Zee News ನ ಪ್ರಸಿದ್ಧ ಶೋ DNA ಈಗ ‘ಕೃಷ್ಣ’ ಖ್ಯಾತಿಯ ಸೌರಭ್ ರಾಜ್ ಜೈನ್ ಅವರೊಂದಿಗೆ..!

 ಝೀ ನ್ಯೂಸ್‌ನ ಜನಪ್ರಿಯ ಪ್ರೈಮ್ ಟೈಮ್ ನ್ಯೂಸ್ ಶೋ ‘ಡಿಎನ್‌ಎ’ ಪ್ರೋಮೊ ಬಿಡುಗಡೆಯಾಗಿದೆ. ಡಿಎನ್‌ಎಯ ಈ ಹೊಸ ಪ್ರೋಮೋವನ್ನು ನಟ ಸೌರಭ್ ರಾಜ್ ಜೈನ್ ಬಿಡುಗಡೆ ಮಾಡಿದ್ದಾರೆ. ಟಿವಿಯಲ್ಲಿ ‘ಕೃಷ್ಣ’ ಅವತಾರದಲ್ಲಿ ನಟ ಸೌರಭ್ ರಾಜ್ ಜೈನ್ ಅವರು ನಿಮ್ಮ ನೆಚ್ಚಿನ ಪ್ರೈಮ್ ಟೈಮ್ ನ್ಯೂಸ್ ಶೋ ಡಿಎನ್‌ಎ ಅನ್ನು ಪ್ರಸ್ತುತಪಡಿಸುತ್ತಾರೆ.

ನವದೆಹಲಿ:  ಝೀ ನ್ಯೂಸ್‌ನ ಜನಪ್ರಿಯ ಪ್ರೈಮ್ ಟೈಮ್ ನ್ಯೂಸ್ ಶೋ ‘ಡಿಎನ್‌ಎ’ ಪ್ರೋಮೊ ಬಿಡುಗಡೆಯಾಗಿದೆ. ಡಿಎನ್‌ಎಯ ಈ ಹೊಸ ಪ್ರೋಮೋವನ್ನು ನಟ ಸೌರಭ್ ರಾಜ್ ಜೈನ್ ಬಿಡುಗಡೆ ಮಾಡಿದ್ದಾರೆ. ಕಿರುತೆರೆಯಲ್ಲಿ ‘ಕೃಷ್ಣ’ ಅವತಾರದಲ್ಲಿ ನಟ ಸೌರಭ್ ರಾಜ್ ಜೈನ್ ಅವರು ನಿಮ್ಮ ನೆಚ್ಚಿನ ಪ್ರೈಮ್ ಟೈಮ್ ನ್ಯೂಸ್ ಶೋ ಡಿಎನ್‌ಎ ಅನ್ನು ಪ್ರಸ್ತುತಪಡಿಸುತ್ತಾರೆ.

