ಬೇಸಿಗೆಯ ಧಗೆ ನೀಗಿಸಲು ಎಸಿಯೇ ಬೇಕೆಂದಿಲ್ಲ ! 6 ಸಾವಿರ ಮೌಲ್ಯದ ಈ ಸಾಧನ ಇದ್ದರೂ ಸಾಕು

Dehumidifier in Indian Market : ಹವಾನಿಯಂತ್ರಣವನ್ನು ಖರೀದಿಸುವ ಬಜೆಟ್‌ ನಿಮ್ಮ ಬಳಿ ಇಲ್ಲ ಎಂದಾದರೆ  ಎಸಿ ಬದಲು ಈ ಅಗ್ಗದ ಸಾಧನವನ್ನು ಖರೀದಿಸಬಹುದು. ಈ ಸಾಧನವು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಜನರು ಕೂಡಾ ಅದನ್ನು ಖರೀದಿಸುತ್ತಿದ್ದಾರೆ. 

Dehumidifier in Indian Market : ಬೇಸಿಗೆಯಲ್ಲಿ ಒಂದೆಡೆ ಬಿಸಿಲ ಧಗೆಯಾದರೆ, ಇನ್ನೊಂದು ಕಡೆ ಬೆವರಿನ ಕಿರಿಕಿರಿ. ಇದೀಗ ಕೆಲವು ಕಡೆಗಳಲ್ಲಿ ಮಳೆ ಸುರಿಯುತ್ತಿದ್ದರೂ ಆರ್ದ್ರ ವಾತಾವರಣ ಮುಂದುವರೆದಿದೆ.  ಈ ರೀತಿಯ ಹವಾಮಾನ ಸಾಕಷ್ಟು ತೊಂದರೆ ಉಂಟು ಮಾಡುತ್ತದೆ. ಈ ಋತುವಿನಲ್ಲಿ ಜನರು ಹವಾನಿಯಂತ್ರಣ, ಕೂಲರ್, ಫ್ಯಾನ್ ಗಳನ್ನು ಹೆಚ್ಚು ಹೆಚ್ಚು ಬಳಸುತ್ತಾರೆ. ಏಕೆಂದರೆ ತಂಪು ಗಾಳಿ ಕೆಲವೇ ನಿಮಿಷಗಳಲ್ಲಿ ಆಹ್ಲಾದಕರ ಅನುಭವ ನೀಡುತ್ತದೆ.  

ಎಸಿ  ಇಲ್ಲ ಎಂದು ನೊಂದುಕೊಳ್ಳಬೇಕಿಲ್ಲ : 
ಆದರೆ, ಮನೆಗಳಲ್ಲಿ  ಹವಾನಿಯಂತ್ರಣ ಗಳನ್ನು ಹೊಂದಿರದ ಅನೇಕ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ.  ಏಕೆಂದರೆ ಸಾಮಾನ್ಯ ಕೂಲರ್‌ಗಳು ಮತ್ತು ಫ್ಯಾನ್‌ಗಳು ತೇವಾಂಶದ ಮೇಲೆ ಹೇಳಿಕೊಳ್ಳುವಂಥಹ ಪರಿಣಾಮ ಬೀರುವುದಿಲ್ಲ.  ನಿಮ್ಮ ಮನೆಯಲ್ಲಿ ಏರ್ ಕಂಡಿಷನರ್ ಇಲ್ಲದಿದ್ದರೆ, ಅಥವಾ ಹವಾನಿಯಂತ್ರಣವನ್ನು ಖರೀದಿಸುವ ಬಜೆಟ್‌ ನಿಮ್ಮ ಬಳಿ ಇಲ್ಲ ಎಂದಾದರೆ  ಎಸಿ ಬದಲು ಈ ಅಗ್ಗದ ಸಾಧನವನ್ನು ಖರೀದಿಸಬಹುದು. ಈ ಸಾಧನವು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಜನರು ಕೂಡಾ ಅದನ್ನು ಖರೀದಿಸುತ್ತಿದ್ದಾರೆ. 

