KGF-3 update : ಹೊಂಬಾಳೆ ಫಿಲಂಸ್ ನಿರ್ಮಾಣ ಬ್ಲಾಕ್ಬಸ್ಟರ್ ಸಿನಿಮಾ ‘ಕೆಜಿಎಫ್’ ಸಿರೀಸ್‌ನ ಮೂರನೇ ಭಾಗದ ನಿರ್ಮಾಣದ ಕುರಿತು ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಸಮುದ್ರದಲ್ಲಿ ಮುಳುಗಿದ ರಾಕಿಭಾಯ್ ಬದುಕಿದ್ದಾನಾ.. ಇಲ್ಲವೇ..? ಎನ್ನುವ ರಹಸ್ಯ ಬಯಲು ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ..

Yash KGF 3 : ರಾಕಿಂಗ್ ಸ್ಟಾರ್ ಯಶ್ ನಟನೆಯ ಕನ್ನಡದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ‘ಕೆಜಿಎಫ್’. ಇದೀಗ ಕೆಜಿಎಫ್ 3ನೇ ಭಾಗದ ಕುರಿತು ಹೊಂಬಾಳೆ ಫಿಲಂಸ್ ವಕ್ತಾರರು ಬಿಗ್ ಅಪ್‌ಡೇಟ್ ನೀಡಿದ್ದಾರೆ. ಮಾನ್ಸ್ಟರ್ ರಾಕಿಭಾಯ್ ಸಾಮ್ರಾಜ್ಯದ ಕಥೆಯ ಮುಂದುವರೆದ ಭಾಗ 2025ರಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಹೌದು… ಡಿಸೆಂಬರ್ 21 ರಂದು ಕೆಜಿಎಫ್ ಗೆ ಐದು ವರ್ಷ ತುಂಬಲಿದೆ. ಈ ಸಮಯದಲ್ಲಿ ‘ಕೆಜಿಎಫ್ 3’ ಬಗ್ಗೆ ಹೊಂಬಾಳೆ ಫಿಲಂಸ್ ಮಾಹಿತಿ ನೀಡಲಿದೆ ಎನ್ನಲಾಗಿದೆ. ಅಲ್ಲದೆ, ‘ಕೆಜಿಎಫ್ 3’ ಗಾಗಿ ನಿರ್ದೇಶಕ, ನಿರ್ಮಾಪಕ ಮತ್ತು ನಟರ ನಡುವೆ ಆರಂಭಿಕ ಸುತ್ತಿನ ಚರ್ಚೆ ನಡೆದಿದ್ದು, ಕಥಾಹಂದರ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೆ ಅಕ್ಟೋಬರ್ 2024 ರಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು, 2025 ರಲ್ಲಿ ಚಿತ್ರ ಬಿಡುಗಡೆಯಾಗಲಿದೆ. ‘ಕೆಜಿಎಫ್ 3’ ಬಿಡುಗಡೆಯ ಬಗ್ಗೆ ಈ ವರ್ಷದ ಡಿಸೆಂಬರ್‌ನಲ್ಲಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಹೊಂಬಾಳೆ ಫಿಲಂಸ್ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ. ಜೊತೆಗೆ ‘ಸಲಾರ್ 2’, ರಿಷಬ್ ಶೆಟ್ಟಿ ಜೊತೆ ‘ಕಾಂತಾರ 2’ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆ ‘ಟೈಸನ್’ ಚಿತ್ರ ನಿರ್ಮಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
‘ಕೆಜಿಎಫ್: ಅಧ್ಯಾಯ 1’ 2018 ರಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡಿತ್ತು. ‘ಕೆಜಿಎಫ್: ಅಧ್ಯಾಯ 2’ 2022 ರಲ್ಲಿ ಬಿಡುಗಡೆಯಾಗಿ ಫ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಟ್ ಗಳಿಸಿತು. ಅಲ್ಲದೆ, ಭಾಕ್ಸ್ ಆಫಿಸ್‌ನಲ್ಲಿ ದಾಖಲೆ ಸೃಷ್ಟಿಸಿತು. ಇದೀಗ ಜಲಸಮಾಧಿಯಾಗಿರುವ ರಾಕಿಭಾಯ್ ಬದುಕಿದ್ದಾನಾ.. ಇಲ್ಲವೇ..? ಎನ್ನುವ ಕುರಿತು ತಿಳಿಯಲು KGF-3 ಗಾಗಿ ಕಾಯಬೇಕಾಗುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1