ಧೋನಿ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ..!

ಮಹೇಂದ್ರ ಸಿಂಗ್ ಧೋನಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್ ಗೆ ಖುಷಿ ನೀಡುತ್ತಾ ಇರುತ್ತಾರೆ. ಇದೀಗ ಧೋನಿ ಹೊಸ ಫೋಟೋವೊಂದು ವೈರಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

2020 ಆಗಸ್ಟ್ 15 ರಂದು ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಆದರೆ ಅವರು ಇನ್ನೂ ಐಪಿಎಲ್ ಆಡುತ್ತಿದ್ದಾರೆ. ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಗೆ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ.

ಸದ್ಯ ಸೋಷಿಯಲ್ ಮೀಡಿಯಾದಲ್ಕಿ ವೈರಲ್ ಆಗುತ್ತಿರುವ ಧೋನಿ ಫೋಟೋದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಸಮವಸ್ತ್ರವನ್ನು ಜಾಹೀರಾತಿಗಾಗಿ ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಂದ್ರ ಸಿಂಗ್ ಧೋನಿಗೆ ಭಾರತೀಯ ಸೇನೆಯ ಪ್ಯಾರಾ ಫೋರ್ಸ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಮಾಣಿತ ಶ್ರೇಣಿಯನ್ನು ನೀಡಿ ಗೌರವಿಸಲಾಗಿದೆ. ಅದಲ್ಲದೇ ತರಬೇತಿ ವೇಳೆ ಕಾಶ್ಮೀರದಲ್ಲಿ ಧೋನಿ ಜವಾನರೊಂದಿಗೆ ಕಾಲ ಕಳೆದಿದ್ದಾರೆ.

The post ಧೋನಿ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://suddione.com/fans-are-excited-for-dhonis-new-look/
via IFTTT

Leave a Reply

Your email address will not be published. Required fields are marked *