೆ. ಅಲ್ಲದೆ ಈ ಅಂಗಳದಲ್ಲಿ ಬೌಲರ್‌ಗಳಿಗೆ ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದು ಇನ್ನೂ ಗೊತ್ತಾಗದ ಸಂಗತಿ.ಈ ಪಿಚ್ ಹಿಂದೆ ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಕಳೆದ ಆರು ಪಂದ್ಯಗಳು ಇದಕ್ಕೆ ವಿರುದ್ಧವಾಗಿ ಕಂಡಿವೆ. 2016 ರಿಂದ ಓವಲ್‌ನಲ್ಲಿ ನಡೆದ ಕೊನೆಯ 6 ಟೆಸ್ಟ್‌ಗಳು ದಿನಗಳು ಕಳೆದಂತೆ ಪಿಚ್ ಕ್ರಮೇಣ ಉತ್ತಮಗೊಳ್ಳುತ್ತವೆ ಎಂದು ತೋರಿಸಿದೆ. 2021ರ ಜೂನ್‌ನಲ್ಲಿ ನಡೆದ ಮೊದಲ ಆವೃತ್ತಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಭಾರತ 8 ವಿಕೆಟ್‌ಗಳಿಂದ ಸೋಲುಂಡಿತ್ತು. ಇದೀಗ ಸತತ ಎರಡನೇ ಬಾರಿ ಫೈನಲ್ ತಲುಪಿರುವ ಟೀಮ್ ಇಂಡಿಯಾ ಚೊಚ್ಚಲ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ.

source https://tv9kannada.com/photo-gallery/cricket-photos/ind-vs-aus-wtc-final-will-get-underway-amid-threats-of-possible-disruption-from-activists-from-just-stop-oil-vb-595686.html

Leave a Reply

Your email address will not be published. Required fields are marked *