ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ! ನೀವೂ ತಿಳಿಯಿರಿ

Laest update on Aadhar :ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ನವೀಕರಣಗಳು ಅಥವಾ ಅದರಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿಸಬೇಕಾದರೆ  ಏನು ಮಾಡಬೇಕು ಎನ್ನುವುದನ್ನು ಸರ್ಕಾರ ಹೇಳಿದೆ.  

Latest update on Aadhar : ಭಾರತದಲ್ಲಿ ಹೊಸ ಆಧಾರ್ ದಾಖಲಾತಿ ಮತ್ತು ಆಧಾರ್ ನವೀಕರಣಕ್ಕಾಗಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ನವೀಕರಣಗಳು ಅಥವಾ ಅದರಲ್ಲಿ ಏನಾದರೂ ಬದಲಾವಣೆಗಳನ್ನು ಮಾಡಿಸಬೇಕಾದರೆ ಹೆಚ್ಚಿಗೆ ಹಣ  ಪಾವತಿಸುವ ಅಗತ್ಯವಿಲ್ಲ. ಪತ್ರಿ ಅಪ್ಡೇಟ್ ಗೂ ಪ್ರಾಧಿಕಾರ ಇಂತಿಷ್ಟೇ ಹಣ ಎನ್ನುವುದನ್ನು ನಿಗದಿಪಡಿಸಿರುವುದರಿಂದ ಅಷ್ಟೇ ಮೊತ್ತ ಪಾವತಿಸಿದರೆ ಸಾಕು. ಒಂದು ವೇಳೆ ಕಚೇರಿ ಸಿಬ್ಬಂದಿ ಪ್ರಾಧಿಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟರೆ,  ಏನು ಮಾಡಬೇಕು ಎನ್ನುವುದನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)  ಹೇಳಿದೆ. ಅಂದರೆ, ಆಧಾರ್ ಅನ್ನು ನವೀಕರಿಸಲು ಹೆಚ್ಚಿನ ಹಣವನ್ನು ನಿಮ್ಮಿಂದ ಕೇಳಿದಾಗ ನೀವು ನಿಮ್ಮ ದೂರನ್ನು ಮೂರು ರೀತಿಯಲ್ಲಿ ಸಲ್ಲಿಸಬಹುದು.

 ದೂರು ಸಲ್ಲಿಸುವ ಬಗೆ ಹೇಗೆ? : 
– ಟೋಲ್ ಫ್ರೀ ಸಂಖ್ಯೆ 1947 ಗೆ ಕರೆ ಮಾಡಿ ಮತ್ತು ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು. 
– ಎರಡನೆಯದಾಗಿ ಇಮೇಲ್ help@uidai.gov.in . ಮೂಲಕವೂ ದೂರು ದಾಖಲಿಸಬಹುದು. 
– ಯುಐಡಿಎಐ ಲಿಂಕ್ resident.uidai.gov.in/file-complaint ನಲ್ಲಿ ನೇರವಾಗಿ ಲಾಗ್ ಇನ್ ಮಾಡುವ ಮೂಲಕ ಕೂಡಾ ದೂರು ಸಲ್ಲಿಸಬಹುದು.

ಹೊಸ ಆಧಾರ್ ನೋಂದಣಿ ಮತ್ತು MBU (5 ಮತ್ತು 15 ವರ್ಷಗಳು) ಉಚಿತವಾಗಿರುತ್ತದೆ ಎಂದು UIDAI ಹೇಳಿದೆ. ಅಲ್ಲದೆ, ಆಧಾರ್ ನವೀಕರಿಸಲು ಶುಲ್ಕವನ್ನು ನಿಗದಿಪಡಿಸಲಾಗಿದೆ. ಮನೆ ವಿಳಾಸ ಬದಲಾವಣೆಗೆ 50 ಮತ್ತು ಬಯೋಮೆಟ್ರಿಕ್ ಅಪ್‌ಡೇಟ್‌ಗೆ 50 ರೂ.  ಎಂದು ನಿಗದಿಪಡಿಸಲಾಗಿದೆ. ಆದ್ದರಿಂದ, ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಅಥವಾ ಯಾವುದೇ ಇತರ ನವೀಕರಣ ಅಥವಾ ಆಧಾರ್ ದಾಖಲಾತಿಗೆ ಹೆಚ್ಚುವರಿ ಶುಲ್ಕದ  ಬೇಡಿಕೆ ಇಟ್ಟರೆ ಟೋಲ್-ಫ್ರೀ ಸಂಖ್ಯೆ 1947 ಅನ್ನು ಬಳಸಿಕೊಂಡು ನೇರವಾಗಿ ಆಧಾರ್ ನಿರ್ವಾಹಕರನ್ನು ಸಂಪರ್ಕಿಸಬಹುದು. help@uidai.gov.in ಗೆ ಇಮೇಲ್ ಕಳುಹಿಸುವ ಮೂಲಕ ನಿಮ್ಮ ದೂರನ್ನು ದಾಖಲಿಸಬಹುದು. 

ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್‌ ಅಪ್ಡೇಟ್ : 
ಕಳೆದ ಹತ್ತು ವರ್ಷಗಳಿಂದ ಭಾರತದಲ್ಲಿ ಆಧಾರ್ ಸಂಖ್ಯೆ ವ್ಯಾಪಕವಾಗಿ ಗುರುತಿಸಲ್ಪಟ್ಟಿರುವ ಗುರುತಿನ ರೂಪವಾಗಿದೆ . ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ವಹಿಸುವ ಸುಮಾರು 1,200 ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಯೋಜನೆಗಳಲ್ಲಿ ಸೇವಾ ವಿತರಣೆಗಾಗಿ ಆಧಾರ್ ಗುರುತನ್ನು ಬಳಸಲಾಗುತ್ತದೆ. ಹೆಚ್ಚುವರಿಯಾಗಿ, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಂತಹ ಹಣಕಾಸು ಸಂಸ್ಥೆಗಳಂತಹ ಸೇವಾ ಪೂರೈಕೆದಾರರು ನೀಡುವ ಅನೇಕ ಸೇವೆಗಳು ಗ್ರಾಹಕರನ್ನು ದೃಢೀಕರಿಸಲು ಮತ್ತು ಆನ್‌ಬೋರ್ಡ್ ಮಾಡಲು ಆಧಾರ್ ಅನ್ನು ಬಳಸುತ್ತವೆ. ಆಧಾರ್ ಸಂಖ್ಯೆ ಹೊಂದಿರುವವರು ತಮ್ಮ ಆಧಾರ್ ದಾಖಲಾತಿ ಮತ್ತು ನವೀಕರಣ ನಿಯಮಗಳು, 2016 ರ ಅಡಿಯಲ್ಲಿ ತಮ್ಮ ಡೇಟಾದ ನಿಖರತೆಯನ್ನು ಕಾಪಾಡಿಕೊಳ್ಳಲು ದಾಖಲಾತಿ ದಿನಾಂಕದಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ಆಧಾರ್ ದಾಖಲೆಗಳನ್ನು ನವೀಕರಿಸಬೇಕಾಗುತ್ತದೆ. 

Source :https://zeenews.india.com/kannada/business/govt-released-latest-update-on-aadhaara-must-know-rules-171001

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *