
ಚಿತ್ರದುರ್ಗ ನ. 24 : ಮಕ್ಕಳು ಅನಾರೋಗ್ಯ ದಿಂದ ಬಳಲುವ ಮತ್ತು ವಿದ್ಯಾಭ್ಯಾಸ ಮುಂದುವರಿ ಸಲು ಹಿಂದೇಟು ಹಾಕುವ ವಿದ್ಯಾರ್ಥಿಗಳಿಗೆ ಯೋಗವೇ ದಿವ್ಯ ಔಷಧವಾಗಿದೆ ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರ ಚಿತ್ತ ಉತ್ತಮ ಮನಸ್ಸು, ಸದೃಢ ದೇಹ ಮಕ್ಕಳು ಹೊಂದುವುದು ಅವಶ್ಯವಾಗಿದೆ ಹೀಗಾಗಿ ಪ್ರತಿಯೊಬ್ಬರೂ ಸಣ್ಣ ವಯಸ್ಸಿನಿಂದಲೇ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳಬೇಕು ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಯೋಗ ಪ್ರಚಾರಕ ರವಿ ಕೆ ಅಂಬೇಕರ್ ಹೇಳಿದರು.
ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಹಾಗೂ ಆಯುಷ್ ಆರೋಗ್ಯ ಮತ್ತು ಕ್ಷೇಮ ಮಂದಿರ ಜೆ ಎನ್ ಕೋಟೆ ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಮಕ್ಕಳಿಗಾಗಿ ಇಂದು ಏರ್ಪಡಿಸಿದ್ದ ಉಚಿತ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯೋಗ ತರಬೇತಿ ನೀಡಿ ಅವರು ಮಾತನಾಡುತ್ತಾ “ರೋಗದಿಂದ ಯೋಗದೆಡೆಗೆ” ಎಂಬ ಮಾತಿನಂತೆ ಹಲವಾರು ರೋಗಗಳಿಗೆ ವೈದ್ಯರು ಸೂಚಿಸುವುದು ಯೋಗ, ಯೋಗಾಸನಗಳನ್ನು. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಥೈರಾಯಿಡ್, ಮೈಗ್ರೇನ್‌ಗಳನ್ನು ಕೆಲವು ಯೋಗಾಸನಗಳು ನಿಯಂತ್ರಿಸಿ ಗುಣಮುಖರಾಗಲು ಸಹಾಯಕವಾಗಿವೆ. ಯೋಗವು ಉತ್ತಮ ಆಹಾರ ಪದ್ದತಿ ರೂಢಿಸಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ನಿದ್ರಾಹೀನತೆ ದೂರಗೊಳಿಸಿ ಉತ್ತಮ ಮನಸ್ಥಿತಿಗೆ ದಾರಿ ದೀಪವಾಗಿದೆ. ದೇಹ ಶುದ್ದಗೊಳಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶ್ವಾಸಕೋಶದ ಸಮಸ್ಯೆಗಳನ್ನು ದೂರವಾಗಿಸುತ್ತದೆ. ದೇಹದ ಸಮತೋಲನೆಯನ್ನು ಕಾಪಾಡಿ ಜೀವನದ ಗುಣಮಟ್ಟವನ್ನು ಎತ್ತಿ ಹಿಡಿಯುತ್ತದೆ. ಎಂದು ತಿಳಿಸಿದರು.

ಸುಮಾರು 150ಕ್ಕೆ ಹೆಚ್ಚು ಮಕ್ಕಳು ಭಾಗವಹಿಸಿದ್ದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸೂರ್ಯ ನಮಸ್ಕಾರ ತಾರಸನ ವೃಕ್ಷಾಸನ ಗರುಡಾಸನ ಭ್ರಮರಿ ಪ್ರಾಣಾಯಾಮ ಹಾಗೂ ಧ್ಯಾನ ಮಾಡುವ ವಿಧಾನವನ್ನು ಕಳಿಸಿಕೊಡಲಾಯಿತು
ಕಾರ್ಯಕ್ರಮದಲ್ಲಿಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಸಹ ಶಿಕ್ಷಕರಾದ ಸತೀಶಪ್ಪ ಶ್ರೀ ಲಕ್ಷ್ಮಿ, ನಿರ್ಮಲಮ್ಮ ಮತ್ತು ರವಿ ಉಪಸ್ಥಿತರಿದ್ದರು
Views: 1