
ರಾಕಿಂಗ್ ಸ್ಟಾರ್ ಯಶ್‌ಗೆ (Yash) ಇಂದು (ಜ.8) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಫ್ಯಾನ್ಸ್‌ಗೆ ‘ಟಾಕ್ಸಿಕ್’ (Toxic) ಟೀಮ್ ಬಿಗ್ ಸರ್ಪ್ರೈಸ್ ಕೊಟ್ಟಿದೆ. ‘ಟಾಕ್ಸಿಕ್’ನಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿರುವ ಯಶ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ರಾಕಿ ಭಾಯ್ ಗೆಟಪ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ‘ಟಾಕ್ಸಿಕ್’ ತಂಡ ಈ ಮೊದಲೇ ಘೋಷಣೆ ಮಾಡಿತ್ತು. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಅಂತೆಯೇ ಇಂದು (ಜನವರಿ 8) ಬೆಳಿಗ್ಗೆ 10 ಗಂಟೆ 25 ನಿಮಿಷಕ್ಕೆ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರ ಚಿತ್ರದ ಮೇಲಿರುವ ನಿರೀಕ್ಷೆ ಈಗ ದ್ವಿಗುಣವಾಗಿದೆ. ಯಶ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಸದ್ಯ ರಿಲೀಸ್ ಆಗಿರೋದು ಒಂದು ಗ್ಲಿಂಪ್ಸ್ ಮಾತ್ರ. ಯಶ್ ಜನ್ಮದಿನದ ಪ್ರಯುಕ್ತ ಇದನ್ನು ರಿಲೀಸ್ ಮಾಡಲಾಗಿದೆ ಅಷ್ಟೇ. ಇದು ಸಿನಿಮಾದಲ್ಲಿ ಬರುವ ಒಂದು ಕ್ಲಿಪ್ ಎನ್ನಲಾಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಡ್ರಗ್ಸ್ ಬಗ್ಗೆ ಹೇಳಲಾಗುತ್ತಿದೆ ಎಂದು ಈ ಮೊದಲು ವರದಿ ಆಗಿದೆ.
‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರಡಕ್ಷನ್ಸ್ ಮೂಲಕ ವೆಂಕಟ್ ನಾರಾಯಣ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಇದನ್ನು, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡಲು ಆಲೋಚನೆ ನಡೆದಿದೆ. ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರು ಕೂಡ ಕೆಲಸ ಮಾಡುತ್ತಿದ್ದಾರೆ.