ನೊಬೆಲ್ ವರ್ಡ್‌ ರೆಕಾರ್ಡ್ ಬರೆದ 4 ತಿಂಗಳ ಕಂದಮ್ಮ! ಹೇಗೆ ಅಂತಾ ಗೊತ್ತಾದ್ರೆ ನಿಮಗೂ ಅಚ್ಚರಿಯಾಗುತ್ತೆ!

ಕೆಲ ಮಕ್ಕಳು ಹುಟ್ಟಿದ ಕೆಲ ತಿಂಗಳಲ್ಲೇ ಹೆಚ್ಚು ಚುರುಕಿನ ಚಟುವಟಿಕೆ ಮಾಡುವುದನ್ನು ಕಾಣಬಹುದು. ಕೆಲವು ಬಾರಿ ಮಕ್ಕಳ ಬುದ್ಧಿಶಕ್ತಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ. ಇನ್ನೂ ಕೆಲ ಮಕ್ಕಳಲ್ಲಿ ಅಗತ್ಯ ವಯಸ್ಸಿಗಿಂತ ಕಡಿಮೆ ಪ್ರಮಾಣದಲ್ಲಿ ಬುದ್ಧಿಮಟ್ಟ ಬೆಳವಣಿಗೆಯಾಗುತ್ತದೆ.

ಇದೆಲ್ಲದಕ್ಕೂ ವೈಜ್ಞಾನಿಕ ಅಂಶ ಕಾರಣವಾಗಿರುತ್ತದೆ. ವಂಶಾವಳಿಯಿಂದ ಹಿಡಿದು, ಗರ್ಭಿಣಿ ಆರೋಗ್ಯ, ಪಾಲನೆಗೂ ಇದಕ್ಕೂ ಸಂಬಂಧವಿರುತ್ತದೆ. ಆದ್ರೆ ಇಲ್ಲೊಂದು ಮಗು ಕೇವಲ 4 ತಿಂಗಳಲ್ಲೇ ಅಚ್ಚರಿ ಹುಟ್ಟಿಸುವ ಜ್ಞಾಪಕ ಶಕ್ತಿ ಹೊಂದಿದ್ದು, ಈಗ ನೋಬಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದೆ.

ಹೌದು ಕೇವಲ 4 ತಿಂಗಳ ಮಗು ಈ ರೀತಿಯ ದಾಖಲೆ ಬರೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಾಗಾದರೆ ಆ ಮಗು ಯಾವ ರೀತಿಯ ಜ್ಞಾಪಕ ಶಕ್ತಿ ಹೊಂದಿದೆ? ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸುವಂತಹ ಕೆಲಸ ಆ ಕಂದಮ್ಮ ಏನು ಮಾಡಿದೆ ಎಂಬುದನ್ನು ಇಲ್ಲಿ ಹೇಳಿದ್ದೇವೆ ನೋಡಿ.

4 ತಿಂಗಳ ಮಗು ಹೆಚ್ಚೆಂದರೆ ಎಲ್ಲರ ಮುಖ ನೋಡಿ ತನ್ನ ತಂದೆ ತಾಯಿ ಯಾರೆಂದು ಗುರುತಿಸಬಲ್ಲದು, ಜೊತೆಗೆ ಹೆಸರು ಕರೆದಾಗ ಆ ಕಡೆ ತಿರುಗಬಹುದು, ಇಲ್ಲವೆ ಕಣ್ಣನ್ನು ಅತ್ತ ಇತ್ತ ಹೊರಳಿಸಬಹುದು. ಆದ್ರೆ ಈ ಮಗು 120ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಆಂಧ್ರಪ್ರದೇಶದ ನಾಡಿಗಾಮಾದಲ್ಲಿ ನಾಲ್ಕು ತಿಂಗಳ ಮಗು ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ. ಕೈವಲ್ಯ ಎಂಬ ಮಗುವಿಗೆ ಹಕ್ಕಿಗಳು ಮತ್ತು ತರಕಾರಿಗಳಿಂದ ಹಿಡಿದು ಪ್ರಾಣಿಗಳು ಸೇರಿ 120 ಫೋಟೋಗಳ ಗುರುತಿಸಲು ಸಾಧ್ಯವಾಗಿದ್ದು, ಹೊಸ ದಾಖಲೆ ಬರೆದಿದೆ.

