
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರೂಢ ತೃಣಮೂಲ ಕಾಂಗ್ರೆಸ್ ನಲ್ಲಿ ಒಳಬೇಗುದಿ ಹೆಚ್ಚಿದೆ. ಸಿಎಂ ಮಮತಾ ಬ್ಯಾನರ್ಜಿ ಬಗ್ಗೆ ಬೇಸರ ಹೊಂದಿರುವ ಪಕ್ಷದ 38 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ. ಎಂದು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಬುಧವಾರ ಮಾತಿನ ಬಾಂಬ್ ಸಿಡಿಸಿದ್ದಾರೆ.
ಬಂಗಾಳದಲ್ಲಿ ತಮ್ಮ ಸರ್ಕಾರ ಉರುಳಿಸಲು ಆಪರೇಷನ್ ಕಮಲಕ್ಕೆ ಸಂಚು ನಡೆದಿದೆ ಎಂದು ಟಿಎಂಸಿ ವರಿಷ್ಠ ಮಮತಾ ಬ್ಯಾನರ್ಜಿ ದೂರಿದ ಮರುದಿನವೇ ಮಿಥುನ್ ಅವರಿಂದ ಈ ಹೇಳಿಕೆ ಹೊರ ಬಿದ್ದಿದ್ದು ಕುತೂಹಲ ಮೂಡಿಸಿದೆ.
ನಿಮಗೆ ಬಂಗಾಳದ ಬೇಕಿಂಗ್ ನ್ಯೂಸ್ ಕೇಳುವ ಹಂಬಲವಿದೆಯೇ? ಈ ಕ್ಷಣ ನಮ್ಮ ಸ್ನೇಹದಲ್ಲಿ ತೃಣಮೂಲ ಕಾಂಗ್ರೆಸಿನ 38 ಶಾಸಕರು ಇದ್ದಾರೆ. ಅವರೆಲ್ಲರೂ ಬಿಜೆಪಿ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ಪೈಕಿ 21 ಶಾಸಕರು ನೇರವಾಗಿ ನನ್ನ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅವರು ಯಾರು? ಏನು ಕಥೆ? ಈ ಎಲ್ಲ ವಿಷಯಗಳನ್ನು ಪತ್ತೆಹಚ್ಚುವ ಜವಾಬ್ದಾರಿ ನಿಮ್ಮದು, ಮುಂದುವರೆಯಿರಿ ಎಂದು ಸುದ್ದಿಗೋಷ್ಠಿಯಲ್ಲಿ ವರದಿಗಾರರಿಗೆ ಮಾಜಿ ಸಿನಿಮಾ ನಟ, ಹಾಲಿ ರಾಜಕಾರಣಿ ಗೋವಿಂದ ಪ್ರಚೋದಿಸಿದರು.
ಇಷ್ಟೆಲ್ಲಾ ಹೇಳಿದ ಬಳಿಕ ಉಳಿದ ರಹಸ್ಯ ಯಾಕೆ? ಅವರು ಯಾರೆಂದು ವಿವರಿಸಿ ಬಿಡಿ, ಎಂದು ಸುದ್ದಿಗಾರರು ಒತ್ತಾಯಿಸಿದಾಗ, ಟ್ರೈಲರ್ ಬಿಡುಗಡೆ ಮಾಡಿ ಎಂದು ಒತ್ತಾಯಿಸಬೇಡಿ. ಸದ್ಯಕ್ಕೆ ಮ್ಯೂಸಿಕ್ ಎಂಜಾಯ್ ಮಾಡಿ, ಎಂದು ಸಿನಿಮಾ ದಾಟಿಯಲ್ಲಿ ಉತ್ತರಿಸಿದರು.
ಅಡ್ಡದಾರಿ ಹಿಡಿದು ಮಧ್ಯಪ್ರದೇಶ ಕರ್ನಾಟಕ ಮಹಾರಾಷ್ಟ್ರ ಮುಗಿಸಿರುವ ಬಿಜೆಪಿ ಈಗ ಬಂಗಾಳಕ್ಕೆ ಬರಲು ಯತ್ನಿಸುತ್ತಿದೆ.ಛತ್ತೀಸ್ ಗಢ, ಜಾರ್ಖಂಡ್ ಕೂಡ ಅವರ ಟಾರ್ಗೆಟ್ ಇಲ್ಲಿ ಸುಸ್ಥಿರ ಆಡಳಿತ ನೀಡುತ್ತಿರುವ ಟಿಎಂಸಿಎನ್ನೇ ಕೂಡ ಛಿಧ್ರಗೊಳಿಸುವುದು ಅದರ ಸಂಚು ಎಂದು ಮಮತಾ ಟೀಕಿಸಿದ್ದರು.
ಬಂಗಾಳ ಕೊಲ್ಲಿ ದಾಟಿ ಬರುವ ದುಸ್ಸಾಹಸ ಮಾಡಬೇಡಿ ಎಂದು ನಾನು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಕರ್ನಾಟಕ ಮಹಾರಾಷ್ಟ್ರದಷ್ಟು ಸುಲಭ ಅಲ್ಲ ನಮ್ಮ ರಾಜ್ಯ ಬಂಗಾಳಕೊಲ್ಲಿ ಸಾಗರಕ್ಕಿಳಿದರೆ ನಿಮ್ಮನ್ನು ಮೊಸಳೆಗಳು ಕಚ್ಚುತ್ತವೆ. ಸುಂದರ್ ಬನ್ ರಾಯಲ್ ಬೆಂಗಾಲ್ ಟೈಗರ್ ಗಳು ನಿಮ್ಮನ್ನು ಬಿಡುವುದಿಲ್ಲ. ದಕ್ಷಿಣ ಬಂಗಾಳದ ಆನೆಗಳು ಉಜ್ಜಿ ಹಾಕುತ್ತವೆ. ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ಮಾಡಿದ್ದರು.