
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮಾ 06 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ 2025 ನೇ ಮಾರ್ಚ್ 7,8,9 ರಂದು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದ ಶ್ರೀ ಅಲ್ಲಮಪ್ರಭು ಸಂಶೋಧನ ಕೇಂದ್ರ ಸಭಾಂಗಣದಲ್ಲಿ ‘ಅರಳುವ ಪ್ರತಿಭೆ’ ಯುವ ಬರಹಗಾರರ ಶಿಬಿರವನ್ನು
ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಜ್ಯ ಕಾರ್ಯದರ್ಶಿ ಪ್ರವೀಣ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್,
ಕಳೆದ 76 ವರ್ಷಗಳಿಂದ ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ- ರಾಷ್ಟ್ರ ಶಕ್ತಿ ಎಂಬುದನ್ನು ಸಂಕಲ್ಪಿಸಿ, ರಾಷ್ಟ್ರದ ಸರ್ವೋನ್ನತಿ,
ಏಕತೆ ಮತ್ತು ಅಖಂಡತೆಗೆ ಶ್ರಮಿಸುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಜವಾಬ್ದಾರಿ
ನಿರ್ವಹಿಸುತ್ತಿರುವ ಜಗತ್ತಿನ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ.ಇಂದಿನ ವಿದ್ಯಾರ್ಥಿ ಇಂದಿನ ಪ್ರಜೆ ಶೈಕ್ಷಣಿಕ ಪರಿವಾರದಲ್ಲಿ
ಪರಿವರ್ತನೆಯ ಪ್ರಯತ್ನ ಪಕ್ಷದ ರಾಜಕಾರಣದಿಂದ ಮೇಲೇರಿ ರಾಷ್ಟ್ರ ರಾಜಕಾರಣದಲ್ಲಿ ಪಾಲ್ಗೊಳ್ಳುವ ರಾಷ್ಟ್ರ ಹಿತದ ರಾಜನೀತಿ
ರಚನಾತ್ಮಕ ಆಂದೋಲನಾತ್ಮಕ ಪ್ರಾತಿನಿಧ್ಯಾತ್ಮಕ ಕಾರ್ಯ ಪದ್ಧತಿಯ ಮೂಲಕ ಪ್ರತಿಯೊಬ್ಬ ಕಾರ್ಯಕರ್ತರು ಸ್ವಾಮಿ
ವಿವೇಕಾನಂದರು ಬಯಸಿದ ಯುವಶಕ್ತಿ ಆಗಬೇಕೆಂಬುದು ವಿದ್ಯಾರ್ಥಿ ಪರಿಷತ್ತಿನ ಆಶಯವಾಗಿದೆ ಎಂದರು.
ಈ ಯುವ ಬರಹಗಾರರ ಶಿಬಿರವು 1983 ರಿಂದ ಚಿತ್ರದುರ್ಗದಲ್ಲಿ ಪ್ರಾರಂಭಗೊಂಡು 2010ರವರೆಗೂ ಹಲವಾರು ಆವೃತ್ತಿಗಳಲ್ಲಿ
ನಾಡಿನ ಯುವ ಬರಹಗಾರರಿಗೆ ಸ್ಪೂರ್ತಿಯ ಚಿಲುಮೆಯಂತೆ ಪ್ರೇರಣೆ ನೀಡಿದ ಹೆಗ್ಗಳಿಕೆ ಇದೆ. ಇಂದಿನ ಯುವ ವಿದ್ಯಾರ್ಥಿ ಬರಹಗಾರರನ್ನು ಬರವಣಿಗೆ ಮತ್ತು ಓದಿಗೆ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವ, ರಾಷ್ಟ್ರೀಯ ಚಿಂತನೆಗಳನ್ನು ಒಳಗೊಳ್ಳುವ, ಸಾಮಾಜಿಕ ಸಂವೇದನಾಶೀಲ ಬರಹಗಾರರನ್ನಾಗಿ ರೂಪಿಸುವ ದೃಷ್ಟಿಯಿಂದ ಈ ಬರಹಗಾರರ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಕಾದಂಬರಿ ಬಿತ್ತಿ ಚಿತ್ರ ರಚನೆ- ಲೋಕೇಶ್ ಅಗಸನಕಟ್ಟೆ ರವರು, ಸಣ್ಣ ಕಥೆಗಳ ಬರವಣಿಗೆ; ವ್ಯಾಕರಣ – ಶ್ರೀ ಆರ್.
ಸತ್ಯನಾರಾಯಣ ಚಿಕ್ಕಮಗಳೂರು, ಕಾವ್ಯ-ವಸ್ತು ಸಂವೇದನೆ – ಡಾ. ಬಿ.ವಿ ವಸಂತ್ ಕುಮಾರ ರವರು, ಪತ್ರಿಕೋದ್ಯಮ ಬೆಳವಣಿಗೆ –
ಪದ್ಮನಾಭ ತುಮಕೂರು, ಸಾಮರಸ್ಯ – ಯುವ ಬರಹಗಾರರ ಕುರಿತಾಗಿ ಶ್ರೀ ವಾದಿರಾಜ ರವರು, ಮೈಕ್ರೋ ಬ್ಲಾಗಿಂಗ್- ಬೇಳೂರು
ಸುದರ್ಶನ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಹಾಗೂ ಕವಿಗೋಷ್ಠಿ ಸೇರಿದಂತೆ ಹಲವಾರು ವಿಚಾರಮಹಿ
ಅವಧಿಗಳಿರುತ್ತವೆ.
ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮ 2025ನೇ ಮಾರ್ಚ್ 07 ರಂದು ಸಂಜೆ 4:00ಕ್ಕೆ ಜರುಗಲಿದೆ. ಈ ಶಿಬಿರದ ಉದ್ಘಾಟಕರಾಗಿ
ಕಾದಂಬರಿಕಾರರಾದ ಡಾ. ಗಜಾನನ ಶರ್ಮಾರವರು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಾದ್ಯಂತದಿಂದ
75 ಹೆಚ್ಚು ಅಪೇಕ್ಷಿತ ವಿದ್ಯಾರ್ಥಿ ಬರಹಗಾರರು ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ವಿಭಾಗ ಸಂಚಾಲಕರಾದ ಗೋಪಿ, ಚಿತ್ರದುರ್ಗ ಜಿಲ್ಲಾ ಸಂಚಾಲಕ್ ಕನಕರಾಜ್, ಕೋಡಿಹಳ್ಳಿ. ರಾಜ್ಯ ಕಾರ್ಯಕಾರಿ
ಸದಸ್ಯೆ ಚಂದ್ರಕಲಾ, ನಗರ ಕಾರ್ಯದರ್ಶಿ ರಾಜು ಹೊನ್ನಮರಡಿ. ಉಪಸ್ಥಿತರಿದ್ದರು.