ಮಾರ್ಚ್​ 19ರಿಂದ YouTube ನ ಹೊಸ ನಿಯಮಗಳು ಜಾರಿ; ಈ ವಿಚಾರ ಪ್ರಚಾರ ಮಾಡಿದ್ರೆ ನಿಮ್ಮ ಖಾತೆ ಢಮಾರ್!

YouTube : ಪ್ರಸ್ತುತ ಸಿಕ್ಕಾಪಟ್ಟೆ ಪ್ರಚಲಿತದಲ್ಲಿರುವ ಯೂಟ್ಯೂಬ್, ಹಲವರ ಜೀವನಕ್ಕೆ ದಾರಿದೀಪವಾಗಿದೆ ಎಂದರೂ ತಪ್ಪಗಲಾರದು. ಏಕೆಂದರೆ ಇಂದು ಲಕ್ಷಾಂತರ ಜನರಿಗೆ ಯೂಟ್ಯೂಬ್​ ಆರ್ಥಿಕ ಬೆನ್ನೆಲುಬಾಗಿದೆ. ಅಲ್ಲದೆ, ಹೊಸಬರಿಗೆ ಕೂಡ ತಮ್ಮ ಜೀವನ ಕಟ್ಟಿಕೊಳ್ಳುಲು ಅತಿದೊಡ್ಡ ವೇದಿಕೆಯಾಗಿದೆ.ಹೀಗಾಗಿ, ಪ್ರತಿ ವರ್ಷ ಯುಟ್ಯೂಬ್​ ತನ್ನ ನಿಯಗಗಳಲ್ಲಿ ಒಂದಿಷ್ಟುನ್ನು ಬದಲಾವಣೆ ಮಾಡಿಕೊಳ್ಳುತ್ತದೆ. ಆದರೀಗ ಒಂದು ಹೆಜ್ಜೆ ಮುಂದೋಗಿ ಆನ್​ಲೈನ್​ ಜೂಜಾಟ ವಿಷಯದ ಕುರಿತು ಯೂಟ್ಯೂಬ್​​ ತನ್ನ ನಿಯಮಗಳನ್ನು ಇನಷ್ಟು ಬಿಗಿಗೊಳಿಸಿದೆ.
ಹೌದು, ಆನ್​ಲೈನ್​ ಜೂಜಾಟ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ YouTube ಇದೇ ಮಾ.19ರಿಂದ ತನ್ನ ನಿಯಮಗಳಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದೆ. ಹೀಗಾಗಿ, ಪ್ರಮಾಣೀಕರಿಸದ ಜೂಜಿನ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಪ್ರಚಾರ ಮಾಡುವ ರಚನೆಕಾರರ ಖಾತೆಗಳನ್ನು ನಿರ್ಬಂಧಿಸಲಾಗುತ್ತದೆ.
ಇದರೊಂದಿಗೆ, Google ನಿಂದ ಅನುಮೋದಿಸದ ಅಂತಹ ಜೂಜಿನ ಸೇವೆಗಳು ಅಥವಾ ಅಪ್ಲಿಕೇಶನ್‌ಗಳ ಲೋಗೋವನ್ನು ತಮ್ಮ ವಿಷಯದಲ್ಲಿ ತೋರಿಸುವ ರಚನೆಕಾರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಯಮಗಳು ಮುಂದಿನ ವಾರದಿಂದ ಜಾರಿಗೆ ಬರಲಿವೆ.
ಹೀಗೆ ಮಾಡಲು ಕಾರಣವೇನು..?
ಇನ್ನು ಜೂಜಾಟ ನಿಯಂತ್ರಣದ YouTube ಬಗ್ಗೆ ವಿವರಿಸುತ್ತಾ, ” ಕ್ಯಾಸಿನೋ ಆಟಗಳು ಮತ್ತು ಜೂಜಾಟಗಳ ಆಪ್ಲಿಕೇಶನ್​ಗಳು ಯುವ ಪ್ರೇಕ್ಷರ ಮೇಲೆ ಪರಿಣಾಮ ಬಿರುತ್ತದೆ. ಯುವ ಪ್ರೇಕ್ಷರನ್ನು ಮತ್ತು ಹೊಸಬರನ್ನು ರಕ್ಷಿಸಲು ಈ ಮಾನದಂಡ ಆಗತ್ಯವಾಗಿದೆ” ಎಂದು ಹೇಳಿದೆ. ಮುಂದುವರೆದು, ಈಗಲೂ ಸಹ, YouTube ನಲ್ಲಿ ಜೂಜಿನ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಗೆ ವೀಕ್ಷಕರನ್ನು ಮರುನಿರ್ದೇಶಿಸುವುದನ್ನು ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಹೊಸ ನಿಯಮಗಳು ಜಾರಿಗೆ ಬಂದ ನಂತರ ಯಾವುದೇ ಯುಟ್ಯೂಬ್​ ರಚನೆಕಾರರು ಅಂತಹ ಯಾವುದೇ ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಖಾತರಿಯ ಆದಾಯವನ್ನು ಕ್ಲೈಮ್ ಮಾಡಿದರೆ ಅವರ ವಿಷಯವನ್ನು ಸಹ ಅಳಿಸಲಾಗುತ್ತದೆ ಎಂದು ಯುಟ್ಯೂಬ್​ ವಿವರಿಸಿದೆ.
ಈ ವಯಸ್ಸಿನವರಿಗೆ ವಿಡಿಯೋ ನಿರ್ಬಂಧ ಕ್ಯಾಸಿನೋ ಆಟಗಳು ಮತ್ತು ಜೂಜಾಟಗಳ ಆಪ್ಲಿಕೇಶನ್​ಗಳು ಹೊಂದಿರುವ ವಿಡಿಯೋಗಳು 18 ವಯಸ್ಸು ಮೇಲ್ಪಟ್ಟವರಿಗೆ ಮಾತ್ರ ವಿಡಿಯೋ ಕಾಣ ಸಿಗುತ್ತದೆ ಎಂದು ಯೂಟ್ಯೂಬ್​ ಹೇಳಿದೆ.(ಏಜೆನ್ಸೀಸ್​)

Source: https://www.vijayavani.net/youtubes-new-rules-come-into-effect-from-march-19-if-you-promote-gambling-your-account-will-be-banned

Leave a Reply

Your email address will not be published. Required fields are marked *