ಚಿತ್ರದುರ್ಗ ಆ. 02
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ನಗರದ ಜಿಲ್ಲಾ ಬಡಗಿ ಕ್ಷೇಮಾಭೀವೃದ್ದಿ ಸಂಘದ ಜಿಲ್ಲಾಧ್ಯಕ್ಷರು, ಕರ್ನಾಟಕ ಮುಸ್ಲಿಂ ಸಂಘದ ಕಾರ್ಯಾಧ್ಯಕ್ಷರಾದ ಜಾಕಿರ್ ಹುಸೇನ್ ರವರ 55 ನೇ ಹುಟ್ಟು ಹಬ್ಬದ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಹುಟ್ಟು ಹಬ್ಬದ ಅಂಗವಾಗಿ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿನ ಬಾಣಂತಿಯರಿಗೆ ಹಣ್ಣು ವಿತರಣೆ, ಡಾ.ಬಿ.ಆರ್.ಅಂಬೇಡ್ಕರ್‍ರವರ ಪ್ರತಿಮೆಗೆ ಮಾಲಾರ್ಪಣೆ, ಭೀಮಸಮುದ್ರ ರಸ್ತೆಯಲ್ಲಿನ ಬರಗೇರಮ್ಮ ಶಾಲೆಯಲ್ಲಿನ ಮಕ್ಕಳಿಗೆ ನೋಟು ಪುಸ್ತಕ ಹಾಗೂ ಪೆನ್ನು ವಿತರಣೆ, ಅಂಧ ಶಾಲಾ ಮಕ್ಕಳಿಗೆ ಅನ್ನದಾನ ಹಾಗೂ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಮಿಕ ಘಟಕದಿಂದ ಕೇಕ್ ಕತ್ತರಿಸುವುದರ ಮೂಲಕ ಆಚರಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಟಿಪ್ಪು ಖಾಸಿಂಆಲಿ, ಮುದಸಿರ್, ಸಾಧಿಕ್, ಅರುಣಾಚಾರಿ, ಜಗದೀಶ್, ಬಸವರಾಜು, ಗಂಗಾಧರ ಚಾರ್, ಎಂ.ಡಿ.ಅಸ್ಲಂ, ಸುರೇಶ್, ರಿಯಾಜ್ ಆರ್ ಕೆ. ಅಕ್ಬರ್, ಬಂಡೇಜಬೀ, ರಿಹಾನ್, ಜಗದೀಶ್, ಶಕೀಲ್, ಷರಿಧ್ ರಫಿ ಸೇರಿದಂತೆ ಇತರರು ಉಪಸ್ಥಿತರಿದ್ದರು.