
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಅ. 15 : ಮುಂಬರುವ ವಿಧಾನ ಪರಿಷತ್ ಆಗ್ನೆಯ ಶಿಕ್ಷಕರ ಕ್ಷೇತ್ರ ಅಥವಾ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ವೈ.ಎ.ನಾರಾಯಣಸ್ವಾಮಿ ಅಭಿಮಾನಿಗಳ ಬಳಗ ಒತ್ತಾಯಿಸಿದೆ.
ವೈ. ನಾರಾಯಣಸ್ವಾಮಿ ಅಭಿಮಾನಿ ಬಳಗದಿಂದ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಿ ಈ ಒತ್ತಾಯ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೈ.ಎ. ನಾರಾಯಣಸ್ವಾಮಿ, ನಾನು ಇವತ್ತು ಚಿತ್ರದುರ್ಗಕ್ಕೆ ಭೇಟಿ ನೀಡಿ ನನ್ನ ಪಕ್ಷದ ಕಾರ್ಯಕರ್ತರು ಜೊತೆಗೆ ನನ್ನನ್ನ ಬಹಳ ದಿನಗಳಿಂದಲೂ ಕೂಡ ಬೆಂಬಲಿಸಿದ ಎಲ್ಲಾ ಶಿಕ್ಷಕ ಬಂಧುಗಳು ಕಳೆದ 20 ವರ್ಷಗಳಿಂದ ನನ್ನನ್ನ 3 ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಸದಾ ಸೇವೆಯಲ್ಲಿ ತೊಡಗಿಸಿಕೊಂಡ ಶಿಕ್ಷಕ ಬಂಧುಗಳು ಕಳೆದ ಸಲ ನಾನು ಸೋತಾಗ ಕ್ಷೇತ್ರದ ನನ್ನ ಶಿಕ್ಷಕ ಬಂಧುಗಳ ಕಷ್ಟಗಳನ್ನು ಆಲಿಸದೆ ಹೋದರೆ ಎಲ್ಲೋ ಒಂದು ಕಡೆ ಶಿಕ್ಷಕ ಬಂಧುಗಳಿಗೆ ನ್ಯಾಯ ನೀಡಿದಂತಾಗುವುದಿಲ್ಲ ಎಂಬ ಕಾರಣದಿಂದ ಇಂದು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ನನ್ನ ಅಭಿಮಾನಿ ಶಿಕ್ಷಕ ಬಂಧುಗಳನ್ನ ಭೇಟಿ ಮಾಡಿದೆ ಅವರುಗಳು ತಮ್ಮ ಕಷ್ಟ ಸುಖಗಳನ್ನ ನನ್ನ ಜೊತೆ ಹಂಚಿಕೊಂಡರು.
ರಾಜಕೀಯವಾಗಿ ಏನೆಲ್ಲ ಮಾಡಬೇಕು ಎಂಬುದನ್ನು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ಪಕ್ಷದ ತೀರ್ಮಾನದಂತೆ ಚುನಾವಣೆಗೆ ಸ್ಪರ್ಧಿಸಬೇಕೆ ಬೇಡವೇ ಎಂದು ಚಿಂತಿಸಲಾಗುತ್ತದೆ. ಈ ಭಾಗದ ಶಿಕ್ಷಕರು ಹಾಗೂ ಪದವೀಧರರು ಬಿಜೆಪಿಯ ಹಲವಾರು ಮುಖಂಡರು ಮತ್ತು ನನ್ನನ್ನು ಪ್ರೀತಿಸುವ ಅಭಿಮಾನಿಗಳು ನನ್ನ ಎಲ್ಲಾ ಚುನಾವಣೆಗಳಲ್ಲಿ ಸಾಕಷ್ಟು ಬೆಂಬಲ ನೀಡಿದ್ದಾರೆ. ಮೂರು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ನನ್ನ ಕೈಲಾದ ಮಟ್ಟಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದೇನೆ. ಶಿಕ್ಷಕರ ಕ್ಷೇತ್ರದ ಹಲವಾರು ಸಮಸ್ಯೆಗಳ ವಿರುದ್ದ ಹೋರಾಟ ನಡೆಸಿ ಶಾಶ್ವತವಾದ ಪರಿಹಾರವನ್ನು ಕಲ್ಪಿಸಲು ಶ್ರಮಿಸಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪಕ್ಷ ಅವಕಾಶ ಕೊಟ್ಟರೆ ಮತ್ತೆ ಇಲ್ಲಿಂದಲೇ ಸ್ಪರ್ಧಿಸುತ್ತೇನೆ.
ನಿಮ್ಮೆಲ್ಲರ ಅನಿಸಿಕೆಯನ್ನು ಪಕ್ಷದ ವೇದಿಕೆಯಲ್ಲಿ ತಿಳಿಸುತ್ತೇನೆ. ಅವಕಾಶ ಕೊಟ್ಟರೆ ಮುಂಬರುವ ಶಿಕ್ಷಕರ ಕ್ಷೇತ್ರ ಅಥವಾ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಯತ್ನಿಸುತ್ತೇನೆ ಎಂದು ತಿಳಿಸಿದರು.
ನಾನು ಸೋತಾಗ ಪಕ್ಷದ ಪ್ರಮುಖರ ಜೊತೆಯಲ್ಲಿ ಮಾತನಾಡದೆ ನಾನೇ ಅಭ್ಯರ್ಥಿ ಎಂದು ಕೇಳುವುದು ಹೇಳುವುದು
ಸೌಜನ್ಯವಾಗುವುದಿಲ್ಲ ಮುಂಬರುವ ದಿನಗಳಲ್ಲಿ ಪಕ್ಷದ ತೀರ್ಮಾನದಂತೆ ನಾನು ಬದ್ಧನಾಗಿರುತ್ತೇನೆ ನನ್ನೆಲ್ಲಾ ಶಿಕ್ಷಕ ಬಂಧುಗಳು ಯಾವಾಗಲೂ ನನ್ನೊಟ್ಟಿಗೆ ಇರುತ್ತೀರಿ ಎಂಬ ಭಾವನೆ ನನ್ನದಾಗಿದೆ ಜೊತೆಗೆ ನಿಮ್ಮ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತೇನೆ ಎಂಬ ಅಭಿಪ್ರಾಯ ಹೇಳಿದರು
ಈ ಸಂದರ್ಭದಲ್ಲಿ ಹಲವಾರು ಶಿಕ್ಷಕ ಸಂಘದ ಪದಾಧಿಕಾರಿಗಳು ನಿವೃತ್ತ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದು ಶಿಕ್ಷಕ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ತಮ್ಮ ಸಲಹೆಗಳನ್ನು ನೀಡಿದರು ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಎ.ಮುರಳಿ, ನಿವೃತ್ತ ಮುಖ್ಯ ಶಿಕ್ಷಕರಾದ ಜಯಣ್ಣ ಗೋವಿಂದಪ್ಪ ಲೋಕಪ್ಪ ಶಿಕ್ಷಕ ಸಂಘದ ಎಲ್ಲ ಪದಾಧಿಕಾರಿಗಳು ಮುಂತಾದವು ಉಪಸ್ಥಿತರಿದ್ದು ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಮರ್ಥವಾದ ಅಭ್ಯರ್ಥಿ ಎಂದರೆ ತಾವೇ ಆಗಬೇಕು ಎಂಬ ತಮ್ಮ ಅನಿಸಿಕೆಯನ್ನು ಸಲಹೆಗಳನ್ನು ನೀಡಿದರು.
Views: 30