ಅನುದಾನ ದುರ್ಬಳಕೆ ಹಾಗೂ ಕರ್ತವ್ಯ ಲೋಪ : ಹಾಸ್ಟೆಲ್ ವಾರ್ಡನ್ ಅಮಾನತು ಮಾಡಿ ಆದೇಶಿಸಿದ ಸಿಇಓ ಎಂ.ಎಸ್. ದಿವಾಕರ್

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಫೆ.06) : ಮೂರು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ದುರುಪಯೋಗಪಡಿಸಿಕೊಂಡ ಆಧಾರದ ಮೇಲೆ ಹಾಸ್ಟೆಲ್ ವಾರ್ಡನ್ ಕೇಶವಮೂರ್ತಿಯನ್ನು ಅಮಾನತು ಮಾಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಆದೇಶಿಸಿದ್ದಾರೆ.

ಮೊಳಕಾಲ್ಮೂರು ತಾಲೂಕಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ನರೇಗಾ ದಿವಸ್ ಕಾರ್ಯಕ್ರಮಕ್ಕೆ ಇದೇ ಫೆಬ್ರವರಿ 2 ರಂದು ಅನಿರೀಕ್ಷಿತವಾಗಿ ಮೊಳಕಾಲ್ಮೂರು ಪಟ್ಟಣದ ಪರಿಶಿಷ್ಟ ಪಂಗಡದ ಹಾಸ್ಟೆಲಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ದಾಸ್ತಾನು ಮತ್ತು ವಿತರಣೆ ದಾಖಲಾತಿಗಳನ್ನ ಪರಿಶೀಲಿಸಿದಾಗ, ಹಾಸ್ಟೆಲಿನ ವಾರ್ಡನ್ ಕೇಶವಮೂರ್ತಿ ರವರು ದಾಸ್ತಾನಿನಲ್ಲಿ 21ಕ್ವಿಂಟಲ್ ಅಕ್ಕಿಯಿದೆ ಎಂದು ನಮೂದಿಸಿದ್ದು, ದಾಸ್ತಾನು ಕೊಠಡಿಯಲ್ಲಿ ಪರಿಶೀಲಿಸಿದಾಗ ಒಂದು ಕ್ವಿಂಟಲ್ ಮಾತ್ರ ಅಕ್ಕಿ ಕಂಡುಬರುತ್ತದೆ.

ವಿಚಾರಿಸಿದಾಗ ಹಾಜರಿದ್ದ ಸಮಾಜ ಕಲ್ಯಾಣ  ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮೊಳಕಾಲ್ಮೂರು ರವರು ನೆನ್ನೆ ದಾಸ್ತಾನಿನಲ್ಲಿ ಅಕ್ಕಿ ಇತ್ತು ಹಾಗಾಗಿ ಸಹಿ ಮಾಡಿರುತ್ತೇನೆ ಆದರೆ ಇಂದು ಅಕ್ಕಿ ಇಲ್ಲ ಎಂದು ತಿಳಿಸಿದರು.

ಈ ಹಿಂದೆ ST ಹಾಸ್ಟೆಲ್ ವಾರ್ಡನ್ ಆಗಿದ್ದ ಇದೇ ಕೇಶವಮೂರ್ತಿ ಪಟ್ಟಣದ ಕನಕ ಪತ್ತಿನ ಸಹಕಾರ ಸಂಘಕ್ಕೆ 3 ಲಕ್ಷ ಕಿಂತ ಮೇಲ್ಪಟ್ಟು ಹಣವನ್ನು ಜಮಾ ಮಾಡಿ, ಸಂಬಂಧಿಸಿದ ಸರಬರಾಜುದಾರರಿಗೆ ದಾಸ್ತಾನು ಹಣ ಜಮಾ ಮಾಡದೆ, ತಾನೇ ಸ್ವತಃ ಬಿಡಿಸಿಕೊಂಡಿರುವ ಬಗ್ಗೆ ದಾಖಲಾತಿಗಳು ಲಭ್ಯವಾಗಿರುತ್ತವೆ.
ಒಟ್ಟಾರೆ ಪರಿಶೀಲಿಸಿದಾಗ 20 ಕ್ವಿಂಟಲ್ ಅಕ್ಕಿ  ಮತ್ತು ಹಣ ದುರುಪಯೋಗವಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.

ಕೇಶವಮೂರ್ತಿ,ವಾರ್ಡನ್, ಪರಿಶಿಷ್ಟ ಪಂಗಡ ಬಾಲಕರ ವಸತಿ ನಿಲಯ ಮೊಳಕಾಲ್ಮೂರು ಪಟ್ಟಣ, ರವರು ಸರ್ಕಾರದ ಅನುದಾನ ದುರ್ಬಳಕೆ ಹಾಗೂ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದ್ದು, ಇವರನ್ನು ತಕ್ಷಣದಿಂದಲೇ ಅಮಾನತು ಮಾಡಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಆದೇಶಿಸಿದ್ದಾರೆ.

The post ಅನುದಾನ ದುರ್ಬಳಕೆ ಹಾಗೂ ಕರ್ತವ್ಯ ಲೋಪ : ಹಾಸ್ಟೆಲ್ ವಾರ್ಡನ್ ಅಮಾನತು ಮಾಡಿ ಆದೇಶಿಸಿದ ಸಿಇಓ ಎಂ.ಎಸ್. ದಿವಾಕರ್ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/GFijLsk
via IFTTT

Views: 0

Leave a Reply

Your email address will not be published. Required fields are marked *