ಡಿಎನ್‌ಎಯಲ್ಲಿನ ಪ್ರತಿಯೊಂದು ಸುದ್ದಿಯ ವಿಶ್ಲೇಷಣೆಗೆ ಅವರು ಹೊಸ ಮತ್ತು ಪಾಸಿಟಿವ್ ಬದಲಾವಣೆಗಳೊಂದಿಗೆ  ಆಯಾಮವನ್ನು ನೀಡುತ್ತಾರೆ., ನೀವು ಈಗ ಡಿಎನ್‌ಎಯಲ್ಲಿ ಹೊಸ ಶೈಲಿಯಲ್ಲಿ ಸುದ್ದಿಗಳ ಸಂಪೂರ್ಣ ವಿಶ್ಲೇಷಣೆಯನ್ನು ನೋಡಲಿದ್ದಿರಿ.ಅವರು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ‘ಡಿಎನ್‌ಎ’ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡಿಎನ್‌ಎಯ ಈ ಪ್ರೋಮೋದಲ್ಲಿ ಸೌರಭ್ ರಾಜ್ ಜೈನ್ ದೇಶದ ಹಲವು ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುವುದನ್ನು ನೀವು ಕಾಣಬಹುದಾಗಿದೆ..ಝೀ ನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಡಿಎನ್‌ಎ ಪ್ರೋಮೋವನ್ನು ಬಿಡುಗಡೆ ಮಾಡಿದ ಸೌರಭ್ ರಾಜ್ ಜೈನ್ ಅವರು ‘ಡಿಎನ್‌ಎ’ಯಲ್ಲಿ ಬರುವ ಸುದ್ದಿ ಮತ್ತು ಸುದ್ದಿಗಳ ಮಹತ್ವವನ್ನು ವಿವರಿಸುತ್ತಿದ್ದಾರೆ. ಪ್ರೋಮೊದಲ್ಲಿ ಸಾಮಾನ್ಯ ಜನರಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಸೌರಭ್ ರಾಜ್ ಜೈನ್, ಈಗ ಸಾರ್ವಜನಿಕರ ಭಾಗವಾಗಿ ಸುದ್ದಿಯಲ್ಲಿ ಮಾತನಾಡುತ್ತಾರೆ ಎಂದು ಹೇಳುತ್ತಿದ್ದಾರೆ.ಸಾಮಾನ್ಯ ಮನುಷ್ಯನಿಗೆ ಮುಖ್ಯವಾದ ಸುದ್ದಿ ಯಾವುದು, ಎನ್ನುವುದು ಸಾಮಾನ್ಯ ಮನುಷ್ಯನಿಗೆ ಮಾತ್ರ ತಿಳಿದಿದೆ. ಆದ್ದರಿಂದ ಸುದ್ದಿಯ ಪ್ರತಿಯೊಂದು ಅಂಶವನ್ನು ಪರಿಶೀಲಿಸಿದ ನಂತರ ನಿಮ್ಮ ಮುಂದೆ ತರಲಾಗುವುದು. 

ಡಿಎನ್‌ಎಯ ಹೊಸ ಪ್ರೋಮೋವನ್ನು ವೀಕ್ಷಿಸಿ

ಜೀ ನ್ಯೂಸ್‌ನ ಡಿಎನ್‌ಎ ಕಾರ್ಯಕ್ರಮದೊಂದಿಗೆ ಸೌರಭ್ ರಾಜ್ ಜೈನ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗ ಪ್ರೋಮೋದಿಂದ ಸ್ಪಷ್ಟವಾಗಿದೆ.ನಟನಾಗಿ ಸೌರಭ್ ರಾಜ್ ಜೈನ್ ಅವರ ಬೆಳವಣಿಗೆ ಅದ್ಭುತವಾಗಿದೆ.ಈಗ ಅವರು ಮೊದಲ ಬಾರಿಗೆ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸಾಕಷ್ಟು ದಿನಗಳ ಹಿಂದೆ ಚರ್ಚೆಯಾಗಿದ್ದ ಈ ವಿಷಯ ಈಗ ಸ್ಪಷ್ಟವಾಗಿದ್ದು, ಈಗ ಅವರು ಪ್ರೊಮೊದಲ್ಲಿ ಕಾಣಿಸಿಕೊಳ್ಳುವುದರ ಇದನ್ನು ಮತ್ತಷ್ಟು ಖಚಿತಪಡಿಸಿದೆ.

ಸೌರಭ್ ರಾಜ್ ಜೈನ್ ಅವರು 2004 ರಲ್ಲಿ ಟಿವಿ ಸರಣಿ ರೀಮಿಕ್ಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಆದರೆ ಕಳೆದ 19 ವರ್ಷಗಳಲ್ಲಿ ಅವರು ತಮ್ಮ ಗಂಭೀರತೆ ಮತ್ತು ಸಹಾನುಭೂತಿಯಿಂದ ಪ್ರೇಕ್ಷಕರು ಮತ್ತು ವಿಮರ್ಶಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Source : https://zeenews.india.com/kannada/india/zee-news%E2%80%99-renowned-prime-time-news-show-dna-will-now-be-presented-by-celebrated-actor-saurabh-raaj-jain-149388

Leave a Reply

Your email address will not be published. Required fields are marked *