
ಬೆಂಗಳೂರು :ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿದ್ದು, ಉಪರಾಷ್ಟ್ರಪತಿ ಅಭ್ಯರ್ಥಿಯಾಗಿರುವ ಮಾರ್ಗರೇಟ್ ಆಳ್ವ ಅವರನ್ನು ಆಯ್ಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಬೇಕು ಎಂದು ಮಾಜಿ ಸಚಿವರಾದ ಮೊಟ್ಟಮ್ಮ ಹಾಗೂ ಬಿ. ಟಿ. ಲಲಿತ ನಾಯಕ್ ಆಶಯ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಗರೇಟ್ ಆಳ್ವಾ ಅವರನ್ನು ಒಮ್ಮತದಿಂದ ಆಯ್ಕೆ ಮಾಡಬಹುದಿತ್ತು ಈಗಲೂ ಆಡಳಿತರೂಢ ಬಿಜೆಪಿ ಸೇರಿ ಎಲ್ಲರೂ ಬೆಂಬಲಿಸುವ ಮೂಲಕ ಮುತ್ಸದ್ದಿ ಅನುಭವಿ ಮಹಿಳೆ ಮಾರ್ಗರೇಟ್ ಆಳ್ವ ಆಯ್ಕೆಯಾಗಲು ಸಹಕರಿಸಬೇಕು ಇದರಿಂದ ದೇಶದ ಎರಡು ಉನ್ನತ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ ಇತಿಹಾಸ ಸೃಷ್ಟಿಯಾಗಲಿದೆ ಎಂದರು.