ರಾಷ್ಟ್ರೀಯ ಯುವಜನ ದಿನಾಚರಣೆ ಅಂಗವಾಗಿ ‘ಯುವ ಮಹೋತ್ಸವ’ ಕಾರ್ಯಕ್ರಮ.

ಮೈಸೂರು : ಶ್ರೀಮತಿ ಸರಸ್ವತಿ, ನಿರ್ದೇಶಕರು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP)ಮೈಸೂರು ರವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಂಸ್ಥೆಯು ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಪುನ ಶಾಲೆಗೆ ಸೇರಿಸುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಗುಣಾತ್ಮಕ ಶಿಕ್ಷಣ, ಹೀಗೆ ಕಾರ್ಯ ನಿರ್ವಹಿಸುತ್ತಿದೆ. ಈ ಕಾರ್ಯಕ್ರಮವನ್ನು ಯುವಜನರ ಜೀವನೋಪಾಯಕ್ಕೆ ಮಾಹಿತಿಯ ಬಲ ಮತ್ತು ಆತ್ಮಸ್ಥೈರ್ಯ ತುಂಬಲು, ವೇದಿಕೆ ಮೇಲೆ ಇರುವವರೆಲ್ಲರೂ ಕೂಡ ತಮಗೆ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಶ್ರೀ ನಾರಾಯಣ ಮೂರ್ತಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಮೈಸೂರು ಇವರು ಕ್ರೀಡಾ ಜ್ಯೋತಿಯನ್ನು ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಪ್ರಸ್ತುತ ದಿನಮಾನಗಳಲ್ಲಿ ಕೌಶಲ್ಯ ಎಂಬುದು ತುಂಬಾ ಪ್ರಮುಖವಾಗಿದ್ದು ಪ್ರತಿಯೊಬ್ಬ ಯುವಜನರು ಕೂಡ ಕೌಶಲ್ಯಗಳನ್ನು ಕಲಿಯಬೇಕು. ಇಲಾಖೆ ವತಿಯಿಂದ ಹಲವಾರು ತರಬೇತಿಗಳನ್ನು ನೀಡುತ್ತಿದ್ದು ಯುವಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು ಆರ್.ಎಲ್. ಎಚ್. ಪಿ ಸಂಸ್ಥೆಯು ಈ ತರಹದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ತುಂಬಾ ಶ್ಲಾಗನೀಯ ಎಂದು ತಿಳಿಸಿದರು.

ಶೈನಿ ಜಾಕೋಬ್, ಕಾರ್ಯಕ್ರಮ ತಜ್ಞರು ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಬೆಂಗಳೂರು ಇವರು ಮಾತನಾಡುತ್ತಾ ಮೈಸೂರಿನಲ್ಲಿ ನಾವು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬರುತ್ತಿದ್ದು ಇಂದಿನ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ. ಇಂದಿನ ಯುವಜನರು ಮೊಬೈಲ್ ಮತ್ತು ಆನ್ಲೈನ್ ಹಿಂದೆ ಬಿದ್ದು ತಮ್ಮ ಜೀವನೋಪಾಯ ಕಟ್ಟಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ನೀವು ಬಳಸುವಂತಹ ಅದೇ ಮೊಬೈಲ್ ನಲ್ಲಿ ಯುವ ಜನರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಲವಾರು ರೀತಿಯ ಮಾಹಿತಿಗಳು ದೊರೆಯುತ್ತವೆ. ಅದನ್ನು ಉಪಯೋಗಿಸಿಕೊಳ್ಳಿ. ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಎನ್ನುವಂತಹ ಆಪ್ ಇದ್ದು ಇದನ್ನು ಎಲ್ಲರೂ ನೋಡಿ ಸದುಪಯೋಗ ಪಡೆದುಕೊಳ್ಳಿರಿ ತಾವೆಲ್ಲರೂ ಉತ್ತಮ ಜೀವನವನ್ನು ಕಂಡುಕೊಂಡಲಿ ನಮಗೆ ತುಂಬಾ ಖುಷಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಂದ್ರೇಗೌಡರು ಕೆ.ಎ.ಎಸ್, ಮಾಜಿ ಆಯುಕ್ತರು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗ, ಬೆಂಗಳೂರು ವಹಿಸಿದ್ದರು ಮತ್ತು ಯುವಜನರನ್ನು ಉದ್ದೇಶಿಸಿ ಮಾತನಾಡುತ್ತಾ ಯುವಜನರು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಎದೆಗುಂದದೆ ಮುಂದೆ ಹೋಗಬೇಕು ಸರಕಾರದ ಮತ್ತು ಸಂಘ ಸಂಸ್ಥೆಗಳ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಮತ್ತು ಉತ್ತಮ ಪ್ರಜೆಯಾಗಿ ಬಾಳಬೇಕು ಎಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಸ್ಕರ್ ನಾಯಕ್, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಅಭಿಷೇಕ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ, ಡಾ.ಬೈರಲಿಂಗಯ್ಯ ಅಭಿಯಾನ ವ್ಯವಸ್ಥಾಪಕರು DAY-NULM ಮೈಸೂರು ಮಹಾನಗರ ಪಾಲಿಕೆ, ಶ್ರೀ ಜಾನ್ಸನ್ ಜೋಸೆಫ್, ಸಂಸ್ಥಾಪಕರು ಮತ್ತು ವ್ಯವಸ್ಥಾಪಕರು, ಉತ್ತಮ್ ರಬ್ಬರ್ಸ್ ಪ್ರೈ. ಲಿ. ಲೂನಾರ್ಸ್ ಕಂಪನಿ ಮೈಸೂರು, ಶ್ರೀ ಹರೀಶ್ ಸಿ.ಎಸ್.ಆರ್. ಮುಖ್ಯಸ್ಥರು ಎನ್. ಆರ್ ಫೌಂಡೇಶನ್ ಮೈಸೂರು, ಶೈನಿ ಜಾಕೋಬ್, ಕಾರ್ಯಕ್ರಮ ತಜ್ಞರು (ಕರ್ನಾಟಕ ಮತ್ತು ತಮಿಳುನಾಡು) ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಬೆಂಗಳೂರು, ಡಾ. ಮಂಜುನಾಥ್ ಎಚ್.ಡಿ., ಸೀನಿಯರ್ ಲೈವಿಲಿವುಡ್ ಸ್ಪೆಷಲಿಸ್ಟ್, ಚೈಲ್ಡ್ ಫಂಡ್ ಇಂಟರ್ನ್ಯಾಷನಲ್, ಬೆಂಗಳೂರು, ಪ್ರೊ. ಜೋಸ್ ವಿ.ಕೆ, ಕಾರ್ಯದರ್ಶಿಗಳು ಆರ್‌.ಎಲ್‌.ಎಚ್‌.ಪಿ ಸಂಸ್ಥೆ ಮೈಸೂರು ಹಾಗೂ 200 ಹೆಚ್ಚು ಯುವಜನರು ಭಾಗವಹಿಸಿದ್ದರು. ಯುವಜನರಿಗೆ ಹಲವಾರು ಕ್ರೀಡೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಗೆದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಸಂಪತ್ ಕಟ್ಟಿ ಮತ್ತು ಯೋಜನಾ ಸಂಯೋಜಕರಾದ ಜ್ಯೋತಿ ಅರ್ ಕಾರ್ಯಕ್ರಮವನ್ನು ನಿರೂಪಿಸಿ, ಸಂಸ್ಥೆಯ ಸಂಯೋಜಕರಾದ ನಾನ್ಸಿ ಮರಿಯ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *