ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ಕಡ್ಡಾಯ

ಬೆಂಗಳೂರು: ಶಾಲೆಗಳಲ್ಲಿ ಒಂದನೇ ತರಗತಿ ಮಕ್ಕಳನ್ನು ದಾಖಲಿಸಲು ಆಯಾ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಯೋಮಿತಿ ನಿಗದಿಪಡಿಸಿದೆ. ಶಾಲಾ ಪ್ರವೇಶ ಪ್ರಕ್ರಿಯೆ ಶೇಕಡ 90ರಷ್ಟು ಭಾಗ ಮುಕ್ತಾಯವಾದ ಮೇಲೆ ಸರ್ಕಾರ ಸುತ್ತೋಲೆಯನ್ನು ಜುಲೈ 31ಕ್ಕೆ ಪ್ರವೇಶ ಕೊನೆಯ ದಿನದಂದು ನಿಗದಿಪಡಿಸಿದೆ. ಈ ಮಧ್ಯ ವಯೋಮಿತಿ ನಿಗದಿ ಮಾಡಿರುವುದರಿಂದ ಹಾಲಿ ವಯೋಮಿತಿ ಆಗಿಲ್ಲದವರ ಪ್ರವೇಶ ಏನು ಮಾಡಬೇಕು? ಎಂಬ ಗೊಂದಲ ಹುಟ್ಟಿಕೊಂಡಿದೆ.

ಈ ಹಿಂದೆ 1 ನೆ ತರಗತಿ ದಾಖಲಾತಿಗೆ ಐದು ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳವರೆಗೆ ವಯೋಮಿತಿ ನಿಗದಿಪಡಿಸಿತ್ತು. ಇದೀಗ 1 ನೇ ತರಗತಿ ದಾಖಲಾತಿ ಮಕ್ಕಳ ಸಂಬಂಧ ಮಾಡಿದ್ದ ಎಲ್ಲಾ ಆದೇಶಗಳನ್ನು ಪಡೆದು ಮಾರ್ಪಡಿಸಿ ಹೊಸ ಆದೇಶ ಹೊರಡಿಸಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) 2009 ಮತ್ತು 2012ರ ಕಡ್ಡಾಯ ಶಿಕ್ಷಣ ನಿಯಮಗಳ ಅನುಸಾರ 1 ನೇ ತರಗತಿ ದಾಖಲಾತಿಗೆ ಮಕ್ಕಳಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆ ಸರ್ಕಾರ ಒಪ್ಪಿಗೆ ನೀಡಿ ಆದೇಶ ಹೊಸ ಆದೇಶ ಮಾಡಿದೆ.

Leave a Reply

Your email address will not be published. Required fields are marked *