ಇದು ಯಾವ ಉತ್ಪನ್ನ?  : 
ನಾವು ಇಂದು ನಿಮಗೆ ಹೇಳಲಿರುವ ಉತ್ಪನ್ನದ ಹೆಸರು  ಡಿಹ್ಯೂಮಿಡಿಫೈಯರ್ ( Dehumidifier). ಇದು ಆರ್ದ್ರ ಶಾಖವನ್ನು ಹೀರಿಕೊಳ್ಳುತ್ತದೆ ಮತ್ತು  ಕೋಣೆಯನ್ನು ತಂಪಾಗಿರಿಸುತ್ತದೆ. ಇದರ ದೊಡ್ಡ ವೈಶಿಷ್ಟ್ಯವೆಂದರೆ, ಇದು  ಗಾತ್ರದಲ್ಲಿ ಚಿಕ್ಕದಾಗಿದೆ ಮಾತ್ರವಲ್ಲ ಬೆಲೆಯಲ್ಲಿಯೂ ಅಗ್ಗವಾಗಿದೆ. ಆರ್ದ್ರ ಶಾಖವನ್ನು ಹೀರಿಕೊಳ್ಳುವ ದೃಷ್ಟಿಯಿಂದ ಹವಾನಿಯಂತ್ರಣವನ್ನು ಕೂಡಾ ಇದು ಮೀರಿಸುತ್ತದೆ. ಇದನ್ನು ಕೇವಲ  6000 ರೂಪಾಯಿಯ ಆರಂಭಿಕ ಬೆಲೆಗೆ ಖರೀದಿಸಬಹುದು. ಇತ್ತೀಚಿನ ದಿನಗಳಲ್ಲಿ ಇಷ್ಟು ಕಡಿಮೆ ಬೆಲೆಗೆ ಕೂಲರ್ ಖರೀದಿಸುವುದು ತುಂಬಾ ಕಷ್ಟ. ಬಿಸಿಲಿನಿಂದ ಮುಕ್ತಿ ಪಡೆಯಲು ಅಥವಾ ಬೆವರಿನ ಕಿರಿಕಿರಿ ತಪ್ಪಿಸಲು ಇದು ಉತ್ತಮ ಆಯ್ಕೆಯಾಗಿದೆ. 

ಗೋಡೆ ಮೇಲೆ ಕೂಡಾ ಫಿಟ್ ಮಾಡಬಹುದು : 
ನೀವು ಮಾರುಕಟ್ಟೆಯಲ್ಲಿ ಡಿಹ್ಯೂಮಿಡಿಫೈಯರ್ ಅನ್ನು ಖರೀದಿಸಲು ಹೋದರೆ, ಅದು ವಿವಿಧ ಗಾತ್ರಗಳಲ್ಲಿ ಲಭ್ಯವಿರುತ್ತದೆ. ಇದನ್ನು ನಿಮ್ಮ ಸಣ್ಣ ಕೋಣೆಯಿಂದ ಹಾಲ್ ಮತ್ತು ಅಡುಗೆಮನೆಗೆ ಸಹ ಖರೀದಿಸಬಹುದು. ನೀವು ಅದನ್ನು ಮೇಜಿನ ಮೇಲೆ ಇರಿಸುವ ಮೂಲಕ ಬಳಸಬಹುದು. ಕೋಣೆಯ ಗೋಡೆಯ ಮೇಲೆ ಕೂಡಾ ಫಿಟ್ ಮಾಡಬಹುದು. 

ಎಲ್ಲಾ ಗಾತ್ರದಲ್ಲಿಯೂ ಲಭ್ಯ : 
ಈ ಸಾಧನವು ತುಂಬಾ ಶಕ್ತಿಯುತವಾಗಿದೆ. ಹವಾನಿಯಂತ್ರಣವನ್ನು ಖರೀದಿಸಲು ನಿಮಗೆ ಬಜೆಟ್ ಹೊಂದಿಸಲು ಸಾಧ್ಯವಾಗದಿದ್ದರೆ, ಅದನ್ನು ಖರೀದಿಸುವ ಮೂಲಕ  ಆರ್ದ್ರ ಶಾಖದಿಂದ ಪರಿಹಾರ ಪಡೆಯಬಹುದು. ಆರ್ದ್ರ ವಾತಾವರಣದಲ್ಲಿ ನೀವು ಇದನ್ನು ಬಳಸಬಹುದು. ದೊಡ್ಡ ಸ್ಥಳಾವಕಾಶದ ಜಾಗದಲ್ಲಿ ಈ ಸಾಧನವನ್ನು ಬಳಸಬೇಕಾದರೆ ದೊಡ್ಡ ಗಾತ್ರದ ಆಯ್ಕೆಗಳಲ್ಲಿಯೂ ಇದು ಲಭ್ಯವಿರುತ್ತದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/technology/use-dehumidifier-to-control-humidity-cheapest-dehumidifier-in-market-159625

Leave a Reply

Your email address will not be published. Required fields are marked *