ಕೈವಲ್ಯ “100+ ಫ್ಲ್ಯಾಷ್‌ಕಾರ್ಡ್‌ಗಳನ್ನು ಗುರುತಿಸಿದ ವಿಶ್ವದ ಮೊದಲ ನಾಲ್ಕು ತಿಂಗಳ ಮಗು” ಎಂದು ಗುರುತಿಸಲಾಗಿದೆ. ವೈರಲ್ ವಿಡಿಯೋದಲ್ಲಿ, ಆಕೆ 120 ಫ್ಲ್ಯಾಷ್‌ಕಾರ್ಡ್‌ಗಳನ್ನು ಗುರುತಿಸುತ್ತಿರುವುದು ಕಂಡುಬಂದಿದೆ. ಅದರಲ್ಲಿ 12 ಹೂವುಗಳು, 27 ಹಣ್ಣುಗಳು, 27 ತರಕಾರಿಗಳು, 27 ಪ್ರಾಣಿಗಳು ಮತ್ತು 27 ಪಕ್ಷಿಗಳು ಸೇರಿವೆ.

ಕೈವಲ್ಯಳ ಸಾಮರ್ಥ್ಯವನ್ನು ಅವಳ ತಾಯಿ ಹೇಮಾ ಮೊದಲು ಗಮನಿಸಿದ್ದರು. ಮಗುವಿನ ಕುಟುಂಬವು ಆಕೆಯ ಸಾಮರ್ಥ್ಯಗಳನ್ನು ಪ್ರದರ್ಶಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿ ನೋಬಲ್ ವರ್ಲ್ಡ್ ರೆಕಾರ್ಡ್‌ಗೆ ಕಳುಹಿಸಿದರು. ನೋಬಲ್ ವರ್ಲ್ಡ್ ರೆಕಾರ್ಡ್ಸ್ ತಂಡವು ವೀಡಿಯೊವನ್ನು ಪರಿಶೀಲಿಸಿತು ಮತ್ತು ಕೈವಲ್ಯ ಅವರ ವಿಶೇಷ ಪ್ರತಿಭೆಯನ್ನು ಪರೀಕ್ಷಿಸಿತು. ಅವರು ಆಕೆಗೆ ವಿಶೇಷ ಪ್ರಮಾಣಪತ್ರವನ್ನು ನೀಡಿದ್ದಾರೆ, ಕೇವಲ ನಾಲ್ಕು ತಿಂಗಳ ಎಳೆಯ ವಯಸ್ಸಿನಲ್ಲೇ ವಿಶ್ವದಾಖಲೆಯನ್ನು ಈ ಮಗು ಬರೆದಿರುವುದು ಪೋಷಕರಿಗೆ ಇನ್ನಿಲ್ಲದ ಸಂತಸ ತಂದಿದೆ.

ಇದು ಸಾಧ್ಯವಾಗೋದು ಹೇಗೆ?

ಮಕ್ಕಳು ಹುಟ್ಟಿದ ಬಳಿಕ ಮಾತ್ರ ಬುದ್ಧಿವಂತರಾಗಿ ಬದಲಾಗಲಾರರು, ಅವರಿಗೆ ಭ್ರೂಣಾವಸ್ಥೆಯಲ್ಲೇ ಸರಿಯಾದ ಪೋಷಣೆಯ ಅಗತ್ಯವಿರುತ್ತದೆ. ಅಂದರೆ ತಾಯಿ ಆ ಮಗುವಿನ ಪೋಷಣೆಯನ್ನ ಗರ್ಭದಲ್ಲೇ ಮಾಡಬೇಕಾಗುತ್ತದೆ. ಗರ್ಭಿಣಿಯಾಗಿದ್ದಾಗ ಆರೋಗ್ಯವಾಗಿರಿ ಮತ್ತು ಕೆಲವು ಔಷಧಗಳು ಗರ್ಭಾಶಯದಲ್ಲಿ ಸೇವಿಸಬಾರದು. ಜೊತೆಗೆ ಒಳ್ಳೆಯ ಪರಿಸರದಲ್ಲಿರುವುದರ ಜೊತೆಗೆ ಜ್ಞಾಪಕ ಶಕ್ತಿಗೆ ಸಂಬಂಧಿಸಿದ ಆಹಾರ ಸೇವನೆ ಮಗುವಿನ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಇದರ ಜೊತೆ ಭ್ರೂಣಾವಸ್ಥೆಯಲ್ಲಿ ಮಗುವಿನ ಮೆದುಳಿನಲ್ಲಿ ಸ್ಮೃತಿ ರೇಖೆಗಳು ಯಾವ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿದೆ ಎಂಬುದರ ಆಧಾರದ ಮೇಲೆ ಮಗುವಿನ ಬುದ್ಧಿಮಟ್ಟವು ನಿರ್ಧಾರವಾಗಲಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *